ಶಿವಮೊಗ್ಗ: ಸಂಚಾರ ನಿಯಮ ಉಲ್ಲಂಘನೆ, 6.97 ಕೋಟಿ ರೂ. ದಂಡ ವಿಧಿಸಿದ ಪೊಲೀಸರು!

ಸಂಚಾರ ಪೊಲೀಸರು ಹೆಚ್ಚಿನ ಸಾಂದ್ರತೆಯ ಕ್ಯಾಮರಾಗಳ ಮೂಲಕ ನಿಯಮ ಉಲ್ಲಂಘನೆಗೆ ದಂಡವನ್ನು ವಿಧಿಸುತ್ತಿದ್ದರೂ ನಗರದ ನಿವಾಸಿಗಳು ಇನ್ನೂ ಗಂಭೀರವಾಗಿಲ್ಲ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಶಿವಮೊಗ್ಗ: ಸಂಚಾರ ಪೊಲೀಸರು ಹೆಚ್ಚಿನ ಸಾಂದ್ರತೆಯ ಕ್ಯಾಮರಾಗಳ ಮೂಲಕ ನಿಯಮ ಉಲ್ಲಂಘನೆಗೆ ದಂಡವನ್ನು ವಿಧಿಸುತ್ತಿದ್ದರೂ ನಗರದ ನಿವಾಸಿಗಳು ಇನ್ನೂ ಗಂಭೀರವಾಗಿಲ್ಲ.

ಶಿವಮೊಗ್ಗ ಸ್ಮಾರ್ಟ್ ಸಿಟಿ ಲಿಮಿಟೆಡ್  ಸಂಯೋಜಿತ ಸಂಚಾರ ನಿರ್ವಹಣೆ ವ್ಯವಸ್ಥೆ (ಐಟಿಎಂಎಸ್) ಅಡಿಯಲ್ಲಿ ಶಿವಮೊಗ್ಗ ಪೊಲೀಸರು ಅಳವಡಿಸಲಾಗಿರುವ ಕ್ಯಾಮೆರಾಗಳ ಸಹಾಯದಿಂದ ಐದು ತಿಂಗಳ ಅವಧಿಯಲ್ಲಿ ಸಂಚಾರ ನಿಯಮ ಉಲ್ಲಂಘಿಸುವವರಿಗೆ 6.97 ಕೋಟಿ ರೂ. ದಂಡವನ್ನು ವಿಧಿಸಿದ್ದಾರೆ. ಆದರೆ ಇಲ್ಲಿಯವರೆಗೆ ಕೇವಲ ರೂ. 40 ಲಕ್ಷ ಪಾವತಿಸಲಾಗಿದೆ. ಒಟ್ಟು 89,562 ಇ-ಚಲನ್‌ಗಳು ಬಾಕಿ ಉಳಿದಿದ್ದು, ಉಲ್ಲಂಘಿಸಿದವರು ಇನ್ನೂ 6.57 ಕೋಟಿ ರೂ.ಗಳ ದಂಡವನ್ನು ಪಾವತಿಸಬೇಕಿದೆ. 

ಈ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಎಎಸ್ಪಿ) ಅನಿಲ್ ಕುಮಾರ್ ಭೂಮರೆಡ್ಡಿ, ಸಂಚಾರ ಉಲ್ಲಂಘನೆಗಳಿಗೆ ವಿಧಿಸಬಹುದಾದ ದಂಡದ ಬಗ್ಗೆ ಪೊಲೀಸರು ಸಾರ್ವಜನಿಕರಿಗೆ ನಿರಂತರವಾಗಿ ಶಿಕ್ಷಣ ನೀಡುತ್ತಿದ್ದಾರೆ. ಆನ್‌ಲೈನ್ ಪಾವತಿ ವಿಧಾನಗಳನ್ನು ಪೊಲೀಸರು ಪರಿಚಯಿಸಿದ್ದಾರೆ. ಡೆಬಿಟ್,  ಕ್ರೆಡಿಟ್ ಕಾರ್ಡ್‌ಗಳು ಮತ್ತು ಇತರರ ಮೂಲಕ ಸಂಚಾರ ಪೊಲೀಸ್ ಠಾಣೆಗಳಲ್ಲಿ ದಂಡವನ್ನು ಪಾವತಿಸಬಹುದು ಅಥವಾ ನೋಟಿಸ್ ಸ್ವೀಕರಿಸಿದ ನಂತರ ನ್ಯಾಯಾಲಯದಲ್ಲಿ ಪಾವತಿಸಬಹುದು ಎಂದು ತಿಳಿಸಿದರು. 

"ಕ್ಯಾಮೆರಾಗಳನ್ನು ಅಳವಡಿಸಿದ ನಂತರ ಜನರು ಎಚ್ಚರಗೊಂಡಿದ್ದಾರೆ. ಸಾರ್ವಜನಿಕರು ತಮ್ಮ ವಾಹನಗಳನ್ನು ನಿಧಾನಗೊಳಿಸಲು ಪ್ರಾರಂಭಿಸಿದ್ದಾರೆ, ಹೆಲ್ಮೆಟ್ ಧರಿಸುತ್ತಾರೆ ಮತ್ತು ಸಿಗ್ನಲ್ ಬಳಿ ಬರುವಾಗ ಜೀಬ್ರಾ ಲೈನ್ ಅನ್ನು ದಾಟದಿರುವ ಬಗ್ಗೆ ಜಾಗೃತರಾಗಿದ್ದಾರೆ. ಡಿಜಿಟಲ್ ಸಾಕ್ಷ್ಯವನ್ನು ನಿರಾಕರಿಸಲಾಗುವುದಿಲ್ಲ ಎಂದು ಅವರಿಗೆ ತಿಳಿದಿದೆ. ಆದರೂ ಸಂಚಾರ ನಿಯಮಗಳ ಸಂಪೂರ್ಣ ಅನುಷ್ಠಾನಕ್ಕೆ ಸಮಯ ಬೇಕಾಗುತ್ತದೆ  ಎಂದು ಮಾಹಿತಿ ನೀಡಿದರು.

ವಾಹನ ತಪಾಸಣೆ ವೇಳೆ ಹತ್ತಕ್ಕೂ ಹೆಚ್ಚು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಕಂಡುಬಂದಲ್ಲಿ ಸ್ಥಳದಲ್ಲೇ ದಂಡ ಪಾವತಿಸುವಂತೆ ಅಥವಾ ವಾಹನವನ್ನು ಸೀಜ್ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ. ಸುಗಮ ಸಂಚಾರಕ್ಕಾಗಿ ಮತ್ತು ನಗರವನ್ನು ಅಪಘಾತಗಳಿಂದ ಮುಕ್ತಗೊಳಿಸಲು ಸಂಯೋಜಿತ ಸಂಚಾರ ನಿರ್ವಹಣಾ ವ್ಯವಸ್ಥೆಯಡಿ 72 ಆರ್ ಎಲ್ ವಿಡಿ ಕ್ಯಾಮರಾಗಳು, 30 ವೇಗ ಉಲ್ಲಂಘನೆ ಪತ್ತೆ ಕ್ಯಾಮರಾಗಳು, 38 ಪ್ಯಾನ್ ಟಿಲ್ಟ್ ಕ್ಯಾಮರಾಗಳು, 8 ಸರಾಸರಿ ವೇಗ ಉಲ್ಲಂಘನೆ ಪತ್ತೆ ಕ್ಯಾಮರಾಗಳು,  10 ಸ್ಮಾರ್ಟ್ ಪೋಲ್ 360 ಡಿಗ್ರಿ  ಕ್ಯಾಮೆರಾಗಳು ಮತ್ತು 44 ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. 

ಈ ಕ್ಯಾಮೆರಾಗಳನ್ನು OFC ನೆಟ್‌ವರ್ಕ್ ಮೂಲಕ ಕೇಂದ್ರೀಕೃತ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್‌ಗೆ ಸಂಪರ್ಕಿಸಲಾಗಿದೆ. ಎಲ್ಲಾ ಕ್ಯಾಮೆರಾಗಳ ಡೇಟಾವನ್ನು ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್‌ನಲ್ಲಿ ಸಂಗ್ರಹಿಸಲಾಗುತ್ತದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com