ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಾನಂದ ನಾಯಕವಾಡಿ ಅಮಾನತಿಗೆ ಸಿಎಟಿ ತಡೆಯಾಜ್ಞೆ

ಗೋಕಾಕ್‌ನ ಘಟಪ್ರಭಾ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಎಫ್‌ಒ) ಹುದ್ದೆಯಿಂದ ಐಎಫ್‌ಎಸ್ ಅಧಿಕಾರಿ ಶಿವಾನಂದ ನಾಯಿಕವಾಡಿ ಅವರನ್ನು ಅಮಾನತುಗೊಳಿಸಿದ ಆದೇಶಕ್ಕೆ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ (ಸಿಎಟಿ) ತಡೆ ನೀಡಿದೆ.
ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ
ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ

ಬೆಂಗಳೂರು: ಗೋಕಾಕ್‌ನ ಘಟಪ್ರಭಾ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಎಫ್‌ಒ) ಹುದ್ದೆಯಿಂದ ಐಎಫ್‌ಎಸ್ ಅಧಿಕಾರಿ ಶಿವಾನಂದ ನಾಯಿಕವಾಡಿ ಅವರನ್ನು ಅಮಾನತುಗೊಳಿಸಿದ ಆದೇಶಕ್ಕೆ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ (ಸಿಎಟಿ) ತಡೆ ನೀಡಿದೆ.

“ಮುಖ್ಯ ಕಾರ್ಯದರ್ಶಿಗಳು ಫೆಬ್ರವರಿ 21, 2024ರಂದು ಹೊರಡಿಸಿರುವ ಸರ್ಕಾರಿ ಆದೇಶವನ್ನು ಮುಂದಿನ ವಿಚಾರಣೆಯ ದಿನಾಂಕದವರೆಗೆ ತಡೆಹಿಡಿಯಲಾಗಿದೆ” ಎಂದು ನ್ಯಾಯಾಂಗ ಸದಸ್ಯೆ ನ್ಯಾಯಮೂರ್ತಿ ಎಸ್ ಸುಜಾತಾ ಮತ್ತು ಆಡಳಿತಾತ್ಮಕ ಸದಸ್ಯ ರಾಕೇಶ್ ಕುಮಾರ್ ಗುಪ್ತಾ ಅವರನ್ನೊಳಗೊಂಡ ಪೀಠವು ಆದೇಶಿಸಿದ್ದು, ಆದೇಶ ಸಂಬಂಧ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ,

ತಮ್ಮ ಅಮಾನತು ಪ್ರಶ್ನಿಸಿ ಶಿವಾನಂದ ನಾಯಿಕವಾಡಿ ಅವರು ಸಿಎಟಿ ಮೊರೆ ಹೋಗಿದ್ದರು. ಅರ್ಜಿಯಲ್ಲಿ ಕೆಲ ಗುತ್ತಿಗೆದಾರರು ರಾಯಭಾಗ ಮೀಸಲು ಅರಣ್ಯ ಪ್ರದೇಶದಲ್ಲಿ ಅನಧಿಕೃತ ನಿರ್ಮಾಣ ಮಾಡಿದ್ದರು. ಈ ಸಂಬಂಧ ಪ್ರಬಲ ವ್ಯಕ್ತಿಗಳನ್ನು ಸಂಪರ್ಕಿಸಿ ನನ್ನ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತಿದ್ದರು. ಅಕ್ರಮ ನಿರ್ಮಾಣಕ್ಕೆ ಅನುಮತಿ ನೀಡುವಂತೆ ವಿವಿಧ ವ್ಯಕ್ತಿಗಳಿಂದ ದೂರವಾಣಿ ಕರೆಗಳು ಬರುತ್ತಿದ್ದವು.

ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ
ಶಾಸಕರ ಜೊತೆ ಅಸಭ್ಯವಾಗಿ ಮಾತನಾಡಿದ ಗೋಕಾಕ ಡಿಸಿಎಫ್ ಅಮಾನತು

ದೂರವಾಣಿ ಕರೆ ಮಾಡುತ್ತಿದ್ದ ಕೆಲವರು ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಅವರ ರೀತಿಯಲ್ಲೇ ಮಾತನಾಡುತ್ತಿದ್ದರು. ಸಾಕಷ್ಟು ಬೆದರಿಕೆಗಳು ಬರುತ್ತಿದ್ದವು.

ಅದೇ ರೀತಿ ಜನವರಿ 8, 2024 ರಂದೂ ಕೂಡ ನನಗೆ ದೂರವಾಣಿ ಕರೆ ಬಂದಿದ್ದು, ಕರೆ ಮಾಡಿದ ವ್ಯಕ್ತಿ ಇಂತಹವರೇ ಇರಬೇಕೆಂದು ಮಾತನಾಡಿದ್ದೆ. ಶಾಸಕರನ್ನು ಅವಮಾನಿಸುವ ಅಥವಾ ಬೆದರಿಕೆ ಹಾಕುವ ಯಾವುದೇ ಉದ್ದೇಶವಿರಲಿಲ್ಲ. ಆದರೆ, ಶಾಸಕರು ತಮ್ಮ ಫೋನ್‌ನಲ್ಲಿ ಸಂಭಾಷಣೆಯನ್ನು ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಬಿಡುಗಡೆ ಮಾಡಿ ಅವರ ನನ್ನ ವರ್ಚಸ್ಸನ್ನು ಹಾಳು ಮಾಡಿದ್ದಾರೆ.

ಶಾಸಕರು ಮುಖ್ಯಮಂತ್ರಿಗೆ ದೂರು ಸಲ್ಲಿಸಿದ ನಂತರ, ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ನನಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದರು. ಘಟನೆ ಬಗ್ಗೆ ಎಲ್ಲಾ ವಿವರಗಳನ್ನು ನೀಡಿದ್ದರೂ ನನ್ನನ್ನು ಅಮಾನತುಗೊಳಿಸಿದ್ದಾರೆಂದು ಹೇಳಿಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com