ವರ್ತೂರು, ಬೆಳ್ಳಂದೂರು ಕೆರೆಗಳ ಕಾಮಗಾರಿ ಪುನರಾರಂಭಿಸುವಂತೆ ನಿವಾಸಿಗಳ ಆಗ್ರಹ

ವರ್ತೂರು ಮತ್ತು ಬೆಳ್ಳಂದೂರು ಕೆರೆಗಳ ಪುನಶ್ಚೇತನ ಕಾಮಗಾರಿ ನನೆಗುದಿಗೆ ಬಿದ್ದಿದೆ ಎಂದು ಕಾರ್ಯಕರ್ತರು ಮತ್ತು ನಿವಾಸಿಗಳು ಆರೋಪಿಸಿದ್ದಾರೆ. 
ಬೆಳ್ಳಂದೂರು ಕೆರೆಯ (ಸಾಂದರ್ಭಿಕ ಚಿತ್ರ)
ಬೆಳ್ಳಂದೂರು ಕೆರೆಯ (ಸಾಂದರ್ಭಿಕ ಚಿತ್ರ)

ಬೆಂಗಳೂರು: ವರ್ತೂರು ಮತ್ತು ಬೆಳ್ಳಂದೂರು ಕೆರೆಗಳ ಪುನಶ್ಚೇತನ ಕಾಮಗಾರಿ ನನೆಗುದಿಗೆ ಬಿದ್ದಿದೆ ಎಂದು ಕಾರ್ಯಕರ್ತರು ಮತ್ತು ನಿವಾಸಿಗಳು ಆರೋಪಿಸಿದ್ದಾರೆ. 

ಮಳೆ ಬಂದಾಗ ಚರಂಡಿ ನೀರು ಹರಿದು ವರ್ತೂರು ಕೆರೆ ಒಡೆದು ಹೋಗಿದ್ದು, ಇದೀಗ ಕೆರೆ ಪ್ರದೇಶದಲ್ಲಿ ಮಲಿನಕಾರಕ ಅಂಶಗಳು ತುಂಬಿವೆ. ರಾಜ್ಯ ಸರ್ಕಾರ ಶೀಘ್ರದಲ್ಲಿ ಜಲಮೂಲಗಳನ್ನು ಪುನಶ್ಚೇತನಗೊಳಿಸಬೇಕು ಎಂದು ಅಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ.

ವರ್ತೂರು ಟ್ಯಾಂಕ್ ಬರಿದಾಗಿದ್ದು, ಶೇ.95 ರಷ್ಟು ಹೂಳು ತೆಗೆಯಲಾಗಿದೆ. ಬೆಳ್ಳಂದೂರು ಕೆರೆಯಲ್ಲಿ ಶೇ.55ರಷ್ಟು ಹೂಳು ತೆಗೆದಿದ್ದರೂ ಐದು ತಿಂಗಳಿಂದ ಕಾಮಗಾರಿ ನನೆಗುದಿಗೆ ಬಿದ್ದಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ವರ್ತೂರು ಕೆರೆ ಒಡೆದು ಕಾಮಗಾರಿಯೆಲ್ಲ ವ್ಯರ್ಥವಾಗಿತ್ತು ಎಂದು ವರ್ತೂರು ರೈಸಿಂಗ್ ನ ಜಗದೀಶ್ ರೆಡ್ಡಿ ಅವರು ಹೇಳಿದ್ದಾರೆ.

ಅಧಿಕಾರಿಗಳು ವರ್ತೂರು ಕೆರೆಯ ಕಾಮಗಾರಿಯನ್ನು ತ್ವರಿತಗೊಳಿಸಿದ್ದರೆ, ಇಷ್ಟೊತ್ತಿಗಾಗಲೇ ಜೌಗು ಪ್ರದೇಶ ಸುಧಾರಣೆಯಾಗಬಹುದಿತ್ತು. ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ಬೆಂಗಳೂರಿನ ಎರಡು ದೊಡ್ಡ ಜಲಮೂಲಗಳ ಪುನಶ್ಚೇತನಕ್ಕೆ ಕಾಲಮಿತಿಯ ಕ್ರಿಯಾ ಯೋಜನೆಯನ್ನು ನಿಗದಿಪಡಿಸಿದ್ದರೂ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕಾಮಗಾರಿ ಪೂರ್ಣಗೊಳಿಸುವಲ್ಲಿ ವಿಫಲವಾಗಿದೆ ಎಂದು ಅವರು ದೂರಿದ್ದಾರೆ.

ಮುಂಗಾರು ವಿಫಲವಾದ ಕಾರಣ ಬಿಡಿಎ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬಹುದಿತ್ತು. ಹೊಸ ಸರ್ಕಾರ ಅಧಿಕಾರ ವಹಿಸಿಕೊಂಡಿರುವುದರಿಂದ ಮತ್ತು ಹೊಸ ಬಿಡಿಎ ಅಧ್ಯಕ್ಷರನ್ನು ನೇಮಕ ಮಾಡಿರುವುದರಿಂದ ಪುನಶ್ಚೇತನ ಕಾಮಗಾರಿ ಮತ್ತೆ ಆರಂಭವಾಗುತ್ತದೆ ಎಂದು ಭಾವಿಸುತ್ತೇವೆ” ಎಂದು ರೆಡ್ಡಿ ತಿಳಿಸಿದ್ದಾರೆ.

ಇನ್ನು 25 ಎಂಎಲ್‌ಡಿ ಸಾಮರ್ಥ್ಯದ ಕೊಳಚೆ ನೀರು ಸಂಸ್ಕರಣಾ ಘಟಕಕ್ಕೆ ಸರ್ಕಾರ ಪ್ರಸ್ತಾವನೆ ಸಲ್ಲಿಸಿದ್ದರೂ ಕಾಮಗಾರಿ ಆರಂಭವಾಗಿಲ್ಲ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

ಬೆಳ್ಳಂದೂರಿನಲ್ಲಿ ಕೆಲವೇ ವಾರಗಳ ಹಿಂದೆ ಕೆಲಸ ಪುನರಾರಂಭವಾಗಿದೆ ಮತ್ತು ಬೇಸಿಗೆ ಅಂತ್ಯದ ವೇಳೆಗೆ ಸುಮಾರು ಶೇ. 80 ರಷ್ಟು ಹೂಳು ತೆಗೆಯುವ ಕಾರ್ಯ ಪೂರ್ಣಗೊಳಿಸಲಾಗುವುದು ಎಂದು ಈ ಜಲಮೂಲಗಳಲ್ಲಿ ಹೂಳು ತೆಗೆಯುವ ಕಾರ್ಯದ ಮೇಲ್ವಿಚಾರಣೆ ವಹಿಸಿಕೊಂಡಿರುವ ಬಿಡಿಎ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಎಸ್.ಎಸ್.ಅರವಿಂದ್ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com