ಬೆಂಗಳೂರು: ವಿಶ್ವೇಶ್ವರಯ್ಯ ಮ್ಯೂಸಿಯಂ, ನೆಹರು ತಾರಾಲಯಕ್ಕೆ ಹುಸಿ ಬಾಂಬ್‌ ಬೆದರಿಕೆ, ಪೊಲೀಸರಿಂದ ತಪಾಸಣೆ!

ಕಸ್ತೂರಬಾ ರಸ್ತೆಯಲ್ಲಿರುವ ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ ಮತ್ತು ಟೆಕ್ನಾಲಜಿಕಲ್ ಮ್ಯೂಸಿಯಂ, ಸ್ಯಾಂಕಿ ರಸ್ತೆಯಲ್ಲಿರುವ ಜವಾಹರಲಾಲ್ ನೆಹರು ತಾರಾಲಯ ಮತ್ತು ವಸಂತನಗರದ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್‌ಗೆ ಶುಕ್ರವಾರ ಬೆಳಗ್ಗೆ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕಸ್ತೂರಬಾ ರಸ್ತೆಯಲ್ಲಿರುವ ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ ಮತ್ತು ಟೆಕ್ನಾಲಜಿಕಲ್ ಮ್ಯೂಸಿಯಂ, ಸ್ಯಾಂಕಿ ರಸ್ತೆಯಲ್ಲಿರುವ ಜವಾಹರಲಾಲ್ ನೆಹರು ತಾರಾಲಯ ಮತ್ತು ವಸಂತನಗರದ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್‌ಗೆ ಶುಕ್ರವಾರ ಬೆಳಗ್ಗೆ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿವೆ.

ಆರೋಪಿಯು "ಟೆರರೈಸರ್ಸ್ 111" ಎಂಬ ಭಯೋತ್ಪಾದಕ ಸಂಘಟನೆಯಿಂದ ಬಂದಿರುವುದಾಗಿ ಹೇಳಿಕೊಂಡಿದ್ದಾನೆ. ಆದಾಗ್ಯೂ, ಮೂರು ಸ್ಥಳಗಳಲ್ಲಿ ಸಂಪೂರ್ಣ ಶೋಧ ನಡೆಸಿದ ನಂತರ ಬೆದರಿಕೆಗಳು ಸುಳ್ಳು ಎಂದು ಸಾಬೀತಾಯಿತು.

ಸಂಶಯಾಸ್ಪದ ಇಮೇಲ್‌ಗಳನ್ನು ಸ್ವೀಕರಿಸಿದ ನಂತರ, ಪೊಲೀಸ್ ನಿಯಂತ್ರಣ ಕೊಠಡಿಗೆ ಎಚ್ಚರಿಕೆ ನೀಡಲಾಯಿತು, ನಂತರ ಬಾಂಬ್ ಸ್ಕ್ವಾಡ್‌ಗಳು, ಶ್ವಾನ ದಳ ಮತ್ತು ಪೊಲೀಸ್ ತಂಡಗಳು ಮೂರು ಸ್ಥಳಗಳ ಆವರಣದಲ್ಲಿ ಮಧ್ಯಾಹ್ನದವರೆಗೆ ಶೋಧಿಸಿ, ನಂತರ ಎಲ್ಲವು ಸುಳ್ಳು ಎಂದು ಘೋಷಿಸಿದವು, ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡು ಬಂದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಪೊಲೀಸರು ಮತ್ತು ಬಾಂಬ್ ಪತ್ತೆ ದಳದ ಸಂಪೂರ್ಣ ಶೋಧದ ನಂತರ ಇಮೇಲ್ ಬೆದರಿಕೆಗಳನ್ನು ಸುಳ್ಳು ಎಂದು ಘೋಷಿಸಲಾಯಿತು. ಈ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸರು, ಹೈಗ್ರೌಂಡ್ಸ್ ಪೊಲೀಸರು ಹಾಗೂ ವಿಧಾನಸೌಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೂರು ಸ್ಥಳಗಳ ವೆಬ್‌ಸೈಟ್‌ಗಳಿಗೆ ಇಮೇಲ್‌ಗಳನ್ನು ಕಳುಹಿಸಲಾಗಿದೆ ಎಂದು ಡಿಸಿಪಿ (ಕೇಂದ್ರ) ಎಚ್‌ಟಿ ಶೇಖರ್ ಹೇಳಿದ್ದಾರೆ.

ಬಾಂಬ್ ಬೆದರಿಕೆಯ ಇಮೇಲ್ ಅನ್ನು 'Morgue999lol' ಎಂಬ ಐಡಿಯಿಂದ ಕಳುಹಿಸಲಾಗಿದೆ, ಇದು ಟೆರರೈಸರ್ಸ್ 111 ಭಯೋತ್ಪಾದಕ ಸಂಘಟನೆಯಿಂದ ಬಂದಿದೆ ಎಂದು ಹೇಳಿಕೊಳ್ಳಲಾಗಿದೆ. ಇಮೇಲ್‌ಗಳ ಮೂಲವನ್ನು ಕಂಡುಹಿಡಿಯಲು ತನಿಖೆಗಳು ನಡೆಯುತ್ತಿವೆ. ಮೂರು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com