ಮಧ್ಯರಾತ್ರಿ ನಂತರವೂ ಚಿತ್ರತಂಡ ಪಾರ್ಟಿ ಮಾಡಿದೆ, ಆದರೆ ಡ್ರಗ್ಸ್ ಬಳಕೆಯಾಗಿಲ್ಲ: ಬೆಂಗಳೂರು ಉತ್ತರ ಡಿಸಿಪಿ ಸೈದುಲು ಅಡಾವತ್

ರಾಜಧಾನಿಯ ಜೆಟ್ ಲ್ಯಾಗ್ ರೆಸ್ಟೋಬಾರ್ ನಲ್ಲಿ ರಾತ್ರಿಪೂರ್ತಿ ಸ್ಟಾರ್ ನಟ ಮತ್ತು ಅವರ ಚಿತ್ರತಂಡದವರು ಅವಧಿ ಮೀರಿ ಪಾರ್ಟಿ ಮಾಡಿರುವ ಆರೋಪದ ಬಗ್ಗೆ ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್ ಹೇಳಿಕೆ ನೀಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ರಾಜಧಾನಿಯ ಜೆಟ್ ಲ್ಯಾಗ್ ರೆಸ್ಟೋಬಾರ್ ನಲ್ಲಿ ರಾತ್ರಿಪೂರ್ತಿ ಸ್ಟಾರ್ ನಟ ಮತ್ತು ಅವರ ಚಿತ್ರತಂಡದವರು ಅವಧಿ ಮೀರಿ ಪಾರ್ಟಿ ಮಾಡಿರುವ ಆರೋಪದ ಬಗ್ಗೆ ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್ ಹೇಳಿಕೆ ನೀಡಿದ್ದಾರೆ.

ಈ ಬಗ್ಗೆ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನವರಿ 3ರಂದು ಮಧ್ಯರಾತ್ರಿ 1 ಗಂಟೆಯ ನಂತರವೂ ಚಿತ್ರತಂಡಕ್ಕೆ ಮದ್ಯ ಲಿಕ್ಕರ್ ಸರ್ವ್ ಮಾಡಲಾಗಿದೆ. ಪಾರ್ಟಿಯಲ್ಲಿ ಡ್ರಗ್ಸ್ ಬಳಕೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿಲ್ಲ ಎಂದಿದ್ದಾರೆ.

ಉತ್ತರ ವಿಭಾಗ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜೆಟ್ ಲ್ಯಾಗ್ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಮೊನ್ನೆ ಜನವರಿ 3ರಂದು ಮಧ್ಯರಾತ್ರಿ 1 ಗಂಟೆಗೂ ಮೀರಿ ಚಿತ್ರತಂಡದ ಕೆಲವರು ಬಂದು ಪಾರ್ಟಿ ಮಾಡಿದ್ದು ಮರುದಿನ ಮಾಹಿತಿ ಸಿಕ್ಕಿದೆ. ಅಂದು ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯ ನೈಟ್ ಡ್ಯೂಟಿ ಮುಖ್ಯಸ್ಥರಾಗಿದ್ದ ಸ್ಟೇಷನ್ ಪಿಎಸ್ಐ ಕಂಪ್ಲೇಂಟ್ ಕೊಟ್ಟಿದ್ದಾರೆ.

ಅದರ ಆಧಾರದ ಮೇಲೆ ಜೆಟ್ ಲ್ಯಾಗ್ ಪಬ್ ನ ಮಾಲೀಕ ಮತ್ತು ಆಪರೇಷನ್ ಮ್ಯಾನೇಜರ್ ಮೇಲೆ ಕರ್ನಾಟಕ ಪೊಲೀಸ್ ಕಾಯ್ದೆಯಡಿ ಅವಧಿ ಮೀರಿ ಮದ್ಯ ಪೂರೈಸಿದ್ದಕ್ಕೆ ಅಬಕಾರಿ ಕಾಯ್ದೆಯಡಿ ಸಹ ಎಫ್ಐಆರ್ ದಾಖಲಿಸಲಾಗಿದೆ ಎಂದರು.

ಮಧ್ಯರಾತ್ರಿ 12.30ಕ್ಕೆ ನಮ್ಮ ಪೊಲೀಸ್ ಅಧಿಕಾರಿಗಳು ಹೋಗಿ 1 ಗಂಟೆಯೊಳಗೆ ಮುಚ್ಚಬೇಕು ಎಂದು ಹೋಗಿ ಸೂಚನೆ ನೀಡಿ ಬಂದಿದ್ದರು. ಅವರು ಮಾಡುತ್ತೇವೆ ಎಂದು ಒಪ್ಪಿಕೊಂಡಿದ್ದರು. ಆಮೇಲೆ ನಮ್ಮ ನೈಟ್ ಡ್ಯೂಟಿ ಆಫೀಸರ್ ಬೇರೆ ಕಡೆ ಡ್ಯೂಟಿ ಮಾಡಲು ಹೋಗಿದ್ದರು. ಬೆಳಗಿನ ಜಾವದವರೆಗೂ ಪಾರ್ಟಿ ಮಾಡಿದ್ದಾರೆ ಎಂದು ಗೊತ್ತಾಗಿದೆ. ಇದರ ಆಧಾರದ ಮೇಲೆ ಎಫ್ ಐಆರ್ ದಾಖಲಿಸಲಾಗಿದೆ.

ಅಂದು ರಾತ್ರಿ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಗಳ ವಿರುದ್ಧ ಸಹ ಶಿಸ್ತು ಕ್ರಮ ತೆಗೆದುಕೊಳ್ಳುವ ಕಾರ್ಯ ಆರಂಭವಾಗಿದೆ ಎಂದು ಸೈದುಲ್ ಅಡಾವತ್ ತಿಳಿಸಿದರು.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ ಜಿ ಪರಮೇಶ್ವರ್, ಈ ಬಗ್ಗೆ ನನಗೆ ಹೆಚ್ಚಿನ ಮಾಹಿತಿಯಿಲ್ಲ, ಪೊಲೀಸರಿಂದ ತರಿಸಿಕೊಳ್ಳುತ್ತೇನೆ, ಈಗಾಗಲೇ ನಗರ ಪೊಲೀಸ್ ಆಯುಕ್ತರು ಕ್ರಮ ತೆಗೆದುಕೊಳ್ಳುತ್ತಿದ್ದಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com