ಬೆಂಗಳೂರಿನ ಆಸ್ತಿ ತೆರಿಗೆ ಸುಸ್ತಿದಾರರಿಗೆ ಸಿಹಿಸುದ್ದಿ: 'ಒನ್‌ ಟೈಮ್‌ ಸೆಟಲ್‌ಮೆಂಟ್' ಘೋಷಿಸಿದ ಸರ್ಕಾರ

ನಗರದಲ್ಲಿ ಲಕ್ಷಾಂತರ ಆಸ್ತಿ ತೆರಿಗೆ ಸುಸ್ತಿದಾರರಿಗೆ ಪರಿಹಾರವಾಗಿ ರಾಜ್ಯ ಸರ್ಕಾರ ತೆರಿಗೆ ಬಾಕಿ ಪಾವತಿಗೆ ಬಡ್ಡಿ ಮತ್ತು ತೆರಿಗೆ ವಂಚನೆಗೆ ದಂಡದೊಂದಿಗೆ ‘ಒನ್ ಟೈಮ್ ಸೆಟಲ್‌ಮೆಂಟ್’ (OTS) ನಿಬಂಧನೆಯನ್ನು ಪ್ರಕಟಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ನಗರದಲ್ಲಿ ಲಕ್ಷಾಂತರ ಆಸ್ತಿ ತೆರಿಗೆ ಸುಸ್ತಿದಾರರಿಗೆ ಪರಿಹಾರವಾಗಿ ರಾಜ್ಯ ಸರ್ಕಾರ ತೆರಿಗೆ ಬಾಕಿ ಪಾವತಿಗೆ ಬಡ್ಡಿ ಮತ್ತು ತೆರಿಗೆ ವಂಚನೆಗೆ ದಂಡದೊಂದಿಗೆ ‘ಒನ್ ಟೈಮ್ ಸೆಟಲ್‌ಮೆಂಟ್’ (OTS) ನಿಬಂಧನೆಯನ್ನು ಪ್ರಕಟಿಸಿದೆ.

ತೆರಿಗೆ ಸುಸ್ತಿದಾರರು ಮತ್ತು ವಂಚಕರ ಮೇಲೆ ವಿವೇಚನಾರಹಿತವಾಗಿ ಭಾರಿ ದಂಡವನ್ನು ವಿಧಿಸುವ ಹಲವಾರು ದೂರುಗಳು ಬಂದ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. OTS ಪ್ರಕಾರ, ದಂಡವು ತೆರಿಗೆ ಪಾವತಿಸದ ತಪ್ಪಿಸಿಕೊಂಡ ಮೊತ್ತಕ್ಕೆ ಸಮನಾಗಿರುತ್ತದೆ.

ಸಾಂದರ್ಭಿಕ ಚಿತ್ರ
ಬಹುಮಹಡಿ ಕಟ್ಟಡಗಳ ಆಸ್ತಿ ತೆರಿಗೆ ಮೇಲೆ ಹೆಚ್ಚುವರಿ ಶೇ.1ರಷ್ಟು ಸೆಸ್: ಪಾಲಿಕೆಗೆ 300 ಕೋಟಿ ರು ಆದಾಯ ನಿರೀಕ್ಷೆ

ಒಟಿಎಸ್‌ಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಜುಲೈ 31ರವರೆಗೆ ಅಥವಾ ಮುಂದಿನ ಆದೇಶಗಳು ಜಾರಿಯಲ್ಲಿರುತ್ತವೆ. ಸ್ವಂತ ಬಳಕೆಗಾಗಿ ಮತ್ತು ನೆಲಮಹಡಿಯನ್ನು ಮಾತ್ರ ಹೊಂದಿರುವ ಟೈಲ್ಡ್ ಅಥವಾ ಶೀಟ್ ರೂಫ್‌ಗಳನ್ನು ಹೊಂದಿರುವ (ಆರ್‌ಸಿಸಿ ಅಲ್ಲದ) 1,000 ಚದರ ಅಡಿ ಮೀರದ ವಸತಿ ಆಸ್ತಿಗಳ ಮೇಲೆ ಶೇಕಡಾ 25ರಷ್ಟು(ತೆರಿಗೆ ತಪ್ಪಿಸಿದ ಮೇಲೆ) ದಂಡವನ್ನು ವಿಧಿಸಲಾಗುತ್ತದೆ.

ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಥವಾ ಬಿಬಿಎಂಪಿಯಿಂದ ಕೊಳೆಗೇರಿ ಎಂದು ಘೋಷಿಸಿದ ಪ್ರದೇಶಗಳಲ್ಲಿ ಶೆಡ್ ಮತ್ತು ಮನೆಗಳಲ್ಲಿ ವಾಸಿಸುವವರು, ಬಡವರ ಸರ್ಕಾರಿ ಮನೆಗಳಲ್ಲಿ ವಾಸಿಸುವವರು ಮತ್ತು ಸ್ವಂತ ಬಳಕೆಗಾಗಿ 300 ಚದರ ಅಡಿಗಿಂತ ಕಡಿಮೆ ಅಳತೆಯ ಮನೆಗಳಲ್ಲಿ ವಾಸಿಸುವವರಿಗೆ ಸರ್ಕಾರ ವಿನಾಯಿತಿ ನೀಡಿದೆ.

ಸಾಂದರ್ಭಿಕ ಚಿತ್ರ
ಮಾರ್ಗಸೂಚಿ ದರದಂತೆ ಆಸ್ತಿ ತೆರಿಗೆ ನಿಗದಿ ಮಾಡಲು ಬಿಬಿಎಂಪಿ ಮುಂದು!

ವಸತಿ ಮತ್ತು ಮಿಶ್ರ-ಬಳಕೆಯ ಆಸ್ತಿ ಮಾಲೀಕರು ತೆರಿಗೆ ಪಾವತಿಸದ ಅವಧಿಯನ್ನು ಲೆಕ್ಕಿಸದೆ ಗರಿಷ್ಠ ಐದು ವರ್ಷಗಳ ಅವಧಿಗೆ (ತೆರಿಗೆ ಪಾವತಿಸದೆ ವಂಚಿಸಿದ ಪ್ರಕರಣಗಳಲ್ಲಿ) ಮತ್ತು ಬಡ್ಡಿಯನ್ನು (ಬಾಕಿಯ ಮೇಲೆ) ಪಾವತಿಸಬೇಕಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಆದಾಗ್ಯೂ, ದಂಡ ಮೊತ್ತ ಈಗಾಗಲೇ ಪಾವತಿಸಿದ ತೆರಿಗೆಗಳಿಗೆ ಯಾವುದೇ ಹೊಂದಾಣಿಕೆಗಳನ್ನು ಮಾಡಲಾಗುವುದಿಲ್ಲ.

ತೆರಿಗೆ ವಂಚನೆ ಉದ್ದೇಶಪೂರ್ವಕವೇ ಅಥವಾ ಬಾಕಿ ಇದೆಯೇ ಎಂಬುದನ್ನು ಪರಿಗಣನೆಗೆ ತೆಗೆದುಕೊಳ್ಳದೆ, ದಂಡ ಮತ್ತು ಬಾಕಿ ತೆರಿಗೆಯನ್ನು ಬಡ್ಡಿ ಸಮೇತ ಪಾವತಿಸಬೇಕೆಂಬ ಬೇಡಿಕೆ ನೊಟೀಸ್ ಗೆ ವಿವಿಧ ವಲಯಗಳಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಫೆಬ್ರವರಿ 15 ರಂದು ಸಚಿವ ಸಂಪುಟ ಈ ನಿರ್ಧಾರ ಕೈಗೊಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com