ಭಾರತದ ಬೆಳವಣಿಗೆ ತಂತ್ರಜ್ಞಾನ ಆಧಾರಿತ: ಕೇಂದ್ರ ಸಚಿವ ಜಿತೇಂದ್ರ ಸಿಂಗ್

ಭಾರತದ ಬೆಳವಣಿಗೆಯು ತಂತ್ರಜ್ಞಾನ ಆಧಾರಿತವಾಗಲಿದೆ ಮತ್ತು ಇತ್ತೀಚಿನ ವಿಜ್ಞಾನದ ಯಶಸ್ಸಿನ ಕಥೆಗಳು 2047 ಅಮೃತ ಕಾಲದ ವಿಷನ್ ಸಾಧನೆಗೆ  ದೇಶವನ್ನು ಕೊಂಡೊಯ್ಯಲು ವೇಗವನ್ನು ಹೆಚ್ಚಿಸಿವೆ ಎಂದು ಕೇಂದ್ರ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಮಂಗಳವಾರ ಹೇಳಿದ್ದಾರೆ.
ಕೇಂದ್ರ ಸಚಿವ ಜೀತೇಂದ್ರ ಸಿಂಗ್
ಕೇಂದ್ರ ಸಚಿವ ಜೀತೇಂದ್ರ ಸಿಂಗ್
Updated on

ಬೆಂಗಳೂರು: ಭಾರತದ ಬೆಳವಣಿಗೆಯು ತಂತ್ರಜ್ಞಾನ ಆಧಾರಿತವಾಗಲಿದೆ ಮತ್ತು ಇತ್ತೀಚಿನ ವಿಜ್ಞಾನದ ಯಶಸ್ಸಿನ ಕಥೆಗಳು 2047 ಅಮೃತ ಕಾಲದ ವಿಷನ್ ಸಾಧನೆಗೆ  ದೇಶವನ್ನು ಕೊಂಡೊಯ್ಯಲು ವೇಗವನ್ನು ಹೆಚ್ಚಿಸಿವೆ ಎಂದು ಕೇಂದ್ರ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಮಂಗಳವಾರ ಹೇಳಿದ್ದಾರೆ.

ರಾಮನ್ ಸಂಶೋಧನಾ ಸಂಸ್ಥೆಯ  ಪ್ಲಾಟಿನಂ ಜುಬಿಲಿ ಆಚರಣೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಿಂಗ್, "ಚಂದ್ರಯಾನ-3, ಆದಿತ್ಯ L1 ಮತ್ತು ಇತ್ತೀಚಿನ XPoSat ಮಿಷನ್, ಇದರಲ್ಲಿ ರಾಮನ್ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಭಾಗಿಯಾಗಿದ್ದಾರೆ, ಇವೆಲ್ಲವೂ ಭಾರತದ ವಿಜ್ಞಾನದ ಯಶಸ್ಸಿನ ಕಥೆಗಳಾಗಿದ್ದು, ದೇಶದ ಪ್ರತಿಭೆ ಮತ್ತು ವೈಜ್ಞಾನಿಕ ಸಾಮರ್ಥ್ಯಗಳನ್ನು ಜಗತ್ತಿಗೆ ಮನವರಿಕೆ ಮಾಡಿಕೊಟ್ಟಿವೆ ಎಂದರು.

 ಭಾರತದ ಬೆಳವಣಿಗೆ ಈಗಾಗಲೇ ಪ್ರಾರಂಭವಾಗಿದೆ. ದೇಶದ ಸಾಮೂಹಿಕ ಬೆಳವಣಿಗೆಗೆ ವಿಜ್ಞಾನಿಗಳು ಮತ್ತು ವೈಜ್ಞಾನಿಕ ಸಂಸ್ಥೆಗಳು ಒಗ್ಗೂಡಿ ಕೆಲಸ ಮಾಡಬೇಕಾಗಿದೆ ಎಂದು ಸಲಹೆ ನೀಡಿದರು.

ಪ್ರೊಫೆಸರ್ ಸಿ ವಿ ರಾಮನ್ ಅವರಂತೆ ಭಾರತೀಯ ವಿಜ್ಞಾನಿಗಳು ಊಹಿಸಿದಂತೆ 2047 ರ ವೇಳೆಗೆ ದೇಶವು ಉನ್ನತ ಮಟ್ಟ ತಲುಪುತ್ತದೆ ಎಂದು ಕೇಂದ್ರ ಸಚಿವರು ಭರವಸೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಆರ್‌ಆರ್‌ಐ ನಿರ್ದೇಶಕ ತರುಣ್ ಸೌರದೀಪ್, ಆರ್‌ಆರ್‌ಐ ತಂಡವನ್ನು ಅಭಿನಂದಿಸಿದರು ಮತ್ತು ಎಕ್ಸ್‌ಪೋಸ್ಯಾಟ್ ಮಿಷನ್‌ನ ಯಶಸ್ವಿ ಉಡಾವಣೆ ಮತ್ತು ಅದರ ಪ್ರಾಥಮಿಕ ಪೇಲೋಡ್, ಪೋಲಿಕ್ಸ್‌ನತ್ತ ಸಂಸ್ಥೆಯ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳ ಪ್ರಯತ್ನಗಳ ಬಗ್ಗೆ ಪ್ರೇಕ್ಷಕರಿಗೆ ತಿಳಿಸಿದರು.

ಹೋಮಿ ಭಾಭಾ ನ್ಯಾಷನಲ್ ಇನ್‌ಸ್ಟಿಟ್ಯೂಟ್‌ನ ಚಾನ್ಸೆಲರ್ ಮತ್ತು ಅಣುಶಕ್ತಿ ಇಲಾಖೆಯ (ಡಿಎಇ) ಮಾಜಿ ಅಧ್ಯಕ್ಷರಾದ ಅನಿಲ್ ಕಾಕೋಡ್ಕರ್, ಜ್ಞಾನದ ಗಡಿಗಳನ್ನು ಮತ್ತಷ್ಟು ವಿಸ್ತರಿಸುವಲ್ಲಿ ಆರ್‌ಆರ್‌ಐ ನೀಡಿದ ವೈಜ್ಞಾನಿಕ ಕೊಡುಗೆಗಳನ್ನು ಶ್ಲಾಘಿಸಿದರು.

ಇಸ್ರೋ ಮಾಜಿ ಅಧ್ಯಕ್ಷ ಎ ಎಸ್ ಕಿರಣ್ ಕುಮಾರ್ ಅವರು ಹಲವಾರು ಸಂಶೋಧನಾ ಕ್ಷೇತ್ರಗಳಲ್ಲಿ ಸಂಸ್ಥೆಯ ಪಾತ್ರದ ಬಗ್ಗೆ ಬೆಳಕು ಚೆಲ್ಲಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com