ಬ್ರಿಟನ್ ಲೇಖಕಿ ನಿತಾಶಾ ಕೌಲ್‌ ಬೆಂಗಳೂರು ಪ್ರವೇಶಕ್ಕೆ ಅನುಮತಿ ನಕಾರ: ರಾಜಕೀಯ ವಲಯದಲ್ಲಿ ಆರೋಪ-ಪ್ರತ್ಯಾರೋಪ!

ರಾಜ್ಯ ಸರ್ಕಾರದ ಅಧಿಕೃತ ಆಹ್ವಾನದ ಮೇರೆಗೆ ಬೆಂಗಳೂರಿಗೆ ಆಗಮಿಸಿದ್ದ ಬ್ರಿಟನ್‌ನ ಪ್ರೊಫೆಸರ್‌, ಭಾರತ ಮೂಲದ ನಿತಾಶಾ ಕೌಲ್ ಅವರು ಬೆಂಗಳೂರು ಪ್ರವೇಶಿಸದಂತೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿಯೇ ತಡೆದ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ರಾಜಕೀಯ ವಲಯದಲ್ಲಿ ಕೆಸರೆರಚಾಟ ಆರಂಭವಾಗಿದೆ.
ಬ್ರಿಟನ್ ಲೇಖಕಿ ನಿತಾಶಾ ಕೌಲ್‌
ಬ್ರಿಟನ್ ಲೇಖಕಿ ನಿತಾಶಾ ಕೌಲ್‌

ಬೆಂಗಳೂರು: ರಾಜ್ಯ ಸರ್ಕಾರದ ಅಧಿಕೃತ ಆಹ್ವಾನದ ಮೇರೆಗೆ ಬೆಂಗಳೂರಿಗೆ ಆಗಮಿಸಿದ್ದ ಬ್ರಿಟನ್‌ನ ಪ್ರೊಫೆಸರ್‌, ಭಾರತ ಮೂಲದ ನಿತಾಶಾ ಕೌಲ್ ಅವರು ಬೆಂಗಳೂರು ಪ್ರವೇಶಿಸದಂತೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿಯೇ ತಡೆದ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ರಾಜಕೀಯ ವಲಯದಲ್ಲಿ ಕೆಸರೆರಚಾಟ ಆರಂಭವಾಗಿದೆ.

"ಸರ್ವಾಧಿಕಾರದ ಕೃತ್ಯ" ಎಂದು ಕಾಂಗ್ರೆಸ್ ನಾಯಕರು ಖಂಡಿಸುತ್ತಿದ್ದು, ‘ನಿತಾಶಾ ಕೌಲ್‌ ಭಾರತ ವಿರೋಧಿ’ ಎಂದು ಬಿಜೆಪಿ ಟೀಕಿಸಿದೆ.

ವ್ಯಕ್ತಿಯ ಮೂಲಭೂತ ಹಕ್ಕು ಹಾಗೂ ರಾಜ್ಯ ಸರ್ಕಾರದ ಹಕ್ಕುಗಳನ್ನು ಹೇಗೆ ಹತ್ತಿಕ್ಕಲಾಗುತ್ತಿದೆ ಎಂಬುದಕ್ಕೆ ಈ ಘಟನೆ ನಿದರ್ಶನವಾಗಿದೆ. ‘ದೇಶದಲ್ಲಿ ಸಾಂವಿಧಾನಿಕ ಚಿಂತನೆಗಳಿಗೆ ಎದುರಾಗಿರುವ ಸವಾಲುಗಳಿಗೆ ಇದು ಉದಾಹರಣೆ. ಎಲ್ಲ ನಾಗರಿಕರು ಇಂಥ ಪ್ರಕರಣಗಳನ್ನು ಎದುರಿಸಲು, ಸಂವಿಧಾನ ರಕ್ಷಿಸಲು ಒಗ್ಗಟ್ಟಾಗಬೇಕಾಗಿದೆ’ ಎಂದು ಹೇಳಿದ್ದಾರೆ.

ಬ್ರಿಟನ್ ಲೇಖಕಿ ನಿತಾಶಾ ಕೌಲ್‌
ಕರ್ನಾಟಕ ಸರ್ಕಾರದ ಆಹ್ವಾನವಿದ್ದರೂ ಭಾರತಕ್ಕೆ ನನಗೆ ಪ್ರವೇಶ ನಿರಾಕರಿಸಲಾಗಿದೆ: ಭಾರತೀಯ ಮೂಲದ ಯುಕೆ ಪ್ರೊಫೆಸರ್

ಸಮಾವೇಶವನ್ನು ಆಯೋಜಿಸುವುದು ಹಾಗೂ ಅದಕ್ಕಾಗಿ ರಾಷ್ಟ್ರೀಯ ಹಿತಾಸಕ್ತಿ ಮತ್ತು ರಾಜ್ಯದ ಅಭಿವೃದ್ಧಿಯನ್ನು ಅರ್ಥಪೂರ್ಣವಾಗಿ ಬಿಂಬಿಸುವ ಪರಿಣತರನ್ನು ಆಹ್ವಾನಿಸುವುದು ರಾಜ್ಯ ಸರ್ಕಾರದ ಹಕ್ಕು. ಇದು ಸಂವಿಧಾನದತ್ತವಾಗಿದೆ. ಕೇಂದ್ರ ಸರ್ಕಾರ ಇದನ್ನು ಅಲಕ್ಷಿಸಿದೆ ಎಂದು ಕಿಡಿಕಾರಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮಾತನಾಡಿ "ಭಾರತದ ಸಂವಿಧಾನ ಮತ್ತು ಏಕತೆ" ಕುರಿತು ಮಾತನಾಡಲು ನಿತಾಶಾ ಕೌಲ್ ಅವರನ್ನು ಆಹ್ವಾನಿಸುವ ಮೂಲಕ "ತುಕ್ಡೆ ತುಕ್ಡೆ ಗ್ಯಾಂಗ್" ನ ಅಪರಾಧಗಳನ್ನು ವೈಟ್ ವಾಷ್ ಮಾಡಲು ಸಿದ್ದರಾಮಯ್ಯ ಸರ್ಕಾರ ಯತ್ನಿಸಿರುವುದು ಅಸಹ್ಯಕರವಾಗಿದೆ ಎಂದು ಹೇಳಿದ್ದಾರೆ.

ಒಬ್ಬ ಪ್ರಸಿದ್ಧ ಭಯೋತ್ಪಾದಕ ನಿರಂತರವಾಗಿ ವಿಷವನ್ನು ಉಗುಳುವ ಮತ್ತು ಭಾರತದ ಶತ್ರುಗಳ ಜೊತೆಯಲ್ಲಿ ಭಾರತ ವಿರೋಧಿ ಪ್ರಚಾರವನ್ನು ಪ್ರಸಾರ ಮಾಡುವ ಒಬ್ಬನಿಗೆ ಕಾಂಗ್ರೆಸ್ ರೆಡ್ ಕಾರ್ಪೆಟ್ ಮೂಲಕ ಸ್ವಾಗತ ಕೋರುತ್ತಿದೆ. ಈ ಕಾರ್ಯಕ್ರಮದಲ್ಲಿ ಎಲ್ಲಾ ಕಾಂಗ್ರೆಸ್ ನಾಯಕರು ಭಾಗವಹಿಸಿರುವುದು ಅಸಹ್ಯಕರ ಸಂಗತಿಯಾಗಿದೆ.

ಬ್ರಿಟನ್ ಲೇಖಕಿ ನಿತಾಶಾ ಕೌಲ್‌
ಸಂವಿಧಾನ ಬಗ್ಗೆ ಅಪಪ್ರಚಾರ ಮಾಡುವವರ ವಿರುದ್ಧ ಎಚ್ಚರಿಕೆಯಿಂದಿರಿ: ಸಿಎಂ ಸಿದ್ದರಾಮಯ್ಯ

ರಾಜ್ಯದಲ್ಲಿ ರೈತರು ಸಂಕಷ್ಟದಲ್ಲಿರುವಾಗ ಸರ್ಕಾರ ಇಂತಹ ಸಮಾವೇಶಗಳನ್ನು ಆಯೋಜಿಸುವ ಮೂಲಕ ಅನಗತ್ಯ ವೆಚ್ಚ ಮಾಡುತ್ತಿದೆ. ಇದೇ ಮೊತ್ತದಲ್ಲಿ ಎಷ್ಟೋ ರೈತರಿಗೆ ನೆರವು ನೀಡಬಹುದಾಗಿತ್ತು ಎಂದು ಟೀಕಿಸಿದ್ದಾರೆ.

ಇನ್ಫೋಸಿಸ್‌ನ ಮಾಜಿ ಮುಖ್ಯ ಹಣಕಾಸು ಅಧಿಕಾರಿ ಮೋಹನ್‌ದಾಸ್ ಪೈ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ.

ಇಸಿಸ್ ಬೆಂಬಲಿಗ ಇಲ್ಲಿಗೆ ಬರುವುದರಿಂದ ನಮ್ಮ ನಗರವನ್ನು ಕಲುಷಿತಗೊಳ್ಳಲಿದೆ. ಇದನ್ನು ನಾವು ಬಯಸುವುದಿಲ್ಲ. ಅವಳು ಎಂದಿನಂತೆ ಭಾರತದ ಮೇಲೆ ವಿಷ ಉಗುಳುವುದನ್ನು ಮುಂದುವರಿಸುತ್ತಾಳೆ. ಅವಳು ತನಗೆ ಬೇಕಾದುದನ್ನು ಮಾಡಲಿ. ಆದರೆ, ಅದು ದೇಶದ ಹೊರಗಿರಲಿ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com