ಬೆಂಗಳೂರು: ಸಿಗ್ನಲ್ ಜಂಪ್ ಮಾಡಿದ ಮಗ; ತಾಯಿಗೆ ಹೆಲ್ಮೆಟ್ ನಿಂದ ಥಳಿಸಿದ ಬೈಕ್ ಸವಾರ!

ಯುವಕನೋರ್ವ ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಿದ ಹಿನ್ನೆಲೆಯಲ್ಲಿ ಆತನ ತಾಯಿಯ ಮೇಲೆ ಹೆಲ್ಮೆಟ್ ನಿಂದ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಕೆಜಿ ಹಳ್ಳಿಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಯುವಕನೋರ್ವ ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಿದ ಹಿನ್ನೆಲೆಯಲ್ಲಿ ಆತನ ತಾಯಿಯ ಮೇಲೆ ಹೆಲ್ಮೆಟ್ ನಿಂದ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಕೆಜಿ ಹಳ್ಳಿಯಲ್ಲಿ ನಡೆದಿದೆ.

ಕೆ.ಜಿ.ರಸ್ತೆಯಲ್ಲಿ ಮಂಗಳವಾರ ರಾತ್ರಿ 10.45 ರಿಂದ 11.30 ರ ನಡುವೆ ರಸ್ತೆ ರಂಪಾಟದಲ್ಲಿ 41 ವರ್ಷದ ಮಹಿಳೆಯ ಮೇಲೆ ಹಲ್ಲೆ ನಡೆದಿದೆ. ಕಾಟನ್‌ಪೇಟೆಯ ಸಿದ್ದಾರ್ಥನಗರ ನಿವಾಸಿ ರೆಹಾನಾ ತಾಜ್  ಅವರ ಮೇಲೆ ಹಲ್ಲೆ ನಡೆದಿದೆ, ಆಕೆ ತನ್ನ 22 ವರ್ಷದ ಮಗ ಫಹೀದ್‌ನೊಂದಿಗೆ ತನ್ನ ದ್ವಿಚಕ್ರ ವಾಹನದಲ್ಲಿ ಮನೆಗೆ ಹಿಂದಿರುಗುತ್ತಿದ್ದರು.

ವಾಹನ ಚಲಾಯಿಸುತ್ತಿದ್ದ ಫಹೀದ್, ಸಾಗರ್ ಜಂಕ್ಷನ್‌ನಲ್ಲಿ ಸಿಗ್ನಲ್ ಜಂಪ್ ಮಾಡಿದ್ದಾನೆ, ಈ ವೇಳೆ ಸಿಗ್ನಲ್ ಕ್ಲಿಯರೆನ್ಸ್‌ಗಾಗಿ ರಸ್ತೆಯಲ್ಲಿ ಕಾದು ನಿಂತಿದ್ದ ಆರೋಪಿಗೆ ಡಿಕ್ಕಿ ಹೊಡೆಯಲು ತೀರಾ ಸಮೀಪ ಹೋಗಿದ್ದಾನೆ.

ಇದರಿಂದ ಕೋಪಗೊಂಡ ಆರೋಪಿ ವಿಶಾಲ್  ಸಿಗ್ನಲ್ ಜಂಪ್ ಮಾಡಿದ ಫಹೀದ್ ನನ್ನು ನಿಂದಿಸಿದ್ದಾನೆ.  ಈ ವೇಳೆ  ಮಗನ ರಕ್ಷಣೆಗಾಗಿ, ರೆಹಾನಾ ಜಾತ್  ವಿಶಾಲ್  ಜೊತೆ ಜಗಳವಾಡಿದ್ದಾರೆ. ಈ ವೇಳೆ  ಹೆಲ್ಮೆಟ್‌ನಿಂದ ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.  ರಸ್ತೆಯಲ್ಲಿದ್ದ ಇತರೆ ವಾಹನ ಸವಾರರು ಜಗಳ ನಿಲ್ಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಎರಡೂ ಕಡೆಯವರನ್ನು ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.

ರೆಹಾನಾ ಅವರ ತುಟಿಗಳ ಮೇಲೆ ಆಳವಾದ ಗಾಯವಾಗಿದ್ದು, ಮುಖ ಊದಿಕೊಂಡಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಫಹೀದ್‌ಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

ನನ್ನ ಮಗ ಸಿಗ್ನಲ್ ಜಂಪ್ ಮಾಡಿದ್ದು ತಪ್ಪು ಎಂದು ನಾನೇ ಮೊದಲು ಒಪ್ಪಿಕೊಂಡೆ. ಆದರೆ ಆರೋಪಿ ನನ್ನ ಮಗನನ್ನು ನಿಂದಿಸಲು ಪ್ರಾರಂಭಿಸಿದಾಗ ನನಗೂ ಕೋಪ ಬಂತು. ನಾನು ಮಧ್ಯಪ್ರವೇಶಿಸಿದಾಗಆತ ನನ್ನೊಂದಿಗೆ ಜಗಳವಾಡಲು ಪ್ರಾರಂಭಿಸಿದನು  ನಂತರ ಅವನ ಹೆಲ್ಮೆಟ್‌ನಿಂದ ನನಗೆ ಹೊಡೆದನು.  ರಸ್ತೆ ಮಧ್ಯೆ ಜಗಳ ಉಲ್ಬಣವಾಗಬಾರದು ಎಂಬ ಕಾರಣಕ್ಕೆ ಅಲ್ಲಿಗೆ ಬಂದ ಕೆಲವು ಜನ ಜಗಳ ನಿಲ್ಲಿಸಿದರು ಎಂದು ರೆಹಾನಾ  ತಾಜ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಘಟನೆಯ ನಂತರ ಅವರು ವ್ಯಾಪ್ತಿಯ ಪೊಲೀಸ್ ಠಾಣೆಗೆ ಕರೆ ಮಾಡಿ  ಘಟನೆಯನ್ನು ವರದಿ ಮಾಡಿದ್ದಾಗಿ ಫಹೀದ್ ತಿಳಿಸಿದ್ದಾರೆ, ತಕ್ಷಣ ಪೊಲೀಸ್ ತಂಡವನ್ನು ಕಳುಹಿಸಲಾಯಿತು. ನನ್ನ ತಾಯಿಯ ಮೇಲೆ ದಾಳಿ ಮಾಡಿದ ಆರೋಪಿಯನ್ನು ಹಿಡಿದಿಟ್ಟುಕೊಂಡಿದ್ದೆ. ಇದೆಲ್ಲವೂ ಕ್ಷಣಮಾತ್ರದಲ್ಲಿ ನಡೆದಿದೆ.  ನಡೆದ ಘಟನೆ ಬಗ್ಗೆ ನನಗೆ  ವಿಷಾದವಿದೆ ಎಂದಿದ್ದಾರೆ.

ವಿಶಾಲ್ ರೆಸ್ಟೋರೆಂಟ್ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ. ಆತನ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಆತನ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com