ಬೆಂಗಳೂರು: 50 ಲಕ್ಷ ಕೊಟ್ಟು 2 ವರ್ಷದ ಹಿಂದೆ ಮದುವೆ; ಗಂಡನ ಅಕ್ರಮ ಸಂಬಂಧದಿಂದ ನೊಂದ ಗೃಹಿಣಿ ಆತ್ಮಹತ್ಯೆ!

ಗಂಡನ ಅಕ್ರಮ ಸಂಬಂಧದಿಂದ ಬೇಸತ್ತ 22 ವರ್ಷದ ಗೃಹಿಣಿ ಮನೆಯಲ್ಲಿ ಯಾರೂ ಇಲ್ಲದ ವೇಳೆ  ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ರಾಜಗೋಪಾಲನಗರದಲ್ಲಿ ನಡೆದಿದೆ.
ಮೃತ ಗೃಹಿಣಿ ಕಾವ್ಯಾ
ಮೃತ ಗೃಹಿಣಿ ಕಾವ್ಯಾ

ಬೆಂಗಳೂರು: ಗಂಡನ ಅಕ್ರಮ ಸಂಬಂಧದಿಂದ ಬೇಸತ್ತ 22 ವರ್ಷದ ಗೃಹಿಣಿ ಮನೆಯಲ್ಲಿ ಯಾರೂ ಇಲ್ಲದ ವೇಳೆ  ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ರಾಜಗೋಪಾಲನಗರದಲ್ಲಿ ನಡೆದಿದೆ.

ಕಾವ್ಯ(22) ನೇಣಿಗೆ ಶರಣಾಗಿರುವ ಗೃಹಿಣಿ. ಮೂಲತಃ ತುಮಕೂರಿನ ಕುಣಿಗಲ್ ನಿವಾಸಿಯಾಗಿರುವ ಕಾವ್ಯ ಕಳೆದ ಎರಡು ವರ್ಷಗಳ ಹಿಂದೆಯಷ್ಟೇ ಪ್ರವೀಣ್ ಎಂಬಾತನೊಂದಿಗೆ ಮದುವೆಯಾಗಿತ್ತು.

ಪತಿ-ಪತ್ನಿ ರಾಜಗೋಪಾಲನಗರದ ಮೋಹನ್ ಥಿಯೇಟರ್ ಸಮೀಪದ ಮನೆಯಲ್ಲಿದ್ದರು.  ಒಂದು ವರ್ಷದ ಮಗುವನ್ನು ಬಿಟ್ಟು  ಕಾವ್ಯ ಸಾವಿಗೆ ಶರಣಾಗಿದ್ದಾರೆ.

ಪ್ರವೀಣ್ ಎಂಜಿನಿಯರ್ ಆಗಿದ್ದರೂ ಕೆಲಸ ಮಾಡುತ್ತಿರಲಿಲ್ಲ. ಈ ಸಂಬಂಧ ಸಂತ್ರಸ್ತೆಯ ಪೋಷಕರು ಆತನಿಗೆ ಬೇರೊಬ್ಬ ಮಹಿಳೆಯ ಜೊತೆ ಅಕ್ರಮ ಸಂಬಂಧ ಇತ್ತು ಎಂದು ಮೃತ ಗೃಹಿಣಿ ಪೋಷಕರು ಆರೋಪಿಸಿದ್ದಾರೆ. ಸಂತ್ರಸ್ತೆಯ ಸಂಬಂಧಿಕರು ಹಲ್ಲೆಗೆ ಯತ್ನಿಸಿದ್ದರಿಂದ ಆರೋಪಿಗಳನ್ನು ಬಂಧಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.  ಪ್ರಕರಣ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com