ಹಾವೇರಿ ಸಾಮೂಹಿಕ ಅತ್ಯಾಚಾರ ಪ್ರಕರಣ: ದೂರು ಹಿಂಪಡೆಯುವಂತೆ ಹಣದ ಆಮಿಷ ನೀಡುತ್ತಿದ್ದಾರೆ; ಸಂತ್ರಸ್ತ ಮಹಿಳೆ

ದೂರು ಹಿಂಪಡೆಯುವಂತೆ ಅಪರಿಚಿತ ವ್ಯಕ್ತಿಗಳು ಒತ್ತಡ ಹೇರುತ್ತಿದ್ದು, ಹಣದ ಆಮಿಷವನ್ನೂ ನೀಡುತ್ತಿದ್ದಾರೆಂದು ಹಾವೇರಿ ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ತ ಮಹಿಳೆ ಹೇಳಿಕೆ ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಹಾವೇರಿ: ದೂರು ಹಿಂಪಡೆಯುವಂತೆ ಅಪರಿಚಿತ ವ್ಯಕ್ತಿಗಳು ಒತ್ತಡ ಹೇರುತ್ತಿದ್ದು, ಹಣದ ಆಮಿಷವನ್ನೂ ನೀಡುತ್ತಿದ್ದಾರೆಂದು ಹಾವೇರಿ ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ತ ಮಹಿಳೆ ಹೇಳಿಕೆ ನೀಡಿದ್ದಾರೆ.

ಸಾಂತ್ವನ ಕೇಂದ್ರದಲ್ಲಿ ಮಾಜಿ ಸಚಿವ ಬಿ ಸಿ ಪಾಟೀಲ್ ನೇತೃತ್ವದ ಬಿಜೆಪಿ ನಿಯೋಗದೊಂದಿಗೆ ಮಾತನಾಡಿದ ಮಹಿಳೆ, ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡಿದ್ದೇನೆ. ಕೆಲ ಅಪರಿಚಿತ ವ್ಯಕ್ತಿಗಳು ಹಣದ ಆಮಿಷ ನೀಡುತ್ತಿದ್ದು, ದೂರು ಹಿಂಪಡೆಯುವಂತೆ ಒತ್ತಡ ಹೇರುತ್ತಿದ್ದಾರೆ. ಆದರೆ, ನಾನು ಅದನ್ನು ತಿರಸ್ಕರಿಸಿದ್ದೇನೆ. ಹಣದಿಂದ ನನ್ನ ಘನತೆ ಮರಳಿ ಬಾರದು ಎಂದು ಹೇಳಿದ್ದಾರೆ.

ಬಳಿಕ ಬಿಜೆಪಿ ನಿಯೋಗ ಮಹಿಳೆಗೆ ಸಾಂತ್ವನ ಹೇಳಿ, ಪರಿಹಾರವಾಗಿ ರೂ.25,000ಗಳನ್ನು ನೀಡಿದರು.

ಈ ನಡುವೆ ಶನಿವಾರ ಘಟನಾ ಸ್ಥಳಕ್ಕೆ ಪೂರ್ವವಲಯದ IGP ತ್ಯಾಗರಾಜನ್ ಭೇಟಿ ನೀಡಿ ಪ್ರಕರಣದ ಬಗ್ಗೆ ಮಾಹಿತಿ ಪಡೆದುಕೊಂಡರು.

ಪ್ರಕರಣ ಸಂಬಂಧ ಏಳು ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಈ ಪೈಕಿ ಮೂವರನ್ನು ಬಂಧಿಸಲಾಗಿದೆ, ನಾಲ್ಕನೆ ಆರೋಪಿ ಕಾಲು ಮುರಿತದಿಂದ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಡಿವೈಎಸ್‌ಪಿ ನೇತೃತ್ವದ ಪೊಲೀಸ್ ತಂಡವು ಇತರ ಮೂವರಿಗಾಗ ಶೋಧ ಕಾರ್ಯವನ್ನು ಮುಂದುವರೆಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com