ಬರಕ್ಕೆ ರೈತ ತತ್ತರ: ಕಡಿಮೆ ಬಂಡವಾಳ ಲಾಭದಾಯಕ ಕೃಷಿಯತ್ತ ಮುಖ, ಆಹಾರ ಧಾನ್ಯ ಬೆಳೆ ಉತ್ಪಾದನೆಯಲ್ಲಿ ಕುಸಿತ!

ಕರ್ನಾಟಕ ರಾಜ್ಯದಲ್ಲಿ ಭತ್ತ, ಜೋಳ, ಕಡಲೆಕಾಯಿ ಸೇರಿದಂತೆ ಪ್ರಮುಖ ಆಹಾರ ಧಾನ್ಯಗಳ ಬೆಳೆ ಉತ್ಪಾದನೆಯಲ್ಲಿ ಕುಸಿತ ಕಂಡು ಬಂದಿದೆ ಎಂದು ಕರ್ನಾಟಕ ಆರ್ಥಿಕ ಸಮೀಕ್ಷೆ 2023-24 ವರದಿಯಲ್ಲಿ ಬಹಿರಂಗಗೊಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಭತ್ತ, ಜೋಳ, ಕಡಲೆಕಾಯಿ ಸೇರಿದಂತೆ ಪ್ರಮುಖ ಆಹಾರ ಧಾನ್ಯಗಳ ಬೆಳೆ ಉತ್ಪಾದನೆಯಲ್ಲಿ ಕುಸಿತ ಕಂಡು ಬಂದಿದೆ ಎಂದು ಕರ್ನಾಟಕ ಆರ್ಥಿಕ ಸಮೀಕ್ಷೆ 2023-24 ವರದಿಯಲ್ಲಿ ಬಹಿರಂಗಗೊಂಡಿದೆ.

ಕಡಿಮೆ ನೀರು, ಕೃಷಿಗೆ ಅನುಕೂಲವಾಗುವ, ಹೆಚ್ಚು ಲಾಭ ಮತ್ತು ಕಡಿಮೆ ಬಂಡವಾಳದ ಬೆಳೆಗಳತ್ತ ರೈತರು ಒಲವು ತೋರುತ್ತಿದ್ದು, ಆಹಾರ ಧಾನ್ಯ ಬೆಳೆ ಉತ್ಪಾದನೆ ಕುಸಿತ ಕಾಣಲು ಇದೇ ಪ್ರಮುಖ ಕಾರಣವೆಂದು ತಜ್ಞರು ತಿಳಿಸಿದ್ದಾರೆ.

ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಇತ್ತೀಚಿನ ಕೆಲ ವರ್ಷಗಳಲ್ಲಿ ಭತ್ತ, ಜೋಳ ಮತ್ತು ಬೇಳೆಕಾಳುಗಳು ಸೇರಿದಂತೆ ಅಗತ್ಯ ಬೆಳೆಗಳ ಸಾಗುವಳಿ ಪ್ರದೇಶವು ಕಡಿಮೆಯಾಗುತ್ತಿದ್ದು, ಹತ್ತಿ, ಸೋಯಾಬೀನ್, ಮೆಕ್ಕೆಜೋಳ, ಕಬ್ಬು ಬೆಳೆ ಹೆಚ್ಚಾಗುತ್ತಿದೆ ಎಂದು ವರದಿ ತಿಳಿಸಿವೆ.

ಸಂಗ್ರಹ ಚಿತ್ರ
ಕರ್ನಾಟಕದಲ್ಲಿ ಕೃಷಿ ಅರಣ್ಯ ಪ್ರದೇಶಗಳ ಹೆಚ್ಚಳ: ತಜ್ಞರ ಅಭಿಮತ

2022-23ರಲ್ಲಿ ಒಟ್ಟು 79.09 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಆಹಾರ ಬೆಳೆಗಳನ್ನು ಬೆಳೆಯಲಾಗಿತ್ತು. ಆಹಾರ ಧಾನ್ಯಗಳ ಬೆಳೆ ಉತ್ಪಾದನೆಯು 143.56 ಲಕ್ಷ ಟನ್‌ಗಳಷ್ಟಿತ್ತು; 2023-24ರಲ್ಲಿ 70.59 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆಯಲಾಗಿದ್ದು, ಉತ್ಪಾದನೆ 112.32 ಲಕ್ಷ ಟನ್‌ ಆಗಿದೆ. ಬಹುತೇಕ ಎಲ್ಲಾ ಧಾನ್ಯಗಳು, ದ್ವಿದಳ ಧಾನ್ಯಗಳು, ಎಣ್ಣೆಕಾಳುಗಳು ಬೆಳೆಯಲ್ಲಿ ಕುಸಿತ ಕಂಡು ಬಂದಿದೆ.

ಆರ್ಥಿಕ ಸಮೀಕ್ಷೆಯ ವರದಿಯ ಪ್ರಕಾರ, ಖಾರಿಫ್, ರಬಿ ಮತ್ತು ಬೇಸಿಗೆ ಸಂದರ್ಭದಲ್ಲಿ ಕೃಷಿ ಬೆಳೆಗಳ (2018-19 ರಿಂದ 2022-23) ಸರಾಸರಿ ವಿಸ್ತೀರ್ಣ 111.92 ಲಕ್ಷ ಹೆಕ್ಟೇರ್ ಆಗಿದ್ದು, 44 ರಷ್ಟು ಭೂಮಿಯಲ್ಲಿ ಧಾನ್ಯಗಳು, 29 ರಷ್ಟು ದ್ವಿದಳ ಧಾನ್ಯಗಳು, 10 ರಷ್ಟು ಎಣ್ಣೆಕಾಳುಗಳು, ಶೇಕಡಾ 7 ರಲ್ಲಿ ಹತ್ತಿ, ಶೇಕಡಾ 9 ರಷ್ಟು ಕಬ್ಬು ಮತ್ತು ಒಂದು ಶೇಕಡಾ ಭೂಮಿಯಲ್ಲಿ ತಂಬಾಕು ಬೆಳೆಯಲಾಗುತ್ತದೆ.

ಕೃಷಿ ವಿಜ್ಞಾನ ವಿಶ್ವವಿದ್ಯಾನಿಲಯ ಮಾಜಿ ರಿಜಿಸ್ಟ್ರಾರ್ ಎ.ಬಿ.ಪಾಟೀಲ್ ಅವರು ಮಾತನಾಡಿ, ರೈತರು ಕಡಿಮೆ ನೀರು, ಕೊಯ್ಲು ಮಾಡಲು ಕಡಿಮೆ ದಿನಗಳು, ಕಡಿಮೆ ಬಂಡವಾಳ ಹೂಡಿಕೆ ಹಾಗೂ ಹೆಚ್ಚು ಲಾಭ ತಂದುಕೊಡುವ ಬೆಳೆಗಳನ್ನು ಆರಿಸಿಕೊಳ್ಳುತ್ತಿದ್ದಾರೆಂದು ಹೇಳಿದ್ದಾರೆ.

ಸಂಗ್ರಹ ಚಿತ್ರ
ಕರ್ನಾಟಕ ಬಜೆಟ್ 2024: ಕೃಷಿ ಕ್ಷೇತ್ರಕ್ಕೆ, ಬರದಿಂದ ತತ್ತರಿಸಿರುವ ರೈತಾಪಿ ವರ್ಗಕ್ಕೆ ಸಿದ್ದರಾಮಯ್ಯ ನೀಡಿದ್ದೇನು?

ಕಳೆದ ಕೆಲ ವರ್ಷಗಳಿಂದ ಬರಗಾಲದಿಂದ ರೈತರು ಸಂಕಷ್ಟದಲ್ಲಿದ್ದು, ಹಾಕಿದ ಬಂಡವಾಳವೂ ವಾಪಸ್‌ ಸಿಗುತ್ತಿಲ್ಲ. ಹೀಗಾಗಿ ಲಾಭದಾಯಕ ಬೆಳೆಗಳನ್ನು ಆರಿಸಿಕೊಳ್ಳುತ್ತಿದ್ದಾರೆಂದು ಕೃಷಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ,

ಮಾರುಕಟ್ಟೆ ಬೆಲೆ ಸಿಗುವ ಬೆಳೆಗಳನ್ನು ರೈತರು ಆರಿಸಿಕೊಳ್ಳುತ್ತಿದ್ದಾರೆ. ಈ ಪ್ರವೃತ್ತಿ ಇದೇ ರೀತಿ ಮುಂದುವರೆದರೆ, ಉತ್ತಮಲ್ಲ ಎಂದು ತಿಳಿಸಿದ್ದಾರೆ.

ಆಹಾರಧಾನ್ಯ ಬೆಲೆ ಉತ್ಪಾದನೆಗೆ ಸರ್ಕಾರ ಸಹಾಯಧನ ನೀಡಿದರೆ ರೈತರು ಬೆಳೆ ಬೆಳೆಯಲು ಮುಂದಾಗುವ ಸಾಧ್ಯತೆಗಳಿವೆ. ಬೇಡಿಕೆಗೆ ತಕ್ಕಂತೆ ಬೆಳೆ ಬೆಳೆಯುವ ಪ್ರವೃತ್ತಿಯನ್ನು ನಾವಿಂದು ನೋಡುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com