ಬೆಂಗಳೂರು: ವಿಶ್ವವಿದ್ಯಾಲಯ ಸ್ಥಾನಮಾನ ಪಡೆಯಲು ಮೌಂಟ್ ಕಾರ್ಮೆಲ್ ಮುಂದು; ಕೋ-ಎಡ್ ಪದ್ಧತಿ ಅಳವಡಿಕೆಗೆ ನಿರ್ಧಾರ

ಹೆಣ್ಣು ಮಕ್ಕಳಿಗಾಗಿ ಇರುವ ಬೆಂಗಳೂರಿನ ಐತಿಹಾಸಿಕ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಮೌಂಟ್ ಕಾರ್ಮೆಲ್ ಕಾಲೇಜು (ಎಂಸಿಸಿ) ಕೋ-ಎಡ್ ಶಿಕ್ಷಣ ಜಾರಿಗೆ ನಿರ್ಧರಿಸಿದೆ.
ಮೌಂಟ್ ಕಾರ್ಮೆಲ್ ಕಾಲೇಜು
ಮೌಂಟ್ ಕಾರ್ಮೆಲ್ ಕಾಲೇಜು

ಬೆಂಗಳೂರು: ಹೆಣ್ಣು ಮಕ್ಕಳಿಗಾಗಿ ಇರುವ ಬೆಂಗಳೂರಿನ ಐತಿಹಾಸಿಕ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಮೌಂಟ್ ಕಾರ್ಮೆಲ್ ಕಾಲೇಜು (ಎಂಸಿಸಿ) ಕೋ-ಎಡ್ ಶಿಕ್ಷಣ ಜಾರಿಗೆ ನಿರ್ಧರಿಸಿದೆ. ಇನ್ನೂ ಮುಂದೆ ಎಲ್ಲಾ ಕೋರ್ಸ್ ಗಳು ಗಂಡು ಮಕ್ಕಳಿಗೂ ತೆರೆಯಲಿವೆ ಎಂದು ಬೆಂಗಳೂರು ಸಿಟಿ ಯೂನಿವರ್ಸಿಟಿಯೊಂದಿಗೆ ಸಂಯೋಜಿತವಾಗಿರುವ ಸ್ವಾಯತ್ತ ಸಂಸ್ಥೆ ಗುರುವಾರ ಹೇಳಿದೆ. ಈ ಹಿಂದೆ 2016 ರಲ್ಲಿ ಸ್ನಾತಕೋತ್ತರ ಕೋರ್ಸ್‌ಗಳಿಗೆ ಮಾತ್ರ ಪುರುಷ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಕಾಲೇಜು ಅವಕಾಶ ನೀಡಿತ್ತು.

ಸಂಸ್ಥೆಯು 75 ವರ್ಷಗಳಿಂದ ವಿದ್ಯಾರ್ಥಿನಿಯರಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುತ್ತಿದ್ದು, NAAC ನಿಂದ A+ ಗ್ರೇಡ್‌ನ ಮಾನ್ಯತೆಯನ್ನು ಮರು ಪಡೆದುಕೊಂಡಿದೆ. ಸೇಂಟ್ ಜೋಸೆಫ್ ಕಾಲೇಜು, ಜ್ಯೋತಿ ನಿವಾಸ್ ಪಿಯು ಕಾಲೇಜು, ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ ಮತ್ತು ಬಿಷಪ್ ಕಾಟನ್ ಮಹಿಳಾ ಕ್ರಿಶ್ಚಿಯನ್ ಕಾಲೇಜುಗಳಂತಹ ಕೆಲವೇ ಸಂಸ್ಥೆಗಳು ಕೇವಲ ಹೆಣ್ಣು ಮಕ್ಕಳನ್ನು ಮಾತ್ರ ದಾಖಲಿಸಿಕೊಳ್ಳುತ್ತಿವೆ. 

2024-25ರ ಶೈಕ್ಷಣಿಕ ವರ್ಷದಲ್ಲಿಕೋ-ಎಡ್ ಶಿಕ್ಷಣ ಜಾರಿಗೆ ಎಂಸಿಸಿ  ಆಡಳಿತ ಮಂಡಳಿಯು ನಿರ್ಧರಿಸಿದೆ ಎಂದು ಪ್ರಾಂಶುಪಾಲರಾದ ಡಾ ಜಾರ್ಜ್ ಲೇಖಾ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು. ಮುಂದಿನ ವರ್ಷ ವಿಶ್ವವಿದ್ಯಾನಿಲಯ ಸ್ಥಾನಮಾನ ಪಡೆಯಲು ಬಯಸುತ್ತಿರುವ ಕಾರಣ ಮ್ಯಾನೇಜ್ ಮೆಂಟ್ ಈ ನಿರ್ಧಾರ ತೆಗೆದುಕೊಂಡಿದೆ. ಮಹಿಳಾ ಕಾಲೇಜು ಎಂಬುದರಿಂದ ಹಿಂದೆ ಸರಿಯಬೇಕಿದೆ ಎಂದು ಕಮಿಟಿಯವರು ಅಭಿಪ್ರಾಯಪಟ್ಟರು. ಕೋ-ಎಡ್ ಕ್ರಮ ಪ್ರಗತಿಪರವಾಗಿದೆ ಸಂಸ್ಥೆ ಸ್ಥಾಪನೆಯಾಗಿ 75 ವರ್ಷಗಳನ್ನು ಪೂರ್ಣಗೊಳಿಸಿರುವುದರಿಂದ, ಇದು ಸೂಕ್ತವಾದ ಮುಂದಿನ ಹಂತವಾಗಿದೆ ಎಂದರು. 

ಕಾಲೇಜು ತನ್ನ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿದೆ ಮತ್ತು ವಿಶ್ವವಿದ್ಯಾನಿಲಯವಾಗುವತ್ತ ತನ್ನ ಗಮನವನ್ನು ಬದಲಾಯಿಸಿದೆ ಎಂದು ಪ್ರಾಂಶುಪಾಲರು ಹೇಳಿದರು.ನಾವು ಸಂಪೂರ್ಣ ಮಹಿಳಾ ವಿಶ್ವವಿದ್ಯಾಲಯವಾಗಲು ಬಯಸುವುದಿಲ್ಲ. ಆದ್ದರಿಂದ ನಾವು ಎಲ್ಲಾ ಕೋರ್ಸ್‌ಗಳಿಗೆ ಹುಡುಗರನ್ನು ಸೇರಿಸಲು ಪ್ರಾರಂಭಿಸುವುದು ಕಾರ್ಯಸಾಧ್ಯವೆಂದು ತೋರುತ್ತದೆ ಎಂದು ಅವರು ವಿವರಿಸಿದರು. ಮುಂಬರುವ ಶೈಕ್ಷಣಿಕ ವರ್ಷಕ್ಕೆ ಎಷ್ಟು ಅರ್ಜಿಗಳು ಬರುತ್ತವೆ ಎಂಬುದನ್ನು ಆಡಳಿತ ಕಾದು ನೋಡಬೇಕಿದೆ ಎಂದು ಅವರು ಹೇಳಿದರು.

‘ಬದಲಾದ ಕಾಲದೊಂದಿಗೆ ಪರಿವರ್ತನೆ ಅನಿವಾರ್ಯ: ಯುಜಿ ಅಥವಾ ಪಿಜಿ ಕೋರ್ಸ್‌ಗಳಿಗೆ ಸೀಟು ಹಂಚಿಕೆ ಕುರಿತಂತೆ ಮಾತನಾಡಿದ ಲೇಖಾ, ವಿದ್ಯಾರ್ಥಿಗಳ ಪ್ರವೇಶವು ಹೆಚ್ಚಾಗದ ಕಾರಣ ಅದು ಸಮಸ್ಯೆಯಾಗಬಾರದು ಎಂದು ಭಾವಿಸುತ್ತೇನೆ. ಭವಿಷ್ಯದಲ್ಲಿ ಪುರುಷ ವಿದ್ಯಾರ್ಥಿಗಳಿಗೆ ಸಣ್ಣ ಪ್ರಮಾಣದಲ್ಲಿ ಶೇಕಡಾವಾರು ಸೀಟುಗಳನ್ನು ಕಾಯ್ದಿರಿಸಬಹುದು ಆದರೆ ಈಗ ಆ ವರ್ಗವನ್ನು ಚರ್ಚಿಸಲಾಗಿಲ್ಲ ಎಂದರು.

ಮಾನವಿಕ ವಿಭಾಗದ ಡೀನ್ ಡಾ.ಸುಮಾ ಸಿಂಗ್ ಮಾತನಾಡಿ, ಪ್ರಸ್ತುತ, ಕಾಲೇಜಿನಲ್ಲಿ 13 ಗಂಡು ಮಕ್ಕಳು ಹಲವಾರು PG ಕೋರ್ಸ್‌ಗಳಲ್ಲಿ ದಾಖಲಾಗಿದ್ದಾರೆ. ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಪರಿವರ್ತನೆ ಅನಿವಾರ್ಯವಾಗಿದ್ದು, ಹೊಸ ಅಧ್ಯಾಯವನ್ನು ಆರಂಭಿಸಲು ಸಂಸ್ಥೆ ಸಜ್ಜಾಗಿದೆ ಎಂದು ತಿಳಿಸಿದರು.

ಶಿಕ್ಷಣಕ್ಕೆ 75 ವರ್ಷಗಳ ಸೇವೆ: ಮೌಂಟ್ ಕಾರ್ಮೆಲ್ ಕಾಲೇಜು ಬೆಂಗಳೂರಿನಲ್ಲಿ 1948 ರಲ್ಲಿ ಸ್ಥಾಪನೆಯಾದ ಮೊದಲ ಮಹಿಳಾ ಕಾಲೇಜುಗಳಲ್ಲಿ ಒಂದಾಗಿದೆ. ಇದು ಮಹಿಳೆಯರಿಗಾಗಿ ಇರುವ ಭಾರತದ ಉನ್ನತ ಕಾಲೇಜುಗಳಲ್ಲಿ ಒಂದಾಗಿದೆ. ಮೌಂಟ್ ಕಾರ್ಮೆಲ್ ಕಾಲೇಜು  ಶಿಕ್ಷಣ ಕ್ಷೇತ್ರದಲ್ಲಿ ಪ್ಲಾಟಿನಂ ಜುಬಿಲಿಯನ್ನು ಕಳೆದ ವರ್ಷ ಪೂರ್ಣಗೊಳಿಸಿದೆ. ಆರು ಸ್ಟ್ರೀಮ್‌ಗಳು ಮತ್ತು 84 ಕೋರ್ಸ್ ಗಳೊಂದಿಗೆ ಕಾಲೇಜು ವಿಶಿಷ್ಟವಾದ ಹಳೆಯ ವಿದ್ಯಾರ್ಥಿಗಳ ಗುಂಪನ್ನು ಹೊಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com