ಜಾತಿ ತಾರತಮ್ಯ ಆರೋಪ: IIMB ಡೀನ್, ನಿರ್ದೇಶಕರ ವಿರುದ್ಧದ ವಿಚಾರಣೆಗೆ ಹೈಕೋರ್ಟ್ ತಡೆ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಗೆ ಕಿರುಕುಳ ನೀಡಿದ ಆರೋಪಕ್ಕೆ ಸಬಂಧಿಸಿದಂತೆ ವಿಚಾರಣೆ ನಡೆಸಲು ಯಾವುದೇ ಅಧಿಕಾರ ಇಲ್ಲ ಎಂದು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರು ಇತ್ತೀಚೆಗೆ ಹೊರಡಿಸಿದ ಮಧ್ಯಂತರ ತಡೆಯಾಜ್ಞೆಯಲ್ಲಿ ಹೇಳಿದರು.
IIMP
ಭಾರತೀಯ ವ್ಯವಸ್ಥಾಪ್ರಬಂಧ ಸಂಸ್ಥೆ
Updated on

ಬೆಂಗಳೂರು: ಜಾತಿ ಆಧಾರಿತ ತಾರತಮ್ಯ ಮತ್ತು ಅವಮಾನ ಆರೋಪದಲ್ಲಿ IIMB ಮಾರ್ಕೆಟಿಂಗ್ ಸಹಾಯಕ ಪ್ರಾಧ್ಯಾಪಕರೊಬ್ಬರು ದಾಖಲಿಸಿದ ದೂರಿನ ಆಧಾರದ ಮೇಲೆ IIMB ಡೀನ್, ನಿರ್ದೇಶಕ ಮತ್ತು ಅಧ್ಯಾಪಕರ ವಿರುದ್ಧ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ (DCRE) ಆರಂಭಿಸಿದ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಕರ್ನಾಟಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳ (ನೇಮಕಾತಿ ಮೀಸಲಾತಿ ಇತ್ಯಾದಿ) ನಿಯಮಗಳು 1992 ರ ಸೆಕ್ಷನ್ 7 (ಎ) ಪ್ರಕಾರ, ಜಾತಿ ಪ್ರಮಾಣಪತ್ರವನ್ನು ಮೋಸದಿಂದ ಪಡೆದ ಮತ್ತು ವಿಚಾರಣೆ ಮಾಡಲು ಯಾವುದೇ ಅಧಿಕಾರವಿಲ್ಲದ ವ್ಯಕ್ತಿಯ ವಿರುದ್ಧ DCRE ಕಾನೂನು ಕ್ರಮ ಕೈಗೊಳ್ಳಬಹುದು. ಆದರೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಗೆ ಕಿರುಕುಳ ನೀಡಿದ ಆರೋಪಕ್ಕೆ ಸಬಂಧಿಸಿದಂತೆ ವಿಚಾರಣೆ ನಡೆಸಲು ಯಾವುದೇ ಅಧಿಕಾರ ಇಲ್ಲ ಎಂದು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರು ಇತ್ತೀಚೆಗೆ ಹೊರಡಿಸಿದ ಮಧ್ಯಂತರ ತಡೆಯಾಜ್ಞೆಯಲ್ಲಿ ಹೇಳಿದರು.

ನಿರ್ದೇಶಕರಾದ ಪ್ರೊ.ಋಷಿಕೇಶ ಟಿ.ಕೃಷ್ಣನ್, ಡೀನ್ ಅಧ್ಯಾಪಕ ಪ್ರೊ.ದಿನೇಶ್ ಕುಮಾರ್ ಮತ್ತು ಇತರ ಅಧ್ಯಾಪಕರಾದ ಪ್ರೊ.ಶ್ರೀಲತಾ ಜೊನ್ನಲಗೆದ್ದ, ಪ್ರೊ.ರಾಹುಲ್ ಡಿ, ಪ್ರೊ. ಅಶಿಶ್ ಮಿಶಅರಾ ಮತ್ತು ಪ್ರೊ. ಚೇತನ್ ಸುಬ್ರಮಣಿಯನ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಈ ಆದೇಶ ನೀಡಿತ್ತು. ಐಐಎಂಬಿಯ ಆಡಳಿತ ಮಂಡಳಿ ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ ಸಲ್ಲಿಸಿದ ಅರ್ಜಿಗೆ ಜುಲೈ 18ರಂದು ತಡೆಯಾಜ್ಞೆ ನೀಡಲಾಗಿತ್ತು.

IIMP
ಜಾತಿ ನಿಂದನೆ ಆರೋಪ: IIMB ನಿರ್ದೇಶಕ ಸೇರಿ 8 ಮಂದಿ ವಿರುದ್ಧ FIR ದಾಖಲಿಸಿದ ಪೊಲೀಸರು

ಎಲ್ಲಾ ಅರ್ಜಿದಾರರು ಗೋಪಾಲ್ ದಾಸ್ ಅವರು ಸಲ್ಲಿಸಿದ ದೂರಿನ ಆಧಾರದ ಮೇಲೆ DCREನ ಸಂಪೂರ್ಣ ಪ್ರಕ್ರಿಯೆಗಳನ್ನು ಪ್ರಶ್ನಿಸಿದ್ದಾರೆ. ಮುಂದಿನ ವಿಚಾರಣೆಯನ್ನು ಜನವರಿ 2025 ರ ಎರಡನೇ ವಾರಕ್ಕೆ ಮುಂದೂಡಲಾಯಿತು.

ಈ ಮಧ್ಯೆ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರಥಮ ಮಾಹಿತಿ ವರದಿ ದಾಖಲಿಸಿರುವವರ ವಿರುದ್ಧ ನಿರ್ದೇಶಕರು ಮತ್ತು ಇತರರು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ಅರ್ಜಿಯ ವಿಚಾರಣೆ ಇನ್ನಷ್ಟೇ ಬಾಕಿ ಇದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com