ಕರ್ನಾಟಕದಲ್ಲಿ ಕೋವಿಡ್ ಸಕ್ರಿಯ ಸಂಖ್ಯೆ ಇಳಿಮುಖ: ಸೋಂಕು ತಗ್ಗುವ ಬಗ್ಗೆ ತಜ್ಞರ ಆಶಾವಾದ

ಡಿಸೆಂಬರ್ ಅಂತ್ಯದ ವೇಳೆಗೆ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಏರಿಕೆಯಾಗಿ ಜೆಎನ್ 1 ರೂಪಾಂತರ ಕಂಡುಬಂದ ನಂತರ, ರಾಜ್ಯವು ಈಗ ಸಕ್ರಿಯ ಕೋವಿಡ್ ಪಾಸಿಟಿವ್ ಪ್ರಕರಣಗಳು, ಧನಾತ್ಮಕತೆಯ ಪ್ರಮಾಣ ಮತ್ತು ಆಸ್ಪತ್ರೆಗೆ ದಾಖಲಾಗುವ ಸಂಖ್ಯೆಯಲ್ಲಿ ಇಳಿಮುಖವಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಡಿಸೆಂಬರ್ ಅಂತ್ಯದ ವೇಳೆಗೆ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಏರಿಕೆಯಾಗಿ ಜೆಎನ್ 1 ರೂಪಾಂತರ ಕಂಡುಬಂದ ನಂತರ, ರಾಜ್ಯವು ಈಗ ಸಕ್ರಿಯ ಕೋವಿಡ್ ಪಾಸಿಟಿವ್ ಪ್ರಕರಣಗಳು, ಧನಾತ್ಮಕತೆಯ ಪ್ರಮಾಣ ಮತ್ತು ಆಸ್ಪತ್ರೆಗೆ ದಾಖಲಾಗುವ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಕಳೆದ ಕೆಲವು ದಿನಗಳಲ್ಲಿ ದಾಖಲಾಗಿರುವ ರೋಗಿಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ತಜ್ಞರು ಹೇಳುತ್ತಾರೆ.

ಡಿಸೆಂಬರ್ ಮಧ್ಯದ ವೇಳೆಗೆ ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಪ್ರಸ್ತುತ ದಿನಕ್ಕೆ ಸುಮಾರು 700 ಪರೀಕ್ಷೆಗಳಿಂದ ದಿನಕ್ಕೆ 8,000 ಕ್ಕೆ ಏರಿಕೆಯಾಗಿದೆ. ಡಿಸೆಂಬರ್ 19, 2023 ರಂದು ಕೇವಲ 79 ಸಕ್ರಿಯ ಪ್ರಕರಣಗಳಿಂದ, ಡಿಸೆಂಬರ್ 31 ರ ವೇಳೆಗೆ 1,000 ಸಕಾರಾತ್ಮಕ ಪ್ರಕರಣಗಳನ್ನು ತಲುಪಿದ್ದವು. ಜನವರಿ 4 ರ ಹೊತ್ತಿಗೆ ಪ್ರಕರಣಗಳು 1,240ಕ್ಕೆ ತಲುಪಿತ್ತು. 

ಅಲ್ಲಿಂದೀಚೆಗೆ, ಸಕ್ರಿಯ ಪ್ರಕರಣಗಳ ಸಂಖ್ಯೆಯು ಇಳಿಕೆಯಾಗುತ್ತಿದೆ. ಜನವರಿ 10 ರ ವೇಳೆಗೆ, ಸಕ್ರಿಯ ಪ್ರಕರಣಗಳು 974 ರಷ್ಟಿದ್ದು, ನಿನ್ನೆ 751 ಕ್ಕೆ ಇಳಿಕೆಯಾಗಿದೆ. ಸುಮಾರು 6,143 ಪರೀಕ್ಷೆಗಳನ್ನು ಮಾಡಲಾಗಿದ್ದು, ನಿನ್ನೆ ಮಂಗಳವಾರ 63 ಸಕಾರಾತ್ಮಕ ಪ್ರಕರಣಗಳು ವರದಿಯಾಗಿವೆ. 36 ಜನರನ್ನು ರಾಜ್ಯಾದ್ಯಂತ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ.

ಧನಾತ್ಮಕತೆಯ ದರವು ಶೇಕಡಾ 1.02 ಎಂದು ವರದಿಯಾಗಿದೆ ಮತ್ತು ಯಾವುದೇ ಸಾವುಗಳು ವರದಿಯಾಗಿಲ್ಲ.
ಬೆಂಗಳೂರಿನ ಸಕ್ರಾ ವರ್ಲ್ಡ್ ಹಾಸ್ಪಿಟಲ್‌ನ ಹಿರಿಯ ಸಲಹೆಗಾರ ಮತ್ತು ಎಚ್‌ಒಡಿ ಪೀಡಿಯಾಟ್ರಿಕ್ಸ್ ಮತ್ತು ನಿಯೋನಾಟಾಲಜಿಯ ಡಾ ರಜತ್ ಆತ್ರೇಯ, “ನಾವು ಸಕಾರಾತ್ಮಕತೆಯ ದರ, ಸಕ್ರಿಯ ಪ್ರಕರಣಗಳ ಸಂಖ್ಯೆ ಮತ್ತು ಆಸ್ಪತ್ರೆಗೆ ದಾಖಲಾಗುವ ಇಳಿಕೆಯ ಪ್ರವೃತ್ತಿಯನ್ನು ನೋಡುತ್ತಿದ್ದೇವೆ. ಸೋಂಕು ಕಡಿಮೆಯಾಗುತ್ತಿದೆ. ಕೆಲವು ವಾರಗಳ ಹಿಂದೆ ಕೇರಳದಲ್ಲಿ ಇದೇ ರೀತಿಯ ಸನ್ನಿವೇಶ ಕಂಡುಬಂದಿತ್ತು ಎಂದು ಅವರು ಹೇಳಿದರು.

ಹಬ್ಬಗಳ ಕಾರಣದಿಂದಾಗಿ ಕಡಿಮೆ ಪರೀಕ್ಷೆಗಳನ್ನು ನಡೆಸುತ್ತಿರುವುದು ಸಕಾರಾತ್ಮಕ ಪ್ರಕರಣಗಳ ಇಳಿಮುಖ ಪ್ರವೃತ್ತಿಗೆ ಕಾರಣವಾಗಿದೆ ಎಂದು ಆರೋಗ್ಯ ಆಯುಕ್ತ ರಂದೀಪ್ ಡಿ ಹೇಳುತ್ತಾರೆ. 

ಬೆಂಗಳೂರಿನಲ್ಲಿ ಶೇಕಡಾ 53ರಷ್ಟು ಕೋವಿಡ್ ಸಮಾಲೋಚನೆ ಕಂಡುಬರುತ್ತವೆ. ನಂತರ ದೆಹಲಿಯು ಶೇಕಡಾ 15, ಹೈದರಾಬಾದ್ ಶೇಕಡಾ 14, ಚೆನ್ನೈ ಶೇಕಡಾ 7, ಮುಂಬೈ ಶೇಕಡಾ 5 ಮತ್ತು ಪುಣೆ ಶೇಕಡಾ 4ರಷ್ಟು ಕಂಡಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com