ಬೆಂಗಳೂರು: ಸಹೋದ್ಯೋಗಿಯನ್ನು ಊಟಕ್ಕೆ ಕರೆದು, ಖಾಸಗಿ ಕಂಪನಿ ಮ್ಯಾನೇಜರ್ ನಿಂದ ಅತ್ಯಾಚಾರ

ಊಟಕ್ಕೆ ಕರೆದು ಸಹೋದ್ಯೋಗಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಖಾಸಗಿ ಸಂಸ್ಥೆಯೊಂದರ ವ್ಯವಸ್ಥಾಪಕನನ್ನು ಬಸವೇಶ್ವರನಗರ ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಊಟಕ್ಕೆ ಕರೆದು ಸಹೋದ್ಯೋಗಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಖಾಸಗಿ ಸಂಸ್ಥೆಯೊಂದರ ವ್ಯವಸ್ಥಾಪಕನನ್ನು ಬಸವೇಶ್ವರನಗರ ಪೊಲೀಸರು ಬಂಧಿಸಿದ್ದಾರೆ.

ಕೆಆರ್ ಪುರಂ ನಿವಾಸಿ ಸೈಯದ್ ಅಕ್ರಮ್ (37)  ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಸಂತ್ರಸ್ತೆ ಮತ್ತು ಅವರ ಪತಿ ಬಸವೇಶ್ವರನಗರದಲ್ಲಿರುವ ಸಂಸ್ಥೆಯಲ್ಲಿ ಟೆಲಿಕಾಲರ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ.

ಘಟನೆಯ ದಿನ ಮಹಿಳೆಯ ಪತಿ ಕುಟುಂಬದ ಸದಸ್ಯರ ಅಂತಿಮ ಸಂಸ್ಕಾರಕ್ಕಾಗಿ ತವರು ಮನೆಗೆ ಹೋಗಬೇಕಾಗಿತ್ತು ಹೀಗಾಗಿ ರಜೆ ತೆಗೆದುಕೊಂಡಿದ್ದರು. ಅಕ್ರಮ್ ಕರೆ ಮಾಡಿ ಆಕೆಯನ್ನು ಹೋಟೆಲ್‌ಗೆ ಊಟಕ್ಕೆ ಆಹ್ವಾನಿಸಿದರು, ಕಂಪನಿಯ  ಇತರ ಸಹೋದ್ಯೋಗಿಗಳು ಸಹ ಬರುತ್ತಾರೆ ಎಂದು ಹೇಳಿದ್ದಾನೆ.

ನಂತರ ಅಕ್ರಂ ಕಚೇರಿ ಬಳಿ ಬಂದು ಆಕೆಯನ್ನು ತನ್ನ ಬೈಕ್‌ನಲ್ಲಿ ತನ್ನ ಮನೆಗೆ ಕರೆದೊಯ್ದನು, ಅಲ್ಲಿ ಆತನ ಕುಟುಂಬ ಸದಸ್ಯರು ಇರಲಿಲ್ಲ ರೇಪ್ ಮಾಡಿದ ನಂತರ ನವರಂಗ್ ಸರ್ಕಲ್ ಬಳಿ ಆಕೆಯನ್ನು ಇಳಿಸಿ ಹೋಗಿದ್ದಾನೆ. ಘಟನೆಯ ಬಗ್ಗೆ ಯಾರಿಗಾದರೂ ಹೇಳಿದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾನೆ.

ಮಹಿಳೆ ಆಟೋದಲ್ಲಿ ಮನೆಗೆ ಹಿಂತಿರುಗಿ ಪತಿ ಹಿಂದಿರುಗುವವರೆಗೆ ಕಾಯುತ್ತಿದ್ದರು. ಮಂಗಳವಾರ ಪತಿ ಮನೆಗೆ ಬಂದು ನಡೆದ ವಿಷಯವನ್ನು ತಿಳಿಸಿದಾಗ ಮ್ಯಾನೇಜರ್ ವಿರುದ್ಧ ದೂರು ದಾಖಲಿಸಿದ್ದಾರೆ. ಕೂಡಲೇ ಕಚೇರಿ ಬಳಿ ಆರೋಪಿಯನ್ನು ಬಂಧಿಸಲಾಯಿತು. ಕಡ್ಡಾಯ ವೈದ್ಯಕೀಯ ಪರೀಕ್ಷೆಗಳ ನಂತರ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com