• Tag results for ram

600 ಗುತ್ತಿಗೆ ವೈದ್ಯರನ್ನು ಖಾಯಂ ಮಾಡಲು ಸಿಎಂ ಒಪ್ಪಿದ್ದಾರೆ: ಶ್ರೀರಾಮುಲು

ಗುತ್ತಿಗೆ ವೈದ್ಯರ ಸಿಬ್ಬಂದಿ ಖಾಯಂ ಮಾಡಲು ಮತ್ತು ವೇತನ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದು, ಗುತ್ತಿಗೆ ವೈದ್ಯರಿಗೆ ಸರ್ಕಾರ 45 ಸಾವಿರ ಇದ್ದ ವೇತನ 60 ಸಾವಿರಕ್ಕೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.

published on : 7th July 2020

ಬಿ.ಎಲ್. ಸಂತೋಷ್ ವಿಧಾನಸೌಧಕ್ಕೆ ಬಂದರೆ ನಾನೇ ವಿವರ ಕೊಡುತ್ತೇನೆ: ಸಿದ್ದರಾಮಯ್ಯ

ಸಂತೋಷ್ ಅವರು ವಿಧಾನಸೌಧದಲ್ಲಿರುವ ತಮ್ಮ ಕಚೇರಿಗೆ ಬಂದರೆ ತಾವು ನಡೆಸಿರುವ ಅಧಿಕಾರಿಗಳ ಸಭೆಗಳ ವಿವರದ ಜೊತೆ ಕೊರೊನಾ ನಿಯಂತ್ರಿಸಲು ಸರ್ಕಾರಕ್ಕೆ ಬುದ್ಧಿ ಹೇಳಿ ತಿದ್ದಲು ತಾವು ಮಾಡಿರುವ ಪ್ರಯತ್ನಗಳ ವಿವರಗಳನ್ನೆಲ್ಲ ಕೊಡುವುದಾಗಿ ಮಾತಿನ ಚಾಟಿ ಬೀಸಿದ್ದಾರೆ.

published on : 7th July 2020

ಹೋಮ್ ಕ್ವಾರಂಟೈನ್ ನಲ್ಲಿ ಸಿದ್ದರಾಮಯ್ಯ?: ಮೈಸೂರಿನ ಫಾರ್ಮ್ ಹೌಸ್ ನಲ್ಲಿ ಮಾಜಿ ಸಿಎಂ ವಾಸ್ತವ್ಯ!

ಮಾಜಿ ಸಿಎಂ ಸಿದ್ದರಾಮಯ್ಯ ಮಧುಮೇಹದಿಂದ ಬಳಲುತ್ತಿದ್ದು, ಇತ್ತೀಚೆಗೆ ಅವರು ಹೃದಯ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರ ಸಂಪರ್ಕದಿಂದ ದೂರವಿರಲು ಸಿದ್ದರಾಮಯ್ಯ ಮೈಸೂರು ಸಮೀಪವಿರುವ ಫಾರ್ಮ್ ಹೌಸ್ ಗೆ ತೆರಳಿದ್ದಾರೆ.

published on : 7th July 2020

ಜನರ ಸೋಂಕು ಪರೀಕ್ಷೆ ನಡೆಸದ ಕೊಲೆಗಡುಕ ಸರ್ಕಾರ- ಸಿದ್ದರಾಮಯ್ಯ  

 ಸರಿಯಾಗಿ  ಸೋಂಕು ಪರೀಕ್ಷೆ ನಡೆಸದೇ ಜನರ ಸಾವಿಗೆ ಕಾರಣವಾಗಿರುವ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವನ್ನು ಕೊಲೆಗುಡಕ ಸರ್ಕಾರ ಎಂದರೆ ತಪ್ಪಾಗುತ್ತದೆಯೇ?  ಎಂದು ವಿಪಕ್ಷ ನಾಯಕ  ಸಿದ್ದರಾಮಯ್ಯ ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.

published on : 6th July 2020

ಸಿದ್ದರಾಮಯ್ಯ ಅವರಿಗೆ ಲೆಕ್ಕ ಕೇಳುವ ಹಕ್ಕಿದೆ; ಪ್ರತಿ ಪೈಸೆಗೂ ಲೆಕ್ಕ ಕೊಡುತ್ತೇವೆ: ಡಾ. ಅಶ್ವತ್ಥನಾರಾಯಣ

ಜಿಲ್ಲೆಯಲ್ಲಿ ಜಾರಿ ಹಂತದಲ್ಲಿರುವ 15 ನೀರಾವರಿ ಕಾಮಗಾರಿಗಳನ್ನು ಆದಷ್ಟು ಶೀಘ್ರಗತಿಯಲ್ಲಿ ಮುಗಿಸುವುದರ ಜತೆಗೆ, ವಿಶ್ವೇಶ್ವರಯ್ಯ ನಾಲೆಯ ದುರಸ್ತಿ ಕಾರ್ಯವನ್ನೂ ಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಭರವಸೆ ನೀಡಿದ್ದಾರೆ.

published on : 6th July 2020

'ವೀರಂ'ಗಾಗಿ ಕಿಟ್ಟಿ ರಗಡ್ ಲುಕ್!

ವೀರಂ ಚಿತ್ರದಲ್ಲಿ ನಟಿಸುತ್ತಿರುವ ಪ್ರಜ್ವಲ್ ದೇವರಾಜ್ ಅವರ ಲುಕ್ ಬಿಡುಗಡೆಯಾಗಿದ್ದು, ಲೆಜೆಂಡ್ ನಟ ವಿಷ್ಣುವರ್ಧನ್ ಅಭಿಮಾನಿಯಾಗಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ಪ್ರಜ್ವಲ್ ದೇವರಾಜ್ ಅವರ ಮುಂದಿನ ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ನಿರೀಕ್ಷೆ ಗರಿಗೆದರಿದೆ.

published on : 6th July 2020

ಬಂಟ್ವಾಳ: ಮೆಹಂದಿ ಕಾರ್ಯಕ್ರಮದಲ್ಲಿ ಡಿಜೆ ಡ್ಯಾನ್ಸ್; ವರ, ಕುಟುಂಬದ ವಿರುದ್ಧ ಪ್ರಕರಣ ದಾಖಲು

ಮದುವೆ ಕಾರ್ಯಕ್ರಮದಲ್ಲಿ ಮೈಕ್ ಹಾಗೂ ಡಿಜೆ ಬಳಸಿದ ಪ್ರಕರಣಕ್ಕೆ ಸಂಬಂಧಿಸಿ ವರ, ಆತನ ತಂದೆ ಹಾಗೂ ಇತರರ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

published on : 6th July 2020

ಲಡಾಕ್ ಗೆ ಹೋಗಿ ಬಂದ ಬಳಿಕ ರಾಷ್ಟ್ರಪತಿಗಳನ್ನು ಭೇಟಿ ಮಾಡಿದ ಪ್ರಧಾನಿ ಮೋದಿ: ಹಲವು ವಿಷಯಗಳು ಚರ್ಚೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ರಾಷ್ಟ್ರಪತಿ ಭವನದಲ್ಲಿ ಭಾನುವಾರ ಬೆಳಗ್ಗೆ ಭೇಟಿ ಮಾಡಿ ಪ್ರಸಕ್ತ ವಿದ್ಯಮಾನಗಳು, ಭಾರತ-ಚೀನಾ ಗಡಿ ಭಾಗದಲ್ಲಿ ಸೇನೆ ನಿಲುಗಡೆ ಇತ್ಯಾದಿಗಳ ಬಗ್ಗೆ ವಿವರಣೆ ನೀಡಿದ್ದಾರೆ.

published on : 5th July 2020

ತೆಲಂಗಾಣ ಮರ್ಯಾದಾ ಹತ್ಯೆ ಕುರಿತು ಸಿನಿಮಾ: ರಾಮ್ ಗೋಪಾಲ್ ವರ್ಮಾ ವಿರುದ್ಧ ಪ್ರಕರಣ ದಾಖಲು

ತೆಲಂಗಾಣದಲ್ಲಿ 2018ರಲ್ಲಿ ನಡೆದಿದ್ದ ಮರ್ಯಾದಾ ಹತ್ಯೆ ಘಟನೆ ಆಧರಿಸಿ ನಿರ್ದೇಶಕ ಹಾಗೂ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಅವರು ಮರ್ಡರ್ ಹೆಸರಿನಲ್ಲಿ ಸಿನಿಮಾ ನಿರ್ಮಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ವರ್ಮಾ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ. 

published on : 5th July 2020

ವೈದ್ಯಕೀಯ ಸಲಕರಣೆ ಖರೀದಿ ದಾಖಲೆ ಬಿಡುಗಡೆ ಮಾಡಿ: ಸಿದ್ದರಾಮಯ್ಯ ಆಗ್ರಹಕ್ಕೆ ನಯಾಪೈಸೆ ಅವ್ಯವಹಾರ ಆಗಿಲ್ಲವೆಂದ ಶ್ರೀರಾಮುಲು

ಕೊರೋನಾ ಸೋಂಕು ನಿಯಂತ್ರಿಸುವ  ವೈದ್ಯಕೀಯ ಸಲಕರಣೆ ಖರೀದಿಯಲ್ಲಿ ಅವ್ಯವಹಾರವಾಗಿಲ್ಲ ಎನ್ನುವುದಾದರೆ ಸೂಕ್ತ ದಾಖಲೆ ಬಿಡುಗಡೆ ಮಾಡುವಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

published on : 4th July 2020

ವೀರಂ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಗೆ ಮಾಸ್ ಲುಕ್!

ಕಮರ್ಷಿಯಲ್​​ ಎಂಟರ್ಟೈನ್ಮೆಂಟ್​​ ಆಗಿರುವ ವೀರಂ ಸಿನಿಮಾದಲ್ಲಿ ಸ್ಯಾಂಡಲ್​ವುಡ್​ ಡೈನಾಮಿಕ್​ ಪ್ರಿನ್ಸ್​​  ಪ್ರಜ್ವಲ್​​ ದೇವರಾಜ್​ ಅವರು ಸಾಹಸ ಸಿಂಹ ಅವರ ಅಭಿಮಾನಿಯಾಗಿ ಮಾಸ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ದಿಶಾ ಎಂಟರ್ಟೈನ್ಮೆಂಟ್​​ನಡಿಯಲ್ಲಿ ಈ ಸಿನಿಮಾ ಮೂಡಿಬರುತ್ತಿದೆ.

published on : 4th July 2020

'ಗ್ರಾಮಾಯಣ' ಚಿತ್ರ ನಿರ್ಮಾಪಕ ಎನ್‌ಎಲ್‌ಎನ್ ಮೂರ್ತಿ ನಿಧನ

ರಾಘವೇಂದ್ರ ರಾಜ್ ಕುಮಾರ್ ಪುತ್ರ ವಿನಯ್ ರಾಜ್ ಕುಮಾರ್ ಅಭಿನಯದ "ಗ್ರಾಮಾಯಣ" ಚಿತ್ರದ ನಿರ್ಮಾಪಕ ಎನ್.ಎಲ್.ಎನ್. ಮೂರ್ತಿ(39 ) ನಿಧನರಾಗಿದ್ದಾರೆ. 

published on : 4th July 2020

ಕೊರೋನಾ ಸಂಕಷ್ಟದಲ್ಲೂ ರಾಜ್ಯ ಸರ್ಕಾರದಿಂದ ಲೂಟಿ: ಸಿದ್ದರಾಮಯ್ಯ

ಕೊರೋನಾ ಸಂಕಟದಲ್ಲಿಯೂ ರಾಜ್ಯ ಸರ್ಕಾರ ಹಣ ಲೂಟಿ ಹೊಡೆದಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

published on : 3rd July 2020

ದೆಹಲಿ ಗಲಭೆಯಲ್ಲಿ ಮೃತಪಟ್ಟ 9 ಮಂದಿಗೆ ಜೈ ಶ್ರೀರಾಮ್ ಘೋಷಣೆ ಕೂಗಲು ಬಲವಂತ: ಕೋರ್ಟ್ ಗೆ ಪೊಲೀಸರ ಮಾಹಿತಿ 

ಈಶಾನ್ಯ ದೆಹಲಿಯಲ್ಲಿ ಫೆಬ್ರವರಿ ತಿಂಗಳಲ್ಲಿ ನಡೆದ ಗಲಭೆ ವೇಳೆ 9 ಮುಸ್ಲಿಮರನ್ನು ಜೈಶ್ರೀರಾಮ್ ಘೋಷಣೆ ಕೂಗಲು ನಿರಾಕರಿಸಿದ ಕಾರಣಕ್ಕೆ ಹತ್ಯೆ ಮಾಡಲಾಗಿದೆ. ಹತ್ಯೆ ಮಾಡಿದ ಕೆಲವರು ವಾಟ್ಸ್ ಆಪ್ ಗ್ರೂಪ್ ಮೂಲಕ ಸಂಪರ್ಕದಲ್ಲಿದ್ದರು ಎಂದು ದೆಹಲಿ ಪೊಲೀಸರು ಕೋರ್ಟ್ ಗೆ ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ಹೇಳಿದ್ದಾರೆ.

published on : 3rd July 2020

ಅವಧಿ ಮುಗಿದ ಗ್ರಾಮ ಪಂಚಾಯತ್ ಗಳಿಗೆ ಆಡಳಿತಾಧಿಕಾರಿ ನೇಮಕ ಆದೇಶ ಎತ್ತಿ ಹಿಡಿದ ಹೈಕೋರ್ಟ್

ರಾಜ್ಯದಲ್ಲಿ ಚುನಾಯಿತ ಅವಧಿ ಪೂರ್ಣಗೊಂಡಿರುವ ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿ ನೇಮಿಸುವ ಸರ್ಕಾರದ ನಿರ್ಧಾರವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

published on : 3rd July 2020
1 2 3 4 5 6 >