ಸುಚನಾ ಸೇಠ್ ಮಗುವನ್ನು ಉಸಿರುಗಟ್ಟಿಸಿ ಕೊಂದಿರಬಹುದು, ಇದೊಂದು ಪೂರ್ವ ಯೋಜಿತ ಕೃತ್ಯವಾಗಿರಬಹುದು: ಗೋವಾ ಪೊಲೀಸರು

ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ತನ್ನದೇ ಆದ ಕೃತಕ ಬುದ್ಧಿಮತ್ತೆ (AI) ಕಂಪನಿಯನ್ನು ಸ್ಥಾಪಿಸಿದ ಸಿಇಒ ಸುಚನಾ ಸೇಠ್, ಮೈಂಡ್‌ಫುಲ್ ಎಐ ಲ್ಯಾಬ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ.
ಮಗು ಜೊತೆ ಸುಚನಾ ಸೇಠ್(ಸಂಗ್ರಹ ಚಿತ್ರ)
ಮಗು ಜೊತೆ ಸುಚನಾ ಸೇಠ್(ಸಂಗ್ರಹ ಚಿತ್ರ)

ಬೆಂಗಳೂರು: ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ತನ್ನದೇ ಆದ ಕೃತಕ ಬುದ್ಧಿಮತ್ತೆ (AI) ಕಂಪನಿಯನ್ನು ಸ್ಥಾಪಿಸಿದ ಸಿಇಒ ಸುಚನಾ ಸೇಠ್, ಮೈಂಡ್‌ಫುಲ್ ಎಐ ಲ್ಯಾಬ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ.

ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಸಹವರ್ತಿ ಮತ್ತು ಅಂಗಸಂಸ್ಥೆಯಾಗಿ ಸೇವೆ ಸಲ್ಲಿಸಿದ ಮಹಿಳೆ, ಇಂಟರ್ನೆಟ್ ಜಗತ್ತಿನಲ್ಲಿ ಪ್ರಭಾವಿಯಾಗಿದ್ದರು. ಸಂಸ್ಕೃತದಲ್ಲಿ ಆಸಕ್ತಿ ಹೊಂದಿದ್ದ ಸುಚನಾ ಸೇಠ್ ಭೌತಶಾಸ್ತ್ರದಲ್ಲಿ ಕೂಡ ಪರಿಣತೆ. 

2019ರಲ್ಲಿ ಬೆಂಗಳೂರಿಗೆ ಹಿಂದಿರುಗುವ ಮೊದಲು ನ್ಯೂಯಾರ್ಕ್ ಮತ್ತು ಬೋಸ್ಟನ್ ಎರಡೂ ಕಡೆ ವಾಸಿಸುತ್ತಿದ್ದ ಸುಚನಾ ಸೇಠ್ ಅವರ ಜೀವನ ಪಥವು ಅತ್ಯಂತ ಪ್ರಭಾವಶಾಲಿ.  ಸೇಠ್ 2020ರಿಂದ ತನ್ನ ಪತಿಯೊಂದಿಗೆ ವಿಚ್ಛೇದನಕ್ಕೆ ಹೋರಾಡುತ್ತಿದ್ದರು. 
ಸುಚನಾ ಸೇಠ್ ಅವರು 2008 ಮತ್ತು 2011 ರ ನಡುವೆ ಬೆಂಗಳೂರಿನ ರಾಮನ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿ ಸಂಶೋಧನಾ ಸಹೋದ್ಯೋಗಿಯಾಗುವ ಮೊದಲು ಕೋಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರವನ್ನು ಅಧ್ಯಯನ ಮಾಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸುಚನಾ ಸೇಠ್ ಬೆಂಗಳೂರು ಮೂಲದ ಕಂಪನಿಗಳಲ್ಲಿ ಡೇಟಾ ವಿಶ್ಲೇಷಕರಾಗಿದ್ದರು. 2016 ಮತ್ತು 2017 ರ ನಡುವೆ ನ್ಯೂಯಾರ್ಕ್‌ನ ಮೊಜಿಲ್ಲಾ ಡೇಟಾ ಮತ್ತು ಸೊಸೈಟಿ ರಿಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿ ಫೋರ್ಡ್ ಮೊಜಿಲ್ಲಾ ಓಪನ್ ವೆಬ್ ಫೆಲೋ ಆಗುವ ಮೊದಲು ಸಂಸ್ಕೃತಿಯಲ್ಲಿ ರಾಮಕೃಷ್ಣ ಸಂಸ್ಥೆಯಿಂದ ಸಂಸ್ಕೃತದಲ್ಲಿ ಸ್ನಾತಕೋತ್ತರ ಡಿಪ್ಲೊಮಾವನ್ನು ಪೂರ್ಣಗೊಳಿಸಿದರು.

2020 ರಲ್ಲಿ ಮೈಂಡ್‌ಫುಲ್ AI ಲ್ಯಾಬ್ ನ್ನು ಸ್ಥಾಪಿಸಲು ಬೆಂಗಳೂರಿಗೆ ಹಿಂತಿರುಗಿದರು. ಬೆಂಗಳೂರಿನ ತಂತ್ರಜ್ಞಾನ ವಲಯದ ಸಹೋದ್ಯೋಗಿಗಳು ಸುಚನಾ ಸೇಠ್ "ತೀಕ್ಷ್ಣ ಮತ್ತು ಅದ್ಭುತ" ಮಹಿಳೆ ಎನ್ನುತ್ತಾರೆ.ಕಳೆದ ವರ್ಷ ಬೆಂಗಳೂರಿನಲ್ಲಿ ನಾನು ಅವರೊಂದಿಗೆ ಸಂವಾದ ನಡೆಸಿದಾಗ, ಅವರು ಸಂಪೂರ್ಣವಾಗಿ ಸಾಮಾನ್ಯರಂತೆ ಕಾಣುತ್ತಿದ್ದರು. ಚೆನ್ನಾಗಿ ಓದಿ ಚುರುಕಾದಳು ಮತ್ತು ಅದ್ಭುತ ಮನಸ್ಸನ್ನು ಹೊಂದಿದ್ದರು ಎಂದು ಟೆಕ್ ಸಂಶೋಧಕರಾದ ಯಶವಂತ್ ಎಂಜಿ ಹೇಳುತ್ತಾರೆ. 

ಸುಚನಾ ಸೇಠ್ ಮತ್ತು ವೆಂಕಟರಮಣ 2010 ರಲ್ಲಿ ವಿವಾಹವಾಗಿ 2022 ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವ ಮೊದಲು 2019 ರಲ್ಲಿ ಮಗು ಹೊಂದಿದ್ದಾರೆ. ಇಬ್ಬರ ವಿಚ್ಛೇದನ ಪ್ರಕ್ರಿಯೆ ಬೆಂಗಳೂರು ಕೌಟುಂಬಿಕ ನ್ಯಾಯಾಲಯದಲ್ಲಿ ನಡೆಯುತ್ತಿದ್ದು ಇಂದು ಪ್ರಕರಣ ವಿಚಾರಣೆ ನಡೆಯಬೇಕಿತ್ತು. ಗೋವಾದಲ್ಲಿ ಆಕೆಯನ್ನು ಪೊಲೀಸರು ವಿಚಾರಣೆಗೊಳಪಡಿಸಿದಾಗ, ಮಗ ತನ್ನ ಗಂಡನ ವಶದಲ್ಲಿ ಸುರಕ್ಷಿತವಾಗಿರುವುದಿಲ್ಲ ಎಂದು ಸೇಠ್ ಭಾವಿಸಿದ್ದರು ಎಂದು ಹೇಳುತ್ತಾರೆ. 

ಬೆಂಗಳೂರಿನಲ್ಲಿ, ಪೊಲೀಸ್ ಅಧಿಕಾರಿಗಳು ಥಣಿಸಂದ್ರದಲ್ಲಿರುವ ಯುನಿಶೈರ್ ಟೆರಾಝಾ ಅಪಾರ್ಟ್‌ಮೆಂಟ್‌ನಲ್ಲಿರುವ ಸೇಠ್ ಅವರ ಅಧಿಕೃತ ವಿಳಾಸ ಎಂದು ನಮೂದಿಸಲಾಗಿದ್ದು, ಕಳೆದ ಆರು ತಿಂಗಳಿನಿಂದ ಅಲ್ಲಿ ವಾಸಿಸುತ್ತಿಲ್ಲ ಎಂದು ತಿಳಿದುಬಂದಿದೆ. 
ಇದೀಗ ಸೇಠ್ ಬಂಧನದಲ್ಲಿದ್ದು, ತನಿಖೆ ಮುಂದುವರಿಯುತ್ತಿದೆ., ಮುಂದಿನ ಕೆಲವು ದಿನಗಳಲ್ಲಿ ಹೆಚ್ಚಿನ ವಿವರಗಳು ಹೊರಬರಲಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

ಮಗುವನ್ನು ಕೊಂದಿದ್ದು ಹೇಗೆ?: ಸ್ಟಾರ್ಟ್‌ಅಪ್‌ನ ಸಿಇಒ ಸುಚನಾ ಸೇಠ್ ತನ್ನ ನಾಲ್ಕು ವರ್ಷದ ಮಗನನ್ನು ಕೊಂದ ಕೊಠಡಿಯಲ್ಲಿ ಎರಡು ಖಾಲಿ ಬಾಟಲಿ ಕೆಮ್ಮು ಸಿರಪ್‌ಗಳನ್ನು ಗೋವಾ ಪೊಲೀಸರು ಪತ್ತೆ ಮಾಡಿದ್ದಾರೆ, ಮಗುವಿಗೆ ಹೆಚ್ಚಿನ ಪ್ರಮಾಣದಲ್ಲಿ ಔಷಧಿ ನೀಡಿರಬಹುದು. ಇದು ಪೂರ್ವ ಯೋಜಿತ ಕೊಲೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

ಅಧಿಕಾರಿಗಳು ಹೇಳುವ ಪ್ರಕಾರ ಮಗುವನ್ನು ಬಟ್ಟೆ ಅಥವಾ ದಿಂಬಿನಿಂದ ಉಸಿರುಗಟ್ಟಿಸಿ ಸಾಯಿಸಲಾಗಿದೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದುಬಂದಿದೆ. ಮಹಿಳೆ ಉಳಿದುಕೊಂಡಿದ್ದ ಸರ್ವಿಸ್ ಅಪಾರ್ಟ್‌ಮೆಂಟ್ ಕೊಠಡಿಯ ತಪಾಸಣೆಯ ವೇಳೆ ಕೆಮ್ಮಿನ ಸಿರಪ್‌ನ ಎರಡು ಖಾಲಿ ಬಾಟಲಿಗಳು (ಒಂದು ದೊಡ್ಡ ಮತ್ತು ಇನ್ನೊಂದು ಸಣ್ಣ) ಪತ್ತೆಯಾಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಮೃತದೇಹದ ಮರಣೋತ್ತರ ಪರೀಕ್ಷೆಯು ಮಗುವನ್ನು ಕೊಚ್ಚಿ ಸಾಯಿಸಿರುವ ಸಾಧ್ಯತೆಯನ್ನು ಸೂಚಿಸಿದೆ. ಇಲ್ಲಿ ಮಗು ಹೆಚ್ಚಿನ ಹೊತ್ತು ಚೀರಾಡಿ ಲಕ್ಷಣಗಳು ಕಂಡುಬಂದಿಲ್ಲ ಎನ್ನುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com