ಹಾನಗಲ್'ನಲ್ಲಿ ನೈತಿಕ ಪೊಲೀಸ್​ಗಿರಿ: ಅನ್ಯಕೋಮಿನ ಮಹಿಳೆಯೊಂದಿಗೆ ಸಿಕ್ಕಿಬಿದ್ದ ವ್ಯಕ್ತಿಗೆ ಥಳಿತ, ಇಬ್ಬರ ಬಂಧನ

ಹಾವೇರಿ ಜಿಲ್ಲೆಯ ಹಂಗಲ್‌ನಲ್ಲಿ ನೈತಿಕ ಪೊಲೀಸ್‌ಗಿರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅನ್ಯ ಕೋಮಿನ ಮಹಿಳೆಯೊಂದಿಗೆ ಲಾಡ್ಜ್​ಗೆ ಬಂದಿದ್ದ ಯುವಕನಿಗೆ 12 ಮಂದಿಯಿಂದ ತಂಡವೊಂದು ಥಳಿಸಿರುವ ಘಟನೆ ಜ.7ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಹಾವೇರಿ: ಹಾವೇರಿ ಜಿಲ್ಲೆಯ ಹಂಗಲ್‌ನಲ್ಲಿ ನೈತಿಕ ಪೊಲೀಸ್‌ಗಿರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅನ್ಯ ಕೋಮಿನ ಮಹಿಳೆಯೊಂದಿಗೆ ಲಾಡ್ಜ್​ಗೆ ಬಂದಿದ್ದ ಯುವಕನಿಗೆ 12 ಮಂದಿಯಿಂದ ತಂಡವೊಂದು ಥಳಿಸಿರುವ ಘಟನೆ ಜ.7ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಜ.7ರಂದು ಹಾನಗಲ್ ಸಮೀಪದ ನಾಲ್ಕರ ಕ್ರಾಸ್ ಬಳಿಯ ಲಾಡ್ಜ್​ಗೆ ಶಿರಸಿ ಮೂಲದವರೆನ್ನಲಾದ ಅನ್ಯ ಕೋಮಿನ ಯುವತಿಯೊಂದಿಗೆ ಯುವಕನೋರ್ವ ಆಗಮಿಸಿರುವ ಮಾಹಿತಿ ಪಡೆದ ಯುವಕರ ಗುಂಪು ಲಾಡ್ಜ್​ಗೆ ನುಗ್ಗಿ ಯುವಕ-ಯುವತಿಯ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ನಂತರ ಯುವತಿಯನ್ನು ಅಜ್ಞಾತ ಸ್ಥಳವೊಂದಕ್ಕೆ ಕೊಂಡೊಯ್ದ ಯುವಕರು, ಮಾನಸಿಕ ಕಿರುಕುಳ ಸೇರಿದಂತೆ ದೈಹಿಕ ಹಲ್ಲೆ ನಡೆಸಿರುವುದಾಗಿ ಯುವತಿ ಹಾಗೂ ಆಕೆಯ ಪತಿ ಆರೋಪಿಸಿದ್ದಾರೆ. ಈ ಸಂಬಂಧ ಯುವತಿಯ ಕುಟುಂಬಸ್ಥಲು ಹಾನಗಲ್ ಪೊಲೀಸರಿಗೆ ದೂರು ನೀಡಿದ್ದು, ದೂರು ಅನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ. ಉಳಿದ ಆರೋಪಿಗಳ ಪತ್ತೆಗೆ ಶೋಧ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com