ರಾಷ್ಟ್ರ ನಿರ್ಮಾಣಕ್ಕೆ ಯುವಕರು ಕೊಡುಗೆ ನೀಡಿ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ದೇಶಕ್ಕೆ ಯುವಕರ ಕೊಡುಗೆಯ ಮಹತ್ವವನ್ನು ಒತ್ತಿ ಹೇಳಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, 'ಯುವಕರು ಭಾರತದ ಭವಿಷ್ಯ ಮತ್ತು ಅಭಿವೃದ್ಧಿಯ ಪ್ರಮುಖ ಅಂಶವಾಗಿದ್ದಾರೆ. ರಾಷ್ಟ್ರದ ಪರಿವರ್ತನೆಯಲ್ಲಿ ಯುವಕರ ಪಾತ್ರವು ಪ್ರಮುಖವಾಗಿದೆ' ಎಂದು ಹೇಳಿದರು.
ಥಾವರ್ ಚಂದ್ ಗೆಹ್ಲೋಟ್
ಥಾವರ್ ಚಂದ್ ಗೆಹ್ಲೋಟ್

ಮಡಿಕೇರಿ: ದೇಶಕ್ಕೆ ಯುವಕರ ಕೊಡುಗೆಯ ಮಹತ್ವವನ್ನು ಒತ್ತಿ ಹೇಳಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, 'ಯುವಕರು ಭಾರತದ ಭವಿಷ್ಯ ಮತ್ತು ಅಭಿವೃದ್ಧಿಯ ಪ್ರಮುಖ ಅಂಶವಾಗಿದ್ದಾರೆ. ರಾಷ್ಟ್ರದ ಪರಿವರ್ತನೆಯಲ್ಲಿ ಯುವಕರ ಪಾತ್ರವು ಪ್ರಮುಖವಾಗಿದೆ' ಎಂದು ಹೇಳಿದರು.

ಕೊಡಗಿನ ಗೋಣಿಕೊಪ್ಪಲಿನ ಕೂರ್ಗ್ ಪಬ್ಲಿಕ್ ಸ್ಕೂಲ್‌ನಲ್ಲಿ ಆಯೋಜಿಸಿದ್ದ ಕಾಶ್ಮೀರಿ ಯುವ ವಿನಿಮಯ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಭಾರತದ ಜನಸಂಖ್ಯಾ ಬಲವನ್ನು ಎತ್ತಿ ತೋರಿಸಿದ ಅವರು, ದೇಶದ ಜನಸಂಖ್ಯೆಯ ಸರಿಸುಮಾರು 65 ಪ್ರತಿಶತದಷ್ಟು ಜನರು 35 ವರ್ಷದೊಳಗಿನವರಾಗಿದ್ದಾರೆ. ರಾಷ್ಟ್ರ ನಿರ್ಮಾಣದಲ್ಲಿ ಯುವಜನರ ಕೊಡುಗೆ ಅತ್ಯಗತ್ಯ ಎಂದು ಅವರು ಒತ್ತಿ ಹೇಳಿದರು.

ಸ್ವಾತಂತ್ರ್ಯ ಬಂದ 75 ವರ್ಷಗಳಲ್ಲಿ ಭಾರತ ಗಮನಾರ್ಹ ಪ್ರಗತಿ ಸಾಧಿಸಿದೆ. ಸ್ವಾವಲಂಬನೆಯತ್ತ ರಾಷ್ಟ್ರದ ಪ್ರಯಾಣ ಮುಂದುವರಿದಿದೆ. ಭಾರತವು ಈಗ ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಜಾಗತಿಕವಾಗಿ 3ನೇ ಅತಿದೊಡ್ಡ ಆರ್ಥಿಕತೆಯ ಸ್ಥಾನವನ್ನು ಭದ್ರಪಡಿಸುವತ್ತ ಸ್ಥಿರವಾಗಿ ಪ್ರಗತಿ ಸಾಧಿಸುತ್ತಿದೆ ಎಂದರು.

2047 ರವರೆಗಿನ ಅವಧಿಯನ್ನು ಕರ್ತವ್ಯದ ಯುಗವಾಗಿ ಪರಿವರ್ತಿಸಲು ಸಾಮೂಹಿಕ ಪ್ರಯತ್ನಗಳು ಅಗತ್ಯ ಎಂದ ಅವರು, ಭವ್ಯ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಮತ್ತು ದೇಶವನ್ನು ವಿಶ್ವದ ಅತ್ಯುತ್ತಮ ಸ್ಥಾನದಲ್ಲಿ ಇರಿಸಲು ಕರೆ ನೀಡಿದರು.

ಕರ್ನಾಟಕವು ಪ್ರಗತಿಪರ ಮತ್ತು ಸಮೃದ್ಧ ರಾಜ್ಯವಾಗಿದೆ. ಶಿಕ್ಷಣ, ಆರೋಗ್ಯ, ಕೃಷಿ, ತಂತ್ರಜ್ಞಾನ, ಕೈಗಾರಿಕೆ ಮತ್ತು ಇತರ ವಿವಿಧ ಕ್ಷೇತ್ರಗಳಲ್ಲಿ ಮಹತ್ವದ ಪ್ರಗತಿ ಸಾಧಿಸಿದೆ. ‘ಕಾಶ್ಮೀರಿ ಯುವ ವಿನಿಮಯ ಕಾರ್ಯಕ್ರಮ’ವು ಕಾಶ್ಮೀರದ ವಿದ್ಯಾರ್ಥಿಗಳಿಗೆ ಭಾರತದ ವೈವಿಧ್ಯಮಯ ಗುರುತನ್ನು ಅನ್ವೇಷಿಸಲು ಅವಕಾಶ ಒದಗಿಸಿದೆ ಎಂದು ಅವರು ಅಭಿಪ್ರಾಯಪಟ್ಟರು.

ರಾಜ್ಯ ವಿಧಾನಸಭಾ ಸ್ಪೀಕರ್ ಯುಟಿ ಖಾದರ್ ಅವರು, ಯುವಕರು ರಾಷ್ಟ್ರದ ಒಳಿತಿಗಾಗಿ ಶ್ರಮಿಸಬೇಕು  ಎಂದು ಕರೆ ನೀಡಿದರು. ಕಾಶ್ಮೀರದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ನೀವು ಕಾಶ್ಮೀರದಿಂದ ರಾಜ್ಯಕ್ಕೆ ರಾಯಭಾರಿಗಳಾಗಿ ಬಂದಿದ್ದೀರಿ. ನೀವು ಇಲ್ಲಿ ಕಲಿತ ವಿಷಯಗಳನ್ನು ಕಾಶ್ಮೀರದ ಸಮುದಾಯದ ನಡುವೆ ಪ್ರಚಾರ ಮಾಡಬೇಕು ಎಂದರು.

ಭಾರತವು ವಿಶಿಷ್ಟ ಸಂಸ್ಕೃತಿಗಳಿಂದ ತುಂಬಿದ ವೈವಿಧ್ಯಮಯ ದೇಶವಾಗಿದೆ ಮತ್ತು ವಿವಿಧತೆಯಲ್ಲಿ ಏಕತೆ ಈ ರಾಷ್ಟ್ರದ ಶಕ್ತಿಯಾಗಿ ಉಳಿದಿದೆ ಎಂದರು.

ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎಎಸ್ ಪೊನ್ನಣ್ಣ ಮಾತನಾಡಿ, ‘ದೇಶದ ಉತ್ತರದಿಂದ ದಕ್ಷಿಣದ ತುದಿಯವರೆಗೆ ಏಕತೆಯನ್ನು ಕಾಣಬಹುದು ಮತ್ತು ಇದು ಭಾರತವಾಗಿದೆ. ನಾವೆಲ್ಲರೂ ವಿಭಿನ್ನ ಸಂಸ್ಕೃತಿಯನ್ನು ಆಚರಿಸುತ್ತಿರುವಾಗ, ಮೊದಲು ಭಾರತೀಯ ಎಂಬ ಕಲ್ಪನೆಯನ್ನು ನಾವೆಲ್ಲರೂ ಅನುಸರಿಸಬೇಕು ಎಂದು ಹೇಳಿದರು.

ಕಾಶ್ಮೀರಿ ವಿದ್ಯಾರ್ಥಿಗಳು ಕೊಡಗಿನ ಸಂಸ್ಕೃತಿಯನ್ನು ಒಂದಿಷ್ಟು ಕಲಿತರೆ ಈ ಉಪಕ್ರಮಕ್ಕೆ ಯಶಸ್ಸು ಸಿಕ್ಕಂತಾಗುತ್ತದೆ ಎಂದು ಅವರು ವಿಶ್ಲೇಷಿಸಿದರು.

ವಿನಿಮಯ ಕಾರ್ಯಕ್ರಮವನ್ನು ಡಿಸೆಂಬರ್ 29 ರಂದು ಉದ್ಘಾಟಿಸಲಾಯಿತು ಮತ್ತು ಕಾಶ್ಮೀರದ ವಿವಿಧ ಜಿಲ್ಲೆಗಳಿಂದ ಒಟ್ಟು 120 ವಿದ್ಯಾರ್ಥಿಗಳು ಉಪಕ್ರಮದಲ್ಲಿ ಭಾಗವಹಿಸಿದ್ದರು. ಕಾಫಿ ತೋಟಗಳು, ವನ್ಯಜೀವಿ ಅಭಯಾರಣ್ಯ ಸೇರಿದಂತೆ ಜಿಲ್ಲೆಯ ಹಲವಾರು ಪ್ರದೇಶಗಳಿಗೆ ಭೇಟಿ ನೀಡಿದ ನಂತರ ವಿದ್ಯಾರ್ಥಿಗಳು ಕಲೆ, ಸಂಸ್ಕೃತಿ, ವನ್ಯಜೀವಿ, ಪ್ರಕೃತಿ ಮತ್ತು ಭೂಮಿಯ ಬಗ್ಗೆ ತಿಳಿದುಕೊಂಡರು. 

ಸಮಾರಂಭದಲ್ಲಿ ಕೊಡಗು ಡಿಸಿ ವೆಂಕಟ್ ರಾಜಾ, ಸಿಒಪಿಎಸ್ ಪ್ರಾಂಶುಪಾಲ ಎಂ ರಾಮಚಂದ್ರನ್, ವಿರಾಜಪೇಟೆ ತಹಶೀಲ್ದಾರ್ ಪ್ರಶಾಂತ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com