ರಾಮಮಂದಿರ ಕಾರ್ಯಕ್ರಮಕ್ಕಾಗಿ ಭಕ್ತರಿಂದ ಅಯೋಧ್ಯೆಗೆ ಪಾದಯಾತ್ರೆ

ಅಯೋಧ್ಯೆ ರಾಮಮಂದಿರದಲ್ಲಿ ಇದೇ ಜನವರಿ 22ರಂದು ನಡೆಯಲಿರುವ ರಾಮಲಲ್ಲಾ ಪ್ರತಿಮೆ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಕರ್ನಾಟಕದಿಂದ ಕೆಲ ಭಕ್ತರು ಅಯೋಧ್ಯೆಗೆ ಪಾದಯಾತ್ರೆ ಕೈಗೊಂಡಿದ್ದಾರೆ.
ಭಕ್ತರಿಂದ ಅಯೋಧ್ಯೆಗೆ ಪಾದಯಾತ್ರೆ
ಭಕ್ತರಿಂದ ಅಯೋಧ್ಯೆಗೆ ಪಾದಯಾತ್ರೆ

ಗದಗ: ಅಯೋಧ್ಯೆ ರಾಮಮಂದಿರದಲ್ಲಿ ಇದೇ ಜನವರಿ 22ರಂದು ನಡೆಯಲಿರುವ ರಾಮಲಲ್ಲಾ ಪ್ರತಿಮೆ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಕರ್ನಾಟಕದಿಂದ ಕೆಲ ಭಕ್ತರು ಅಯೋಧ್ಯೆಗೆ ಪಾದಯಾತ್ರೆ ಕೈಗೊಂಡಿದ್ದಾರೆ.

ಕರ್ನಾಟಕ ಮತ್ತು ಇತರ ದಕ್ಷಿಣ ಭಾರತದ ರಾಜ್ಯಗಳಿಂದ ಅನೇಕ ಜನರು ಐತಿಹಾಸಿಕ ರಾಮಮಂದಿರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಯಾತ್ರಾ ಕೇಂದ್ರಕ್ಕೆ ಪಾದಯಾತ್ರೆಯನ್ನು ಪ್ರಾರಂಭಿಸಿದ್ದಾರೆ. ಪ್ರತಿ ನಿತ್ಯ 30ರಿಂದ 40 ಕಿ.ಮೀ ನಡೆದು ದಾರಿಯಲ್ಲಿ ಸಿಗುವ ಮಠಗಳು ಮತ್ತು ದೇವಾಲಯಗಳಲ್ಲಿ ವಿಶ್ರಾಂತಿ ಪಡೆಯುತ್ತಾ ತಮ್ಮ ಪಾದಯಾತ್ರೆ ಸಾಗಿಸುತ್ತಿದ್ದಾರೆ. ಹೀಗೆ ಪಾದಯಾತ್ರೆ ಕೈಗೊಂಡಿರುವ ಭಕ್ತರಿಗೆ ಉತ್ತರದ ರಾಜ್ಯಗಳ ಜನರಿಂದ ಆತ್ಮೀಯ ಸ್ವಾಗತವನ್ನು ಪಡೆಯುತ್ತಿದ್ದಾರೆ. ಅಲ್ಲದೆ ಅವರು ಪಾದಾಯಾತ್ರಾರ್ಥಿಗಳ ಊಟ ಮತ್ತು ವಸತಿ ವ್ಯವಸ್ಥೆ ಮಾಡುತ್ತಿದ್ದಾರೆ.

ರಾನ್ ತಾಲೂಕಿನ ಕರ್ಕಿಕಟ್ಟಿ ಗ್ರಾಮದ ಮುತ್ತಣ್ಣ ತಿರ್ಲಾಪುರ ಅವರು ಡಿ.9ರಂದು ಗದಗದಿಂದ ಹೊರಟಿದ್ದು, ಎರಡು-ಮೂರು ದಿನಗಳಲ್ಲಿ ಅಯೋಧ್ಯೆ ತಲುಪುವ ನಿರೀಕ್ಷೆ ಇದೆ. ಅವರಂತೆಯೇ ಹುಬ್ಬಳ್ಳಿಯ ಮನೋಜ್ ಅರ್ಕಟ್ ಕೂಡ ಪಾದಯಾತ್ರೆ ಮೂಲಕ ಅಲ್ಲಿಗೆ ಕಾಲಿಟ್ಟಿದ್ದಾರೆ. ಇತರ ಯಾತ್ರಿಗಳಂತೆ, ತಿರ್ಲಾಪುರ ಅವರೂ ಕೂಡ ಯಾವುದೇ ಆಹಾರ ಅಥವಾ ನೀರು ಅಥವಾ ಹಣವನ್ನು ತಮ್ಮ ಯಾತ್ರೆಯೊಂದಿಗೆ ಕೊಂಡೊಯ್ಯುತ್ತಿಲ್ಲ. ಪಾದಯಾತ್ರೆಯ ಸಮಯದಲ್ಲಿ ಅವರ ಮುಖ್ಯ ಉದ್ದೇಶವೆಂದರೆ ಮದ್ಯ ಮುಕ್ತ ರಾಷ್ಟ್ರವನ್ನು ಮಾಡುವ ಮತ್ತು ಪರಿಸರವನ್ನು ಉಳಿಸುವ ಬಗ್ಗೆ ಜಾಗೃತಿ ಮೂಡಿಸುವುದು. ತಿರ್ಲಾಪುರ್ ಅವರು ಹಿಂದಿ ಭಾಷೆ ಬಲ್ಲವರಲ್ಲದ ಕಾರಣ, ಅಯೋಧ್ಯೆಗೆ ಪಾದಯಾತ್ರೆ ನಡೆಸುತ್ತಿದ್ದಾರೆ ಎಂಬ ನಾಮಫಲಕವನ್ನು ಹೊತ್ತು ಸಾಗುತ್ತಿದ್ದಾರೆ.  ಜೊತೆಗೆ ಭಗವಾನ್ ರಾಮ, ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧಿ, ರಾಮ ಲಕ್ಷ್ಮಣ ಮತ್ತು ಸೀತಾ, ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಎಪಿಜೆ ಅಬ್ದುಲ್ ಕಲಾಂ ಅವರ ಫೋಟೋಗಳನ್ನೂ ಕೂಡ ಹೊತ್ತು ಸಾಗುತ್ತಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, "ನಾನು ಪಾದಯಾತ್ರೆ ಮೂಲಕ ಅಯೋಧ್ಯೆಗೆ ಭೇಟಿ ನೀಡಲು ನಿರ್ಧರಿಸಿದ್ದೇನೆ. ಅಯೋಧ್ಯೆ ಮಂದಿರದ ಕನಸು ಈಗ ನನಸಾಗುತ್ತಿದೆ ಮತ್ತು ಇದು ಭಾರತದ ಐತಿಹಾಸಿಕ ಆಂದೋಲನವಾಗಿದೆ. ಭಾರತೀಯ ಮತ್ತು ಹನುಮಂತ ಮತ್ತು ರಾಮನ ಭಕ್ತನಾಗಿ, ಅಲ್ಲಿ ಹಾಜರಿರುವುದು ನನ್ನ ಕರ್ತವ್ಯ. ಹೀಗಾಗಿ ನಾನು ಪಾದಯಾತ್ರೆ ಮೂಲದ ಆಯೋಧ್ಯೆಗೆ ತೆರಳಲು ಯೋಚಿಸಿದೆ. ಪರಿಸರ, ನೀರು ಉಳಿಸುವುದು, ಪರಸ್ಪರ ಸಹಾಯ ಮಾಡುವುದು ಮತ್ತು ಮಹಿಳೆಯರನ್ನು ಗೌರವಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಇದು ಸರಿಯಾದ ಸಮಯ” ಎಂದು ಅವರು ಹೇಳಿದರು.

ಹೈದರಾಬಾದ್‌ನ ಅರವತ್ನಾಲ್ಕು ವರ್ಷದ ಚಲ್ಲಾ ಶ್ರೀನಿವಾಸ್ ಶಾಸ್ತ್ರಿ ಅವರು ಭಗವಾನ್ ರಾಮನಿಗೆ ಚಿನ್ನದ ಲೇಪಿತ ಪಾದರಕ್ಷೆಗಳನ್ನು ಹೊತ್ತು ಪಾದಯಾತ್ರೆಯಲ್ಲಿ ಅಯೋಧ್ಯೆಗೆ ತೆರಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com