ನಾನು ರಾಮನ ಪರಮ ಭಕ್ತ, ಪ್ರತಿನಿತ್ಯ ರಾಮಕೋಟಿ ಬರೆಯುತ್ತೇನೆ: ಸಚಿವ ಮುನಿಯಪ್ಪ

ನಾನು ಶ್ರೀರಾಮನ ಪರಮ ಭಕ್ತ, ಕಳೆದ 20 ವರ್ಷಗಳಿಂದ ಪ್ರತಿನಿತ್ಯ ರಾಮಕೋಟಿ ಬರೆಯುತ್ತಿದ್ದೇನೆಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಕೆ.ಎಚ್.ಮುನಿಯಪ್ಪ ಅವರು ಗುರುವಾರ ಹೇಳಿದರು.
ಕೆ.ಎಚ್.ಮುನಿಯಪ್ಪ
ಕೆ.ಎಚ್.ಮುನಿಯಪ್ಪ
Updated on

ಕೋಲಾರ: ನಾನು ಶ್ರೀರಾಮನ ಪರಮ ಭಕ್ತ, ಕಳೆದ 20 ವರ್ಷಗಳಿಂದ ಪ್ರತಿನಿತ್ಯ ರಾಮಕೋಟಿ ಬರೆಯುತ್ತಿದ್ದೇನೆಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಕೆ.ಎಚ್.ಮುನಿಯಪ್ಪ ಅವರು ಗುರುವಾರ ಹೇಳಿದರು.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ಜೊತೆಗೆ ಮಾತನಾಡಿದ ಅವರ, ಬಾಲ್ಯದಿಂದಲೂ ರಾಮನನ್ನು ಆರಾಧಿಸುತ್ತಿದ್ದೇನೆ. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ 108 ಬಾರಿ "ಶ್ರೀ ರಾಮ" ಎಂದು ಬರೆಯುತ್ತೇನೆ. ಸಮಯ ಸಿಕ್ಕಾಗ 1080 ಬಾರಿ ಶ್ರೀರಾಮ ಎಂದು ಬರೆಯುತ್ತೇನೆ ಎಂದು ಹೇಳಿದರು.

ಅಯೋಧ್ಯೆಯಲ್ಲಿ ರಾಮ ಮಂದಿರದ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಪ್ರಧಾನಿ ಮೋದಿ ಅವರು ರಾಜಕೀಯಗೊಳಿಸುತ್ತಿದ್ದಾರೆ. ಹೀಗಾಗಿಯೇ ದೇಶದ ಹಲವಾರು ಪ್ರಮುಖ ಮಠಗಳ ಮಠಾಧೀಶರು ಕಾರ್ಯಕ್ರಮದಲ್ಲಿ ಹಾಜರಾಗಲು ನಿರಾಕರಿಸಿದ್ದಾರೆ. ಏಕೆಂದರೆ ಶಾಸ್ತ್ರಗಳನ್ನು ಅನುಸರಿಸಿ ಕಾರ್ಯಕ್ರಮವನ್ನು ನಡೆಸುತ್ತಿಲ್ಲ. ದೇವಾಲಯದ ಕೆಲಸಗಳು ಇನ್ನೂ ಪೂರ್ಣಗೊಂಡಿಲ್ಲ. ದೇವಸ್ಥಾನದ ಶಂಕುಸ್ಥಾಪನೆ ಸಮಾರಂಭವನ್ನು ಬಿಜೆಪಿ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.

ಎಷ್ಟು ಬಾರಿ ಶ್ರೀರಾಮ ಎಂದು ಬರೆದಿದ್ದಾರೆಂಬುದನ್ನು ಲೆಕ್ಕ ಹಾಕಿಲ್ಲ. “ರಾಮಕೋಟಿ ಬರೆಯಲು ಯಾವಾಗಲೂ ಪುಸ್ತಕವನ್ನು ತರುತ್ತಾರೆ. ಪ್ರಯಾಣಿಸುವ ಸಂದರ್ಭದಲ್ಲಿ ಸೂಟ್‌ಕೇಸ್‌ನಲ್ಲಿ ಪುಸ್ತಕ ಇಟ್ಟುಕೊಂಡಿರುತ್ತಾರೆಂದು ಸಚಿವರ ಪತ್ನಿ ನಾಗರತಿನಮ್ಮ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com