ವಿಶ್ವ-ಸುಷ್ಮಾ ದಂಪತಿ
ರಾಜ್ಯ
ಮೈಸೂರು: ಸಾಲಗಾರರ ಕಿರುಕುಳಕ್ಕೆ ನೊಂದು ವಿಡಿಯೋ ಮಾಡಿ ದಂಪತಿ ಆತ್ಮಹತ್ಯೆ
ಸಾಲಗಾರರಿಂದ ಸ್ನೇಹಿತನಿಗೆ ಕೊಡಿಸಿದ 5 ಲಕ್ಷ ರೂಪಾಯಿ ಹಣವನ್ನು ವಾಪಸ್ಸು ಕೊಡಲು ಹಿಂದೇಟು ಹಾಕಿದ್ದರಿಂದ ನೊಂದ ದಂಪತಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರು: ಸಾಲಗಾರರಿಂದ ಸ್ನೇಹಿತನಿಗೆ ಕೊಡಿಸಿದ 5 ಲಕ್ಷ ರೂಪಾಯಿ ಹಣವನ್ನು ವಾಪಸ್ಸು ಕೊಡಲು ಹಿಂದೇಟು ಹಾಕಿದ್ದರಿಂದ ನೊಂದ ದಂಪತಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಯರಗನಹಳ್ಳಿ ನಿವಾಸಿಯಾದ 34 ವರ್ಷದ ವಿಶ್ವ ಮತ್ತು 28 ವರ್ಷದ ಸುಷ್ಮಾ ಆತ್ಮಹತ್ಯೆಗೆ ಶರಣಾದ ದಂಪತಿ. ತರಕಾರಿ ವ್ಯಾಪಾರ ಮಾಡಿಕೊಂಡಿದ್ದ ವಿಶ್ವ ತನ್ನ ಸ್ನೇಹಿತ ಶಿವು ಎಂಬಾನಿಗೆ ಮತ್ತೊಬ್ಬರಿಂದ 5 ಲಕ್ಷ ರೂಪಾಯಿ ಸಾಲ ಕೊಡಿಸಿದ್ದನು. ಸಾಲ ವಾಪಸ್ಸು ಕೊಡು ಎಂದು ಕೇಳಿದ್ದಕ್ಕೆ ಶಿವು ತಕರಾರು ತೆಗೆದು ಬೆದರಿಕೆ ಹಾಕಿದ್ದಾನೆ.
ಇನ್ನು ಸಾಲಗಾರರು ವಿಶ್ವನ ಮನೆ ಮುಂದೆ ಬಂದು ಹಣ ವಾಪಸ್ ಕೊಡುವಂತೆ ಕೇಳಿದ್ದಾರೆ. ಇದರಿಂದ ನೊಂದ ವಿಶ್ವ ಪತ್ನಿ ಸುಷ್ಮಾ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆ ಸಂಬಂಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


