ಬಳ್ಳಾರಿ: ಸಿನಿಮಾ ಸ್ಟೈಲ್ ನಲ್ಲಿ ಪೋಷಕರ ವಿರೋಧ ಮಧ್ಯೆಯೂ ಕಾರಿನಲ್ಲಿ ಹಾರ ಬದಲಿಸಿಕೊಂಡು ಪ್ರೇಮಿಗಳು ವಿವಾಹ!

ಇದು ಸಿನಿಮಾ ಅಲ್ಲ, ಸಿನಿಮಾ ರೀತಿಯ ರಿಯಲ್ ಲೈಫ್ ಸ್ಟೋರಿ. ಪೋಷಕರು ವಿವಾಹಕ್ಕೆ ಒಪ್ಪಿಗೆ ನೀಡಿಲ್ಲವೆಂದು ಯುವಕ ಯುವತಿಯನ್ನು ಕಾರಿನಲ್ಲಿ ಬಲವಂತವಾಗಿ ಕರೆದುಕೊಂಡು ಹೋಗಿ ಪರಸ್ಪರ ಹಾರ ಬದಲಾಯಿಸಿಕೊಂಡು ತಾಳಿ ಕಟ್ಟಿ ವಿವಾಹವಾದ ಪ್ರಸಂಗ ಬಳ್ಳಾರಿಯಲ್ಲಿ ನಡೆದಿದೆ. 
ಬಳ್ಳಾರಿಯ ಶಾಂತಿಧಾಮ ಬಳಿ ನಡೆದ ಹೈಡ್ರಾಮಾ
ಬಳ್ಳಾರಿಯ ಶಾಂತಿಧಾಮ ಬಳಿ ನಡೆದ ಹೈಡ್ರಾಮಾ

ಬಳ್ಳಾರಿ: ಇದು ಸಿನಿಮಾ ಅಲ್ಲ, ಸಿನಿಮಾ ರೀತಿಯ ರಿಯಲ್ ಲೈಫ್ ಸ್ಟೋರಿ. ಪೋಷಕರು ವಿವಾಹಕ್ಕೆ ಒಪ್ಪಿಗೆ ನೀಡಿಲ್ಲವೆಂದು ಯುವಕ ಯುವತಿಯನ್ನು ಕಾರಿನಲ್ಲಿ ಬಲವಂತವಾಗಿ ಕರೆದುಕೊಂಡು ಹೋಗಿ ಪರಸ್ಪರ ಹಾರ ಬದಲಾಯಿಸಿಕೊಂಡು ತಾಳಿ ಕಟ್ಟಿ ವಿವಾಹವಾದ ಪ್ರಸಂಗ ಬಳ್ಳಾರಿಯಲ್ಲಿ ನಡೆದಿದೆ. 

ಬಳ್ಳಾರಿ ತೆಕ್ಕಲಕೋಟೆ ಯುವಕ ಶಿವಪ್ರಸಾದ್ ಹಾಗೂ ಕೊಪ್ಪಳ ಮೂಲದ ಯುವತಿ ಅಮೃತಾ ಪರಸ್ಪರ ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಇವರ ಮದುವೆಗೆ ಅಮೃತಾಳ ಪೋಷಕರ ಒಪ್ಪಿಗೆಯಿರಲಿಲ್ಲ. ಯುವಕ ಕೆಳಜಾತಿಗೆ ಸೇರಿದ್ದಾನೆ ಎಂಬ ಕಾರಣಕ್ಕೆ ಪೋಷಕರು ಮಗಳ ಪ್ರೇಮ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಪ್ರೇಮಿಗಳು ನಿನ್ನೆ ಸಂಜೆ ಓಡಿ ಹೋಗಿ ಸಿರುಗುಪ್ಪ ನಗರದಲ್ಲಿ ಕಾರಿನಲ್ಲಿ ಹಾರ ಬದಲಾಯಿಸಿಕೊಂಡು ವಿವಾಹವಾಗಿದ್ದಾರೆ.

ಬಳಿಕ ತೆಕ್ಕಲುಕೋಟೆ ಠಾಣೆಗೆ ಬಂದು ರಿಜಿಸ್ಟರ್​ ಮದುವೆ ಮಾಡಿಸಿ ಎಂದು ಪೊಲೀಸರ ಬಳಿ ಕೇಳಿಕೊಂಡಿದ್ದಾರೆ. ಆಗ ಪೊಲೀಸರು ಈಗ ಸಮಯ ಮಧ್ಯರಾತ್ರಿ 12 ಗಂಟೆಯಾಗಿದೆ. ಬೆಳಿಗ್ಗೆ ನೋಡೋಣ ಎಂದು ಹೇಳಿ ಯುವತಿ ಅಮೃತಾಳನ್ನು ಬಳ್ಳಾರಿ ಶಾಂತಿಧಾಮ ಸಾಂತ್ವನ ಕೇಂದ್ರದಲ್ಲಿ ತಂದು ಬಿಟ್ಟರು. ವಿಷಯ ತಿಳಿದು ಅಮೃತಾಳ ಪೋಷಕರು ಶಾಂತಿಧಾಮ ಬಳಿ ಬಂದು ತೀವ್ರ ವಾಗ್ವಾದಕ್ಕಿಳಿದರು. ಯುವಕ ಮತ್ತು ಯುವತಿಯ ಪೋಷಕರ ಮಧ್ಯೆ ತೀವ್ರ ವಾಗ್ವಾದ ನಡೆದು ಶಾಂತಿಧಾಮ ಮುಂದೆ ಹೈಡ್ರಾಮಾವೇ ನಡೆಯಿತು. ಯುವತಿ ಒಮ್ಮೆ ಪೋಷಕರು ಬೇಕು, ಇನ್ನೊಮ್ಮೆ ಗಂಡ ಬೇಕು ಎಂದು ಹೇಳುತ್ತಿದ್ದಳು.

ಅಮೃತಾಳ ದ್ವಂದ್ವ ಹೇಳಿಕೆಯಿಂದ ಸಾಂತ್ವನ ಕೇಂದ್ರದ ಬಳಿ ಹೈಡ್ರಾಮಾ ಸೃಷ್ಟಿ ಆಗಿದೆ. ಆಗ ಪೋಷಕರು ಅಮೃತಾಳನ್ನು ಬಲವಂತವಾಗಿ ಕರೆದೊಯ್ಯಲು ಯತ್ನಿಸಿದ್ದಾರೆ. ಈ ವೇಳೆ ಶಿವಪ್ರಸಾದ್​ ಮತ್ತು ಅಮೃತಾ ಪೋಷಕರ ನಡುವೆ ಕೆಲ ಕಾಲ ವಾಗ್ವಾದ, ಗಲಾಟೆ ನಡೆಯಿತು.

ಕೊನೆಗೂ ಅಮೃತಾಳನ್ನು ಕಾರಿನಲ್ಲಿ ಕೂರಿಸಿಕೊಂಡು ಪೋಷಕರು ಕರೆದುಕೊಂಡು ಹೋಗಲು ಮುಂದಾದರು. ಆಗ ಶಿವಪ್ರಸಾದ್ ಕಾರನ್ನು ಅಡ್ಡಗಟ್ಟಿದ್ದಾನೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಪೊಲೀಸರ ಎದುರು ಶಿವಪ್ರಸಾದ್​ ನನಗೆ ಹೆಂಡತಿ ಬೇಕು,ನನಗೆ ರಕ್ಷಣೆ ನೀಡಿ ಎಂದು ಪಟ್ಟು ಹಿಡಿದನು. ಈ ಸಂಬಂಧ ಶಿವಪ್ರಸಾದ್​ ರಾತ್ರಿಯಿಡೀ ಸಾಂತ್ವನ ಕೇಂದ್ರದ ಬಳಿಯೇ ಕುಳಿತಿದ್ದನು. ಕೊನೆಗೆ ಅಮೃತಾ ಪೋಷಕರು ಆಕೆಯನ್ನು ಶಿವಪ್ರಸಾದ್​ ಬಳಿ ಬಿಟ್ಟು ಹೋದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com