ಮಂದಗತಿಯಲ್ಲಿ ಸಾಗುತ್ತಿರುವ ಬೆಂಗಳೂರು ಉಪನಗರ ರೈಲು ಯೋಜನೆ!

ಬೆಂಗಳೂರಿನ ಬಹುನಿರೀಕ್ಷಿತ ಸಬ್‌ ಅರ್ಬನ್‌ ರೈಲು ಯೋಜನೆಯು ಮಂದಗತಿಯಲ್ಲಿ ಸಾಗುತ್ತಿದೆ. ಪ್ರಸ್ತುತ ಪ್ರಗತಿಯಲ್ಲಿರುವ ಬೆನ್ನಿಗಾನಹಳ್ಳಿಯಿಂದ ಚಿಕ್ಕಬಾಣಾವರವೆಗಿನ (ಕಾರಿಡಾರ್‌-2) ಕಾಮಗಾರಿ, ಆದೇಶ ಹೊರಡಿಸಿ ಒಂದೂವರೆ ವರ್ಷ ಕಳೆದರೂ ನಿಧಾನಗತಿಯಲ್ಲಿ ಸಾಗುತ್ತಿದೆ.
ಕಾರಿಡಾರ್ -2 ನಲ್ಲಿ ನಡೆಯುತ್ತಿುವ ಸಿವಿಲ್ ಕಾಮಗಾರಿಗಳು
ಕಾರಿಡಾರ್ -2 ನಲ್ಲಿ ನಡೆಯುತ್ತಿುವ ಸಿವಿಲ್ ಕಾಮಗಾರಿಗಳು
Updated on

ಬೆಂಗಳೂರು: ಬೆಂಗಳೂರಿನ ಬಹುನಿರೀಕ್ಷಿತ ಸಬ್‌ ಅರ್ಬನ್‌ ರೈಲು ಯೋಜನೆಯು ಮಂದಗತಿಯಲ್ಲಿ ಸಾಗುತ್ತಿದೆ. ಪ್ರಸ್ತುತ ಪ್ರಗತಿಯಲ್ಲಿರುವ ಬೆನ್ನಿಗಾನಹಳ್ಳಿಯಿಂದ ಚಿಕ್ಕಬಾಣಾವರವೆಗಿನ (ಕಾರಿಡಾರ್‌-2) ಕಾಮಗಾರಿ, ಆದೇಶ ಹೊರಡಿಸಿ ಒಂದೂವರೆ ವರ್ಷ ಕಳೆದರೂ ನಿಧಾನಗತಿಯಲ್ಲಿ ಸಾಗುತ್ತಿದೆ.

ಅಗತ್ಯವಿರುವ ಭೂಮಿಯನ್ನು ಗುತ್ತಿಗೆದಾರರಿಗೆ ಹಸ್ತಾಂತರಿಸಬೇಕಾಗಿದೆ. ಇದು ಪ್ರಮುಖ ಸಮಸ್ಯೆಯಾಗಿದೆ. ಅಲ್ಲದೇ, ಕಾರ್ಮಿಕರ ಕೊರತೆಯು ಗುತ್ತಿಗೆದಾರರ ಮೇಲೆ ಗಂಭೀರ ಪರಿಣಾಮ ಬೀರಿತ್ತು. ಆದರೆ ಅದನ್ನು ಇತ್ತೀಚೆಗೆ ಪರಿಹರಿಸಲಾಗಿದೆ. ‘ಕಾರ್ಮಿಕರ ಪರಿಸ್ಥಿತಿ ಈಗ ಸುಧಾರಿಸಿದೆ.

ಬೆಂಗಳೂರು ಉಪನಗರ ರೈಲು ಯೋಜನೆ ಅನುಷ್ಠಾನದ ನೋಡಲ್‌ ಏಜೆನ್ಸಿ 'ಕೆ-ರೈಡ್‌' ನಿಂದ ಲಾರ್ಸೆನ್ ಮತ್ತು ಟೂಬ್ರೋ ಲಿಮಿಟೆಡ್ ರೂ 859.67 ಕೋಟಿಗೆ ಈ ಕಾರಿಡಾರ್ ನ್ನು (25.01 ಕಿಮೀ) ಗುತ್ತಿಗೆ ಪಡೆದುಕೊಂಡಿದೆ."ಮೇಲ್ವಿಚಾರಕರು ಮತ್ತು ಇಂಜಿನಿಯರ್‌ಗಳನ್ನು ಹೊರತುಪಡಿಸಿ ಒಟ್ಟು ಕಾರ್ಮಿಕರ ಸಂಖ್ಯೆ 400 ಕ್ಕೂ ಹೆಚ್ಚಾಗಿದೆ ಎಂದು ಕೆ-ರೈಡ್ ಪ್ರತಿಕ್ರಿಯಿಸಿದೆ. 

ಗುತ್ತಿಗೆದಾರರು ದೀಪಾವಳಿಯವರೆಗೆ ಕಾರ್ಮಿಕರ ತೀವ್ರ ಕೊರತೆ ಎದುರಿಸಿದರು. ಅದರ ನಂತರ ಪರಿಸ್ಥಿತಿ ಸುಧಾರಿಸಿದ್ದು, ಕಾರ್ಮಿಕರು ಬ್ಯಾಚ್‌ಗಳಲ್ಲಿ ಹಿಂತಿರುಗುತ್ತಿದ್ದಾರೆ. ಬಾರ್ಬೆಂಡರ್‌ಗಳು ಮತ್ತು ಕಾರ್ಪೆಂಟರ್ ಗಳ ಅಗತ್ಯವಿದೆ. ಆದರೆ, ಅವರಿಲ್ಲದೆ ಕೆಲಸಕ್ಕೆ ಸಮಸ್ಯೆಯಾಗಿತ್ತು. ಕಾರ್ಮಿಕರ ಪರಿಸ್ಥಿತಿ ಈಗ ಸುಧಾರಿಸಿದೆ ಎಂದು ಮೂಲಗಳು ತಿಳಿಸಿವೆ. 

ಒಂದು ಹಂತದಲ್ಲಿ ಗುತ್ತಿಗೆದಾರರು ಮರುಪಾವತಿಗಾಗಿ ಸಲ್ಲಿಸಿದ ಮಾಸಿಕ ಬಿಲ್ಲಿಂಗ್ ಕೇವಲ 3.5 ಕೋಟಿ ರೂ. ಆಗಿದೆ. ಹಾಗಾದರೆ 800 ಕೋಟಿ ರೂಪಾಯಿ ವೆಚ್ಚದ ಯೋಜನೆಯು ಈ ವೇಗದಲ್ಲಿ ಪೂರ್ಣಗೊಳ್ಳಲು ಎಷ್ಟು ಸಮಯ ತೆಗೆದುಕೊಳ್ಳಬಹುದು ಎಂದು ನೀವು ಊಹಿಸಬಲ್ಲಿರಾ?ಈಗ ಪಡೆಯುತ್ತಿರುವ ಸರಾಸರಿ ಮಾಸಿಕ ವೆಚ್ಚದ ಬಿಲ್ಲಿಂಗ್ ಅಂದಾಜು 6 ಕೋಟಿ ರೂ ಎಂದು ಕೆ-ರೈಡ್ ತಿಳಿಸಿದೆ. 

ಮತ್ತೊಂದು ಮೂಲದ ಪ್ರಕಾರ, ಕೆ-ರೈಡ್ ಇನ್ನೂ ಹೆಚ್ಚಿನ ಭೂಮಿಯನ್ನು ಎಲ್ ಅಂಡ್ ಟಿಗೆ ಹಸ್ತಾಂತರಿಸಬೇಕಾಗಿದೆ. ಏಕೆಂದರೆ ಕಟ್ಟಡಗಳನ್ನು ಇನ್ನೂ ಕೆಡವಲಾಗಿಲ್ಲ. ಕೆಡವಬೇಕಿದ್ದ 280 ಕಟ್ಟಡಗಳಲ್ಲಿ ಹಲವು ಕಟ್ಟಡಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಹಳಿಗಳ ಬಳಿ ಕಡಿಮೆ ಜಾಗ ಬಿಟ್ಟು ವಿನ್ಯಾಸವನ್ನು ಸ್ವಲ್ಪ ಬದಲಾಯಿಸಲಾಗಿದೆ.

ಈಗ 180 ಕಟ್ಟಡಗಳನ್ನು ಮಾತ್ರ ಸ್ವಾಧೀನಪಡಿಸಿಕೊಳ್ಳಬೇಕಾಗಿದೆ. ಬಾಣಸವಾಡಿಯಲ್ಲಿ 65, ಕನಕನಗರದಲ್ಲಿ 85 ಮತ್ತು ಲೊಟ್ಟಗಾನಹಳ್ಳಿಯಲ್ಲಿ 95 ಕಟ್ಟಡಗಳನ್ನು ನೆಲಸಮಗೊಳಿಸಬೇಕಿದೆ. ಅಗತ್ಯವಿರುವ ಖಾಸಗಿ ಭೂಮಿಯಲ್ಲಿ ಕನಕನಗರ ಬಳಿ 2.9 ಎಕರೆ ಮತ್ತು ಲೊಟ್ಟಗಾನಹಳ್ಳಿ ಬಳಿ 2 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕಿದೆ. ಅವರು ಪುನರ್ವಸತಿ ಮತ್ತು ಪುನರ್ವಸತಿ ಪ್ಯಾಕೇಜ್ ಅಡಿಯಲ್ಲಿ ಬರುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com