ಕೇಂದ್ರದ 'ಭಾರತ್ ರೈಸ್' ಯೋಜನೆಯಿಂದ ದೇಶ ಆರ್ಥಿಕ ದಿವಾಳಿಯಾಗಲಿದೆ: ಸಚಿವ ಕೆ.ಎಚ್.ಮುನಿಯಪ್ಪ

ಪ್ರತಿ ಕೆಜಿ ಅಕ್ಕಿಯನ್ನು 29 ರೂ.ಗೆ ಮಾರಾಟ ಮಾಡುವ ಮೂಲಕ ಕೇಂದ್ರ ಸರ್ಕಾರ ದೇಶವನ್ನು ದಿವಾಳಿಯಾಗಿಸುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಮಂಗಳವಾರ ಹೇಳಿದರು,
ಸಚಿವ ಕೆ.ಎಚ್.ಮುನಿಯಪ್ಪ
ಸಚಿವ ಕೆ.ಎಚ್.ಮುನಿಯಪ್ಪ

ಬೆಂಗಳೂರು: ಪ್ರತಿ ಕೆಜಿ ಅಕ್ಕಿಯನ್ನು 29 ರೂ.ಗೆ ಮಾರಾಟ ಮಾಡುವ ಮೂಲಕ ಕೇಂದ್ರ ಸರ್ಕಾರ ದೇಶವನ್ನು ದಿವಾಳಿಯಾಗಿಸುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಮಂಗಳವಾರ ಹೇಳಿದರು,

ವಿಧಾನ ಪರಿಷತ್​​ನ ಶೂನ್ಯವೇಳೆಯಲ್ಲಿ ಪ್ರತಿಪಕ್ಷ ಮುಖ್ಯ ಸಚೇತಕ ರವಿಕುಮಾರ್, ರಾಜ್ಯದಲ್ಲಿ ಹಸಿವಿನಿಂದ ಸಾವಿನ ವರದಿಯಾಗಿದೆ. ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ವಿತರಣೆ ಮಾಡಿಲ್ಲ ಎನ್ನುವ ಕುರಿತ ಪ್ರಶ್ನೆಗೆ ಸಚಿವರು ಉತ್ತರಿಸಿದರು.

ನಾವು ನೀಡುವ ವಾಗ್ದಾನದಂತೆ ನಡೆದುಕೊಂಡಿದ್ದೇವೆ. ಹಸಿವಿನಿಂದ ಯಾರೂ ಮೃತಪಟ್ಟ ಘಟನೆ ವರದಿಯಾಗಿಲ್ಲ. ಅದಕ್ಕೆ ಬಿಡುವುದೂ ಇಲ್ಲ, ಈಗಾಗಲೇ ಫಲಾನುಭವಿಗಳಿಗೆ 4,411 ಕೋಟಿ ರೂ ಹಣ ಬಿಡುಗಡೆ ಮಾಡಿ ಡಿಬಿಟಿ ಮೂಲಕ ವಿತರಣೆ ಮಾಡಲಾಗಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರ ಅಕ್ಕಿ ಇದ್ದರೂ ನಮಗೆ ಕೊಡಲಿಲ್ಲ ಹಾಗಾಗಿ ನಾವು ಮಾತುಕೊಟ್ಟಂತೆ ಅಕ್ಕಿ ಬದಲು ಹಣ ಕೊಡುತ್ತಿದ್ದೇವೆ. ಪ್ರತಿ ಕೆಜಿ ಅಕ್ಕಿಗೆ 34 ರೂ. ನಂತೆ ಕೇಂದ್ರದ ಆಹಾರ ನಿಗಮ ಪೂರೈಕೆ ಮಾಡಲಿದೆ. ಆದರೆ ನಮಗೆ ಮಾತ್ರ ಹೆಚ್ಚುವರಿ ಅಕ್ಕಿ ಸರಬರಾಜಿಗೆ ನಿರಾಕರಿಸಿದೆ. ಕೇಂದ್ರದಿಂದ ಅಕ್ಕಿ ಸಿಗದ ಕಾರಣ ಬೇರೆ ಕಡೆ ಖರೀದಿಗೆ ಪ್ರಯತ್ನಿಸಿದೆವು. ಆದರೆ, ಬೇರೆ ರಾಜ್ಯಗಳಲ್ಲಿ ದರ ಹೆಚ್ಚಿದೆ. ನಮ್ಮ ದರಕ್ಕೆ ಸಿಗಲಿಲ್ಲ ಹಾಗಾಗಿ ಕೇಂದ್ರ ನಿಗದಿಪಡಿಸಿರುವ ಕೆಜಿ ಅಕ್ಕಿಗೆ 34 ರೂ. ಹಣವನ್ನು ಫಲಾನುಭವಿಗಳ ಖಾತೆಗೆ ಹಾಕುತ್ತಿದ್ದೇವೆ.

ರವಿಕುಮಾರ್ ಆರೋಪ ಮಾಡಿರುವಂತೆ ಹಸಿವಿನಿಂದ ರಾಜ್ಯದಲ್ಲಿ ಯಾರೂ ಸತ್ತಿಲ್ಲ, ನಮಗಿರುವ ಮಾಹಿತಿಯಂತೆ ಯಾರೂ ಸತ್ತಿಲ್ಲ, ಖಚಿತ ಮಾಹಿತಿ ಇದ್ದರೆ ನೀಡಿ ಎಂದ ಮುನಿಯಪ್ಪ, ಭಾರತ ಸರ್ಕಾರ 38,39,40 ರೂ.ನಂತೆ ತೆಲಂಗಾಣ ಸೇರಿ ಇತರ ರಾಜ್ಯಗಳಿಂದ ಅಕ್ಕಿ ಖರೀದಿಸಿ ನಂತರ 10 ರೂ. ಗಳನ್ನು ಪ್ರತಿ ಕೆಜಿ ಪ್ರೋಸೆಸ್ ಮಾಡಲು ವೆಚ್ಚ ಮಾಡಿದೆ. ಹಾಗಾಗಿ ಒಟ್ಟಾರೆ ಪ್ರತಿ ಕೆಜಿಗೆ 50 ರೂ ಆಸು ಪಾಸು ಇರಲಿದೆ. ಆದರೆ ಆ ಅಕ್ಕಿಯನ್ನು ಭಾರತ್ ರೈಸ್ ಹೆಸರಿನಲ್ಲಿ ಪ್ರತಿ ಕೆಜಿಗೆ 29 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಪ್ರತಿ ಕೆಜಿಗೆ 20 ರೂ. ನಂತ ನಷ್ಟ ಮಾಡಿಕೊಂಡು ಪ್ರಚಾರ ಪಡೆದುಕೊಳ್ಳುತ್ತಿದೆ. 60 ಲಕ್ಷ ಮೆಟ್ರಿಕ್ ಟನ್​​ಗೆ ಪ್ರತಿ ಕೆಜಿಗೆ 20 ರೂ ನಂತೆ ನಷ್ಟ ಮಾಡಿ ಆರ್ಥಿಕ ದಿವಾಳಿಗೆ ದೇಶವನ್ನು ನೂಕಿದೆ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com