ತೀರ್ಥಯಾತ್ರೆ ವೇಳೆ ಫೋನ್, 2.5 ಲಕ್ಷ ರೂ. ಕಳೆದುಕೊಂಡ ಬೆಂಗಳೂರಿನ ದಂಪತಿ

ಉತ್ತರ ಪ್ರದೇಶದ ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನದ ತೀರ್ಥೋದ್ಭವಕ್ಕೆ ತೆರಳಿದ್ದ ಬೆಂಗಳೂರಿನ ನಾಗರಭಾವಿ ನಿವಾಸಿ ಎಸ್.ಎಲ್.ಶಿವಾನಂದ ಹಾಗೂ ಅವರ ಪತ್ನಿ ಸುಧಾ ಕಹಿ ನೆನಪುಗಳೊಂದಿಗೆ ಮನೆಗೆ ಮರಳಿದ್ದು,
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಉತ್ತರ ಪ್ರದೇಶದ ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನದ ತೀರ್ಥೋದ್ಭವಕ್ಕೆ ತೆರಳಿದ್ದ ಬೆಂಗಳೂರಿನ ನಾಗರಭಾವಿ ನಿವಾಸಿ ಎಸ್.ಎಲ್.ಶಿವಾನಂದ ಹಾಗೂ ಅವರ ಪತ್ನಿ ಸುಧಾ ಕಹಿ ನೆನಪುಗಳೊಂದಿಗೆ ಮನೆಗೆ ಮರಳಿದ್ದು, ದುಷ್ಕರ್ಮಿಗಳು ಈ ದಂಪತಿಯ ಮೊಬೈಲ್ ಹಾಗೂ ನಗದು ದೋಚಿ ಪರಾರಿಯಾಗಿದ್ದಾರೆ.

ವಾರಣಾಸಿಯಲ್ಲಿ ಫೋನ್ ಹಾಗೂ ಹಣ ಕಳೆದುಕೊಂಡಿದ್ದ ದಂಪತಿ ಬೆಂಗಳೂರು ತಲುಪಿದ ನಂತರ ಹಳೆ ನಂಬರ್ ಗೆ ಹೊಸ ಸಿಮ್ ಕಾರ್ಡ್‌ ಖರೀದಿಸಿದ್ದಾರೆ. ಆದರೆ ಅದನ್ನು ಸಕ್ರಿಯಗೊಳಿಸಿದ ನಂತರ, ದುಷ್ಕರ್ಮಿಗಳು ಯುಪಿಐ ಮೂಲಕ ಶಿವಾನಂದ ಅವರ ಖಾತೆಯಿಂದ 2.5 ಲಕ್ಷ ರೂಪಾಯಿ ಹಣ ಕದ್ದಿದ್ದಾರೆ ಎಂದು ಅವರು ಹೇಳಿದ್ದಾರೆ.

ದಂಪತಿ ಜನವರಿ 22 ರಂದು ಬೆಂಗಳೂರಿನಿಂದ ವಾರಣಾಸಿಗೆ ತೆರಳಿದ್ದರು. ಜನವರಿ 24 ರಂದು ಬೆಳಗ್ಗೆ 8.30 ಕ್ಕೆ ಅವರು ಪವಿತ್ರ ಸ್ನಾನಕ್ಕಾಗಿ ಪ್ರಯಾಗರಾಜ್‌ನಲ್ಲಿರುವ ತ್ರಿವೇಣಿ ಸಂಗಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಕಳ್ಳರು ದಂಪತಿಯನ್ನು ಟಾರ್ಗೆಟ್ ಮಾಡಿದ್ದು, ಶಿವಾನಂದ ಮತ್ತು ಸುಧಾ ಅವರ ಬಳಿಯಿದ್ದ ಎರಡು ಮೊಬೈಲ್‌ಗಳನ್ನು 8 ಸಾವಿರ ರೂ. ನಗದು ಕದ್ದಿದ್ದಾರೆ.

ಈ ಸಂಬಂಧ ದೂರು ದಾಖಲಿಸಲು ಅವರು ಸ್ಥಳೀಯ ಪೊಲೀಸ್ ಠಾಣೆಗೆ ತೆರೆಳಿದ್ದಾರೆ. ಆದರೆ ಅವರು ದೂರು ದಾಖಲಿಸಿಕೊಂಡಿಲ್ಲ. ಅದೃಷ್ಟವಶಾತ್, ಸುಧಾ ಅವರ ಬಳಿ ಸ್ವಲ್ಪ ಹಣ ಇತ್ತು, ಅದು ಅವರು ಜನವರಿ 29 ರಂದು ಮನೆಗೆ ಮರಳಲು ಸಹಾಯ ಮಾಡಿದೆ. ಎರಡು ದಿನಗಳ ನಂತರ, ಅವರು ಹೊಸ ಸಿಮ್ ಕಾರ್ಡ್‌ ಪಡೆದಿದ್ದಾರೆ. ಅದನ್ನು ಸಕ್ರಿಯಗೊಳಿಸಿದ ನಂತರ, ಶಿವಾನಂದ ಅವರ ಖಾತೆಯಿಂದ 2.5 ಲಕ್ಷ ರೂಪಾಯಿ ವರ್ಗಾವಣೆಯಾಗಿದ್ದು, ಅವರ ಖಾತೆಯಲ್ಲಿ ಕೇವಲ 18 ರೂ. ಉಳಿದಿದೆ.

ಆರೋಪಿಗಳು ನನ್ನ ಬ್ಯಾಂಕ್ ಖಾತೆಯಿಂದ ಯುಪಿಐ ಮೂಲಕ ಹಣವನ್ನು ಡ್ರಾ ಮಾಡಿದ್ದಾರೆ. “ಸಿಮ್ ಅನ್ನು ಸಕ್ರಿಯಗೊಳಿಸಿದ ನಂತರವೇ ಈ ಅಪರಾಧ ಬೆಳಕಿಗೆ ಬಂದಿದೆ. ಆರೋಪಿಗಳು, ನನ್ನ ಮೊಬೈಲ್ ಫೋನ್ ಬಳಸಿ, ಜನವರಿ 24 ಮತ್ತು 27 ರ ನಡುವೆ ತಮ್ಮ ಖಾತೆಯಿಂದ ಹಣವನ್ನು ವರ್ಗಾಯಿಸಿದ್ದಾರೆ. ಮೊಬೈಲ್ ಆನ್ ಮಾಡಲು ಪಾಸ್‌ವರ್ಡ್ ಅಗತ್ಯವಾಗಿತ್ತು. ಆದರೆ ವಿಪರೀತದ ರಶ್ ಇದ್ದ ಕಾರಣ, ನಾನು ನನ್ನ ಫೋನ್ ಅನ್ನು ಆಪರೇಟ್ ಮಾಡುವಾಗ ಯಾರಾದರೂ ನನ್ನ ಪಾಸ್ ವರ್ಡ್ ಗಮನಿಸಿರಬಹುದು. ಈ ಸಂಬಂಧ ನಾನು ಪೊಲೀಸರು ಮತ್ತು ಬ್ಯಾಂಕ್‌ಗೆ ದೂರು ನೀಡಿದ್ದೇನೆ ಎಂದು ಅವರು ಶಿವಾನಂದ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com