ಹುಕ್ಕಾ ಬಾರ್ ನಿಷೇಧಿಸುವ ಮಸೂದೆ ವಿಧಾನಸಭೆಯಲ್ಲಿ ಅಂಗೀಕಾರ; 21 ವರ್ಷ ಮೇಲ್ಪಟ್ವರಿಗೆ ಮಾತ್ರ ಸಿಗರೇಟು ಮಾರಾಟ

ಹುಕ್ಕಾ ಬಾರ್ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ತಂಬಾಕು ಉತ್ಪನ್ನಗಳನ್ನು ನಿಷೇಧಿಸುವ ಮಸೂದೆಯನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ.
ಹುಕ್ಕಾ ಸಾಂದರ್ಭಿಕ ಚಿತ್ರ
ಹುಕ್ಕಾ ಸಾಂದರ್ಭಿಕ ಚಿತ್ರTNIE
Updated on

ಬೆಂಗಳೂರು: ಹುಕ್ಕಾ ಬಾರ್ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ತಂಬಾಕು ಉತ್ಪನ್ನಗಳನ್ನು ನಿಷೇಧಿಸುವ ಮಸೂದೆಯನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ. ನಿಯಮ ಉಲ್ಲಂಘನೆ ಮಾಡಿದವರಿಗೆ ಈ ಮಸೂದೆಯ ಪ್ರಕಾರ 1-3 ವರ್ಷಗಳ ವರೆಗೆ ಜೈಲು ಶಿಕ್ಷೆ, ನಿಯಮ ಉಲ್ಲಂಘನೆಗೆ 1 ಲಕ್ಷ ದಂಡ ವಿಧಿಸಲಾಗುತ್ತದೆ.

21 ವರ್ಷಗಳ ಒಳಗಿನ ವ್ಯಕ್ತಿಗಳಿಗೆ ತಂಬಾಕು ಉತ್ಪನ್ನ, ಸಿಗರೇಟ್ ಮಾರಾಟ ಮಾಡುವುದು, ಸಾರ್ವಜನಿಕ, ಶೈಕ್ಷಣಿಕ ಸಂಸ್ಥೆಗಳಿರುವ ಪ್ರದೇಶಗಳಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ಈ ಮಸೂದೆಯ ಮೂಲಕ ನಿಷೇಧಿಸಲಾಗಿದೆ.

ಹುಕ್ಕಾ ಸಾಂದರ್ಭಿಕ ಚಿತ್ರ
ಹುಕ್ಕಾ ಬಾರ್ ನಿಷೇಧ ಬೆನ್ನಲ್ಲೇ ಸಿಸಿಬಿ ಬೇಟೆ: ಅಕ್ರಮವಾಗಿ ಉತ್ಪನ್ನಗಳನ್ನು ಪೂರೈಸುತ್ತಿದ್ದ 9 ಮಂದಿ ಸೆರೆ

ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ (ಜಾಹೀರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ ನಿಯಂತ್ರಣ, ಉತ್ಪಾದನೆ, ಸರಬರಾಜು ಮತ್ತು ವಿತರಣೆ) (ಕರ್ನಾಟಕ ತಿದ್ದುಪಡಿ) ಮಸೂದೆ, 2024, 2003ರ ಕೇಂದ್ರ ಕಾಯಿದೆಯನ್ನು ಕರ್ನಾಟಕ ರಾಜ್ಯಕ್ಕೆ ತನ್ನ ಅನ್ವಯದಲ್ಲಿ ತಿದ್ದುಪಡಿ ಮಾಡಿದೆ. ಯಾವುದೇ ವ್ಯಕ್ತಿ ಸ್ವಂತವಾಗಿ ಅಥವಾ ಇತರ ಯಾವುದೇ ವ್ಯಕ್ತಿಯ ಪರವಾಗಿ ಯಾವುದೇ ಸ್ಥಳದಲ್ಲಿ ಯಾವುದೇ ಹುಕ್ಕಾ ಬಾರ್ ಅನ್ನು ತೆರೆಯಬಾರದು ಅಥವಾ ನಡೆಸಬಾರದು, ಪಬ್ ಅಥವಾ ಬಾರ್ ಅಥವಾ ರೆಸ್ಟೊರೆಂಟ್ ಹೆಸರಿನಲ್ಲಿಯೂ ಹುಕ್ಕಾ ಬಾರ್ ಗಳನ್ನು ತೆರೆಯಬಾರದು ಎಂದು ಮಸೂದೆಯಲ್ಲಿ ನಿರ್ಬಂಧ ವಿಧಿಸಲಾಗಿದೆ.

ಹುಕ್ಕಾ ಬಾರ್ ಎಂದರೆ "ಮಸೂದೆಯ ಪ್ರಕಾರ ಪ್ರತ್ಯೇಕವಾಗಿ ಒದಗಿಸಲಾದ ಸಾಮುದಾಯಿಕ ಹುಕ್ಕಾ ಅಥವಾ ನರ್ಘಿಲ್‌ನಿಂದ ತಂಬಾಕು ಸೇದಲು ಜನರು ಸೇರುವ ಸ್ಥಳವಾಗಿದೆ. ಸದನದ ಪರಿಗಣನೆಗೆ ವಿಧೇಯಕವನ್ನು ಪ್ರಾಯೋಗಿಕವಾಗಿ ಮಂಡಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ನಾಗರಿಕರ, ವಿಶೇಷವಾಗಿ ಯುವಕರ ಆರೋಗ್ಯವನ್ನು ಕಾಪಾಡುವುದು ಮತ್ತು ತಂಬಾಕು ಸಂಬಂಧಿತ ರೋಗಗಳನ್ನು ತಡೆಯುವುದು ಈ ಮಸೂದೆಯ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು. ಇಂದು ಯುವಕರು ಹುಕ್ಕಾವನ್ನು "ಫ್ಯಾಶನ್ ಎಂದು ಪರಿಗಣಿಸುತ್ತಾರೆ ಎಂದು ಸಚಿವರು ಹೇಳಿದ್ದಾರೆ.

ಹುಕ್ಕಾ ಸಾಂದರ್ಭಿಕ ಚಿತ್ರ
ರಾಜ್ಯದಲ್ಲಿ ಹುಕ್ಕಾ ಬಾರ್ ನಿಷೇಧಿಸಿ ಆರೋಗ್ಯ ಇಲಾಖೆ ಆದೇಶ!

ಹುಕ್ಕಾವನ್ನು ಸೇವಿಸುವವರ ಮೇಲೆ ಮಾತ್ರವಲ್ಲ, ಸುತ್ತಮುತ್ತಲಿನ ಜನರ ಮೇಲೂ ಅದು ಪರಿಣಾಮ ಬೀರುತ್ತದೆ. ರಾಜ್ಯ ಸರ್ಕಾರ ಈಗಾಗಲೇ ಹುಕ್ಕಾ ಬಾರ್‌ಗಳನ್ನು ನಿಷೇಧಿಸಿ ಅಧಿಸೂಚನೆ ಹೊರಡಿಸಿದ್ದು, ಇದರ ವಿರುದ್ಧ ಮಾಲೀಕರು ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ. "ನ್ಯಾಯಾಲಯಗಳು ಸಹ ಹುಕ್ಕಾ ಬಾರ್ ಗಳ ನಿಷೇಧಕ್ಕೆ ಯಾವುದೇ ತಡೆ ನೀಡಿಲ್ಲ, ಆದ್ದರಿಂದ ನಾವು ತಿದ್ದುಪಡಿಗಳನ್ನು ತಂದು ಕಾನೂನು ಮಾಡಿದರೆ, ನಾವು ಮುಂದೆ ಯಾವುದೇ ಆಕ್ಷೇಪಣೆಗಳನ್ನು ಎದುರಿಸುವುದಿಲ್ಲ" ಎಂದು ಸಚಿವರು ಹೇಳಿದರು.

ರೆಸ್ಟೋರೆಂಟ್‌ಗಳು ಮತ್ತು ಬಾರ್‌ಗಳಲ್ಲಿ ಹುಕ್ಕಾ ಬಾರ್‌ಗಳನ್ನು ತೆರೆಯಲಾಗಿದೆ ಎಂದು ತಿಳಿಸಿದ ಸಚಿವರು, “ಸಿಗರೇಟ್ ಸೇವನೆ ಆರೋಗ್ಯಕ್ಕೆ ಹಾನಿಕಾರಕವೆಂದು ಪರಿಗಣಿಸಿ, ಈಗಾಗಲೇ ಸಾರ್ವಜನಿಕ ಸ್ಥಳಗಳಲ್ಲಿ ಇದನ್ನು ನಿಷೇಧಿಸಲಾಗಿದೆ, ಹುಕ್ಕಾ ಸಂದರ್ಭದಲ್ಲಿ, ತಂಬಾಕು ಮತ್ತು ನಿಕೋಟಿನ್ ಜೊತೆಗೆ ಇತರ ಮಾದಕ ಪದಾರ್ಥಗಳನ್ನು ಬಳಸಲಾಗುತ್ತದೆ. ಮತ್ತು ಅದನ್ನು ನಿಷೇಧಿಸಲು ಈ ತಿದ್ದುಪಡಿಯನ್ನು ತರಲಾಗಿದೆ.

"ಹುಕ್ಕಾ ಬಾರ್‌ಗಳನ್ನು ನಡೆಸುವ ಶಿಕ್ಷೆಯನ್ನು ಹೊಸದಾಗಿ ಮಸೂದೆಯಲ್ಲಿ ಪರಿಚಯಿಸಲಾಗಿದೆ, ಸೆಕ್ಷನ್ 4A ಅನ್ನು ಉಲ್ಲಂಘಿಸುವವರಿಗೆ ಒಂದರಿಂದ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 50,000 ರಿಂದ 1 ಲಕ್ಷದ ನಡುವಿನ ಮೊತ್ತದ ದಂಡ ವಿಧಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ. ತಂಬಾಕು ಉತ್ಪನ್ನಗಳನ್ನು ಖರೀದಿಸುವುದಕ್ಕೆ ಕನಿಷ್ಠ ವಯೋಮಾನ 18 ಇದೆ. ಅದನ್ನು ನಾವು 21 ವರ್ಷಕ್ಕೆ ಏರಿಕೆ ಮಾಡಿದ್ದೇವೆ ಎಂದು ಸಚಿವರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com