ಧರ್ಮದ ಹಿಂದೆ ಹೋದರೆ ಪಾಕಿಸ್ತಾನ- ಆಫ್ಘಾನಿಸ್ತಾನದಂತೆ ಭಾರತವೂ ದಿವಾಳಿಯಾಗುತ್ತದೆ: ಯತೀಂದ್ರ ಸಿದ್ದರಾಮಯ್ಯ

ಧರ್ಮದ ಹಿಂದೆ ಹೋದರೆ ದೇಶವು ಅಭಿವೃದ್ಧಿ ಕಾಣುವುದಿಲ್ಲ. ನಮ್ಮ ದೇಶವನ್ನು ಹಿಂದೂ ರಾಷ್ಟ್ರ ಮಾಡಲು ಹೊರಟಿದ್ದಾರೆ. ಧರ್ಮದ ಹೆಸರಿನಲ್ಲಿ ಹೋದರೆ ಭಾರತ ದೇಶ ಪಾಕಿಸ್ತಾನ, ಅಫ್ಘಾನಿಸ್ತಾನ ದೇಶಗಳಂತೆ ದಿವಾಳಿ ಆಗುತ್ತದೆ
ಯತೀಂದ್ರ
ಯತೀಂದ್ರ

ದಾವಣಗೆರೆ: ಧರ್ಮದ ಹಿಂದೆ ಹೋದರೆ ದೇಶವು ಅಭಿವೃದ್ಧಿ ಕಾಣುವುದಿಲ್ಲ. ನಮ್ಮ ದೇಶವನ್ನು ಹಿಂದೂ ರಾಷ್ಟ್ರ ಮಾಡಲು ಹೊರಟಿದ್ದಾರೆ. ಧರ್ಮದ ಹೆಸರಿನಲ್ಲಿ ಹೋದರೆ ಭಾರತ ದೇಶ ಪಾಕಿಸ್ತಾನ, ಅಫ್ಘಾನಿಸ್ತಾನ ದೇಶಗಳಂತೆ ದಿವಾಳಿ ಆಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಪುತ್ರ ಮತ್ತು ಕಾಂಗ್ರೆಸ್ ಶಾಸಕ ಯತೀಂದ್ರ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ದಾವಣಗೆರೆ ಜಿಲ್ಲೆಯ ರುದ್ರನಕಟ್ಟೆ ಗ್ರಾಮದಲ್ಲಿ ಕ್ರಾಂತಿವೀರ ಶ್ರೀ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಸಂಘಟನೆ ಹಾಗೂ ಸಮಸ್ತ ಕುರುಬ ಸಮುದಾಯದಿಂದ ಏರ್ಪಡಿಸಿದ್ದ ಸಂಗೊಳ್ಳಿ ರಾಯಣ್ಣನವರ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದ ಅವರು ,ಹಿಂದೂ ಸ್ಥಾಪನೆಗೆ ಅವಕಾಶ ಕೊಡಬೇಡಿ. ಒಂದು ವೇಳೆ ಅವಕಾಶ ಕೊಟ್ಟರೆ ಭಾರತವು ದಿವಾಳಿಯಾಗುತ್ತದೆ.

ದೇಶ ಹಿಂದೂ ರಾಷ್ಟ್ರವಾದರೆ ಅಭಿವೃದ್ಧಿಯಾಗುವುದಿಲ್ಲ, ಧರ್ಮದ ಹಿಂದೇ ಹೋದ ಪಾಕಿಸ್ತಾನ, ಅಫ್ಘಾನಿಸ್ತಾನದ ಆರ್ಥಿಕ ಪರಿಸ್ಥಿತಿ ಎಲ್ಲರಿಗೂ ಗೊತ್ತಿರುವ ವಿಚಾರ. ಇದೇ ರೀತಿ ನಮ್ಮ ದೇಶಕ್ಕೂ ಅಪಾಯ ಗ್ಯಾರಂಟಿಯಾಗಿದ್ದು ಎಚ್ಚರದಿಂದಿರಿ ಎಂದಿದ್ದಾರೆ.

ಇಂದು ಜಾತ್ಯಾತೀತ ತತ್ವಕ್ಕೆ ಅಪಾಯ ಎದುರಾಗಿದೆ, ಭಾರತವನ್ನು RSS ಮತ್ತು ಬಿಜೆಪಿ ಹಿಂದು ರಾಷ್ಟ್ರ ಮಾಡಲು ಹೊರಟಿದೆ. ಇದಕ್ಕೆ ಅವಕಾಶ ಕೊಡಲೇ ಬೇಡಿ ಎಂದಿದ್ದಾರೆ. ಧರ್ಮದ ಹಿಂದೇ ಹೋದ ಪಾಕಿಸ್ತಾನ, ಅಫ್ಘಾನಿಸ್ತಾನದಂತೆ ನಮ್ಮ ದೇಶವ ದಿವಾಳಿಯಾಗುತ್ತದೆ. ನಾವು ಹುಷಾರಾಗಿರಬೇಕು. ಧರ್ಮ ತೋರಿಸಿ ನಿಜವಾದ ಸಮಸ್ಯೆ ಮರೆಸುತ್ತಿದ್ದಾರೆ.

ನಮ್ಮ ದೇಶದಲ್ಲಿ ಜಾತ್ಯಾತೀತ ತತ್ವ ಪಾಲಿಸಬೇಕು ಎಂದಿದ್ದಾರೆ. ಮೇಲ್ವರ್ಗದ ನಿಯಂತ್ರಣದಲ್ಲಿ ಸಮಾಜ ಇದೆ, ಬಹುಸಂಖ್ಯಾತರಾದ ನಮಗೆ ಉನ್ನತ ಸ್ಥಾನ ಸಿಗಬೇಕಿದೆ ಎಂದು ಅವರು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಐದು ಸಿಎಂ ಆಗಿರಬೇಕು ಎಂದ ಯತೀಂದ್ರ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಎರಡನೇ ಬಾರಿ ಕರ್ನಾಟಕ ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಿದೆ. ಹಿಂದುಳಿದ, ದಲಿತರಿಗಾಗಿ ಕೆಲಸ ಮಾಡುತ್ತಿದ್ದಾರೆ, ಪೂರ್ಣ ಕೆಲಸ ಮಾಡಲು ನಿಮ್ಮ ಆಶೀರ್ವಾದ ಬೇಕು. ಐದು ವರ್ಷ ಸಿಎಂ ಆಗಿ ಮುಂದುವರೆಯಬೇಕು. ಲೋಕಸಭೆ ಚುನಾವಣೆ ಹತ್ತಿರವಿದ್ದು ಎಲ್ಲರೂ ಬೆಂಬಲಿಸಿ ಎಂದು ಯತೀಂದ್ರ ಸಿದ್ದರಾಮಯ್ಯ ಮನವಿ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com