ಬೆಂಗಳೂರಿನ ಮೊದಲ ಚಾಲಕ ರಹಿತ ರೈಲು ಚೀನಾದಿಂದ ಚೆನ್ನೈಗೆ ಆಗಮನ; ನಾಳೆ ಬೆಂಗಳೂರಿಗೆ ರವಾನೆ ಸಾಧ್ಯತೆ

ಬೆಂಗಳೂರಿನ ನಮ್ಮ ಮೆಟ್ರೋಗೆ ಮೊದಲ ಚಾಲಕ ರಹಿತ ರೈಲು ಶಾಂಘೈನಿಂದ ಚೆನ್ನೈ ಬಂದರಿಗೆ ಬಂದು ತಲುಪಿದೆ. ಕಸ್ಟಮ್ಸ್ ಕ್ಲಿಯರೆನ್ಸ್ ನಂತರ, ರೈಲನ್ನು ರಸ್ತೆ ಮೂಲಕ ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ತರಲಾಗುತ್ತದೆ, ಆರು ಬೋಗಿಗಳನ್ನು ಟ್ರೇಲರ್‌ಗಳ ಮೂಲಕ ಸಾಗಿಸಲಾಗುತ್ತದೆ.
ಬೆಂಗಳೂರು ಮೆಟ್ರೋಗಾಗಿ ಮೊದಲ ಚಾಲಕ ರಹಿತ ರೈಲು ಮಂಗಳವಾರ ಚೆನ್ನೈ ಬಂದರಿಗೆ ಹಡಗಿನ ಮೂಲಕ ತಲುಪಿದೆ.
ಬೆಂಗಳೂರು ಮೆಟ್ರೋಗಾಗಿ ಮೊದಲ ಚಾಲಕ ರಹಿತ ರೈಲು ಮಂಗಳವಾರ ಚೆನ್ನೈ ಬಂದರಿಗೆ ಹಡಗಿನ ಮೂಲಕ ತಲುಪಿದೆ.

ಬೆಂಗಳೂರು: ಬೆಂಗಳೂರಿನ ನಮ್ಮ ಮೆಟ್ರೋಗೆ ಮೊದಲ ಚಾಲಕ ರಹಿತ ರೈಲು ಶಾಂಘೈನಿಂದ ಚೆನ್ನೈ ಬಂದರಿಗೆ ಬಂದು ತಲುಪಿದೆ. 

ಕಸ್ಟಮ್ಸ್ ಕ್ಲಿಯರೆನ್ಸ್ ನಂತರ, ರೈಲನ್ನು ರಸ್ತೆ ಮೂಲಕ ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ತರಲಾಗುತ್ತದೆ, ಆರು ಬೋಗಿಗಳನ್ನು ಟ್ರೇಲರ್‌ಗಳ ಮೂಲಕ ಸಾಗಿಸಲಾಗುತ್ತದೆ.

ಚೀನಾ-ಮಾಲೀಕತ್ವದ ಸಿಆರ್‌ಆರ್‌ಸಿ ನಾನ್‌ಜಿಂಗ್ ಪುಜೆನ್ ಕಂ. ಲಿಮಿಟೆಡ್‌ನಿಂದ ತಯಾರಿಸಲ್ಪಟ್ಟ ಈ ರೈಲು, ಆರ್‌ವಿ ರಸ್ತೆ-ಬೊಮ್ಮಸಂದ್ರ ಲೈನ್‌ಗೆ ಪ್ರಾಯೋಗಿಕ ಸಂಚಾರ ನಡೆಸುತ್ತದೆ, ಚೆನ್ನೈ ಬಂದರಿನ ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು. 

ಜನವರಿ 24 ರಂದು ಶಾಂಘೈ ಬಂದರಿನಿಂದ ಕಳುಹಿಸಲಾದ ಸಾಗಣೆಯು ನಿನ್ನೆ ಬೆಳಗ್ಗೆ 11 ಗಂಟೆಗೆ  ಜವಾಹರ್ ಡೆಕ್ -2ನ್ನು ತಲುಪಿತು. ಇದು ಎಂವಿ ಸ್ಪ್ರಿಂಗ್ ಮೋಟಾ ಹಡಗಿನಲ್ಲಿ ಬಂದಿತು. ಪ್ರತಿ ಕೋಚ್ 38.7 ಮೆಟ್ರಿಕ್ ಟನ್ ತೂಗುತ್ತದೆ. ನೌಕೆಯು ಜನವರಿ 24 ರಂದು ತನ್ನ ಪ್ರಯಾಣವನ್ನು ಪ್ರಾರಂಭಿಸಿ ಚೆನ್ನೈ ತಲುಪಲು ಎರಡು ವಾರಗಳನ್ನು ತೆಗೆದುಕೊಂಡಿತು ಎಂದು ಅವರು ಹೇಳಿದರು.

<strong>ಚೆನ್ನೈ ಬಂದರಿಗೆ ಬಂದಿರುವ ಬೋಗಿಗಳು</strong>
ಚೆನ್ನೈ ಬಂದರಿಗೆ ಬಂದಿರುವ ಬೋಗಿಗಳು

ಇದನ್ನು ಯುನಿಟ್ರಾನ್ಸ್ ಶಿಪ್ಪಿಂಗ್ ಮತ್ತು ಟ್ರೇಡಿಂಗ್ ಪ್ರೈವೇಟ್ ಲಿಮಿಟೆಡ್ ರವಾನೆ ಮಾಡಿದೆ. ಕಂಪನಿಯ ಪ್ರತಿನಿಧಿಯೊಬ್ಬರು, ನಾವು ಇಂದು ರಾತ್ರಿ ಮತ್ತು ನಾಳೆ ಕೋಚ್‌ಗಳನ್ನು ಬಿಡುಗಡೆ ಮಾಡುತ್ತೇವೆ. ಇಂದು ಬುಧವಾರ ಮಧ್ಯಾಹ್ನ 12 ಗಂಟೆಯೊಳಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಕಸ್ಟಮ್ಸ್ ಕ್ಲಿಯರೆನ್ಸ್ ಒಂದು ದಿನ ತೆಗೆದುಕೊಳ್ಳುತ್ತದೆ. ನಾಳೆ ವೇಳೆಗೆ ಟ್ರೇಲರ್‌ಗಳ ಮೂಲಕ ಸಾಗಣೆಯು ಬೆಂಗಳೂರಿಗೆ ಹೊರಡಲಿದೆ ಎಂದರು. 

ಫೆಬ್ರವರಿ 20 ರೊಳಗೆ ಕೋಚ್‌ಗಳು ಬೆಂಗಳೂರಿನ ಡಿಪೋಗೆ ತಲುಪುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ ಮಹೇಶ್ವರ್ ರಾವ್ ಮಾತನಾಡಿ, ಸಿಆರ್‌ಆರ್‌ಸಿಯಿಂದ ಐವರು ಎಂಜಿನಿಯರ್‌ಗಳು ರೈಲು ಪರೀಕ್ಷೆ ನಡೆಸಲು ಬೆಂಗಳೂರಿಗೆ ಆಗಮಿಸಲಿದ್ದಾರೆ. ಉಳಿದವರು ತಿಟಾಘರ್‌ಗೆ ಹೋಗುತ್ತಾರೆ.

ಇನ್ನೆರಡು ಚಾಲಕ ರಹಿತ ರೈಲುಗಳು ಅಲ್ಲಿ ಜೋಡಣೆಯಾಗುತ್ತಿವೆ. ಹಳದಿ ಮಾರ್ಗವು ಸಂಪೂರ್ಣವಾಗಿ ಸಿದ್ಧವಾಗಿದೆ. ಆದರೆ ಕಾರ್ಯಾಚರಣೆಗಳನ್ನು  ಈ ನಿರ್ದಿಷ್ಟ ರೈಲುಗಳ ಅಗತ್ಯವಿದೆ. ಮಾರ್ಚ್ ಆರಂಭದಲ್ಲಿ ಪ್ರಾಯೋಗಿಕ ಓಡಾಟ ಆರಂಭವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com