ಬಜೆಟ್‌ ಮೇಲೆ ನಿರೀಕ್ಷೆ ಶೂನ್ಯ: ಪ್ರಿಯಾಂಕ್ ಖರ್ಗೆ

ದೇಶ ಬಡತನ ರೇಖೆಯಲ್ಲಿ 111 ಸ್ಥಾನದಲ್ಲಿದೆ. ಹಸಿವಿನಲ್ಲಿ 113 ನೇ ಸ್ಥಾನದಲ್ಲಿದೆ. ಭ್ರಷ್ಟಾಚಾರದಲ್ಲಿ 98ನೇ ಸ್ಥಾನದಲ್ಲಿದೆ. ಹೀಗಾಗಿ ಬಜೆಟ್ ನಲ್ಲಿ ನಮ್ಮ ನಿರೀಕ್ಷೆ ಶೂನ್ಯ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಗುರುವಾರ ಹೇಳಿದರು.
ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ

ಬೆಂಗಳೂರು: ದೇಶ ಬಡತನ ರೇಖೆಯಲ್ಲಿ 111 ಸ್ಥಾನದಲ್ಲಿದೆ. ಹಸಿವಿನಲ್ಲಿ 113 ನೇ ಸ್ಥಾನದಲ್ಲಿದೆ. ಭ್ರಷ್ಟಾಚಾರದಲ್ಲಿ 98ನೇ ಸ್ಥಾನದಲ್ಲಿದೆ. ಹೀಗಾಗಿ ಬಜೆಟ್ ನಲ್ಲಿ ನಮ್ಮ ನಿರೀಕ್ಷೆ ಶೂನ್ಯ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಗುರುವಾರ ಹೇಳಿದರು.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಅವರು, ಕೇಂದ್ರ ಬಜೆಟ್ ಬಗ್ಗೆ ನಮ್ಮ ನಿರೀಕ್ಷೆ ಶೂನ್ಯ. ಕೇಂದ್ರದಿಂದ ಉದ್ಯೋಗ ಸೃಷ್ಟಿ‌ ಆಗಿದ್ಯಾ? 10 ಸಾವಿರ ಜನ ಇಸ್ರೇಲ್ ನಲ್ಲಿ‌ ಕೆಲಸ ಮಾಡ್ತಿದ್ದಾರೆ ಯಾಕೆ? ರೈತರ ಆದಾಯ ದುಪ್ಪಟ್ಟು ಮಾಡಿದ್ರಾ? ಎಂದು ವಾಗ್ದಾಳಿ ನಡೆಸಿದರು.

ಈ ಬಜೆಟ್ ಬಗ್ಗೆ ನಮಗೆ ಯಾವುದೇ ನಿರೀಕ್ಷೆ ಇಲ್ಲ. ಬಿಜೆಪಿಗರು ದೊಡ್ಡ ದೊಡ್ಡ ಮಾತು ಹೇಳುವುದಷ್ಟೇ.ಬಡವರಿಗೆ ಯಾವ ಯೋಜನೆ ತಂದಿದ್ದಾರೆ. ಫೈನಾನ್ಸ್ ಮಿನಿಸ್ಟರ್ ಕನ್ನಡಿಗರಿಂದ ಆಯ್ಕೆಯಾಗಿ ಹೋದವರು, ಆದರೆ, ಕರ್ನಾಟಕಕ್ಕೆ ಅವರ ಕೊಡುಗೆಯೇನು? ಎಂದು ಪ್ರಶ್ನಿಸಿದರು.

ಕೇಂದ್ರದಿಂದ ‌ಕನ್ನಡಿಗರಿಗೆ ಅನ್ಯಾಯ ಆಗುತ್ತಲೇ ಇದೆ. ಜಿಎಸ್ ಟಿ ಮರುಪಾವತಿಯಲ್ಲಿ ಅನ್ಯಾಯವಾಗಿದೆ. ಕಲಬುರಗಿಯಲ್ಲಿ ಇಂಡಸ್ಟ್ರೀಸ್ ಮಾಡುತ್ತೇವೆ ಎಂದಿದ್ದರು ಆಯಿತೇ? ಮೋದಿ ಗ್ಯಾರೆಂಟಿಯಲ್ಲಿ ಶೇ.50ರಷ್ಟು ಕನ್ನಡಿಗರ ಬೆವರಿದೆ. ಜಲಜೀವನ್ ಮಿಷನ್ ನಲ್ಲಿ ಶೇ.50ರಷ್ಟು ಮಂದಿಯ ಬೆವರಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com