ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿಯಲ್ಲಿ ಪಾನಮತ್ತ ವಿದ್ಯಾರ್ಥಿಗಳ ಕಾಟ; ವ್ಯಕ್ತಿಯೊಬ್ಬರ ಕೈಗೆ ಕಚ್ಚಿ, ಹಲ್ಲೆ!

ಜೋರಾಗಿ ಮ್ಯೂಸಿಕ್ ಹಾಕದಂತೆ ಮನವಿ ಮಾಡಿದ 31 ವರ್ಷದ ವ್ಯಕ್ತಿಯೊಬ್ಬರ ಮೇಲೆ ಮೂವರು ಪಾನಮತ್ತ ವಿದ್ಯಾರ್ಥಿಗಳು ಹಲ್ಲೆ ನಡೆಸಿ, ವ್ಯಕ್ತಿಯ ಕೈ ಕಚ್ಚಿರುವ ಘಟನೆ ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಜೋರಾಗಿ ಮ್ಯೂಸಿಕ್ ಹಾಕದಂತೆ ಮನವಿ ಮಾಡಿದ 31 ವರ್ಷದ ವ್ಯಕ್ತಿಯೊಬ್ಬರ ಮೇಲೆ ಮೂವರು ಪಾನಮತ್ತ ವಿದ್ಯಾರ್ಥಿಗಳು ಹಲ್ಲೆ ನಡೆಸಿ, ವ್ಯಕ್ತಿಯ ಕೈ ಕಚ್ಚಿರುವ ಘಟನೆ ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಿದೆ.

ಗಾಯಗೊಂಡಿರುವವರನ್ನು ನೀಲಾದ್ರಿ ಇನ್ವೆಸ್ಟ್‌ಮೆಂಟ್ ಲೇಔಟ್ 6ನೇ ಮೇನ್ ನಿವಾಸಿ ಎಂ ಮಂಜುನಾಥ್ ಎಂದು ಗುರುತಿಸಲಾಗಿದೆ. ಸೋಮವಾರ ನಸುಕಿನ ಜಾಎ 1.30 ರಿಂದ 2 ಗಂಟೆಯ ನಡುವೆ ಈ ಘಟನೆ ನಡೆದಿದೆ. ಇಲೆಕ್ಟ್ರಾನಿಕ್ಸ್ ಸಿಟಿ ಬಳಿಯ ಟೊಯೊಟಾ ಶೋರೂಂನಲ್ಲಿ ಸೇವಾ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಮಂಜುನಾಥ್ ಅವರ ಬಲಗೈಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ಸಮೀಪದ ಆಸ್ಪತ್ರೆಯಲ್ಲಿ  ಇನ್ನೂ  ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಂತ್ರಸ್ತ ವ್ಯಕ್ತಿಯ ಕೈ ಕಚ್ಚಿದ ನಂತರ, ಆರೋಪಿಗಳಲ್ಲಿ ಒಬ್ಬ ಆತನ ಕೈಯನ್ನು ತಿರುಚಿದ್ದಾನೆ.  ಮಂಜುನಾಥ್ ಅವರ ಕೈಗೆ ಸುಮಾರು 10 ಹೊಲಿಗೆ ಹಾಕಲಾಗಿದೆ. ಆರೋಪಿಗಳು ತಿರುಚಿದ ನಂತರ ಆತನ  ಬಲಗೈ ಕೂಡ ಮುರಿದಿದೆ.

ಮಂಜುನಾಥ್ ಮತ್ತು ಅವರ ಮೂರು ವರ್ಷದ ಮಗು ಅನಾರೋಗ್ಯದಿಂದ ಮಲಗಿದ್ದರು. ಜೋರಾದ ಸಂಗೀತ ಮತ್ತು ಶಬ್ದದಿಂದಾಗಿ, ಮಂಜುನಾಥ್  ಮತ್ತು ಅವರ ಪತ್ನಿ ಆರೋಪಿಗಳಿಗೆ ತೊಂದರೆ ನೀಡದಂತೆ ಹಲವಾರು ಬಾರಿ ಕೇಳಿಕೊಂಡರು. ಆದರೆ ಮೂವರೂ ಅವರ ಮನವಿಗೆ ಕಿವಿಗೊಡಲಿಲ್ಲ. ಮತ್ತೆ ತಮಗೆ ತೊಂದರೆ ಕೊಡಬೇಡಿ ಎಂದು ಮಂಜುನಾಥ್ ಮನವಿ ಮಾಡಿದ್ದರಿಂದ ಆಕ್ರೋಶಗೊಂಡ ಆರೋಪಿಗಳು ಮೂರನೇ ಮಹಡಿಯ ಮನೆಯಿಂದ ಹೊರಗೆ ಬಂದು ಹಲ್ಲೆ ನಡೆಸಿದ್ದಾರೆ.

ಆತನ ಬಲಗೈಯನ್ನು ಕಚ್ಚಿ  ಕೈ ತಿರುಚಿದ ಬಳಿಕ ಆರೋಪಿ ಆತನನ್ನು ಕೆಳಕ್ಕೆ ತಳ್ಳಿದ್ದಾರೆ. ಈ ವೇಳೆ ಮಂಜುನಾಥನ ತಲೆಗೂ ಗಾಯವಾಗಿದೆ. ಆತನ ಪತ್ನಿ ದೀಪಾ ಕೂಡಲೇ ಪೊಲೀಸರಿಗೆ ಕರೆ ಮಾಡಿದ್ದು, ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಮಂಜುನಾಥ್‌ಗೆ ಕಚ್ಚಿದ ವ್ಯಕ್ತಿ ಪರಾರಿಯಾಗಿದ್ದಾನೆ.

ಮಂಜುನಾಥ್ ಸೋಮವಾರ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾನುವಾರ ರಾತ್ರಿ 9.30ರಿಂದ ಆರೋಪಿಗಳು ಕಿರುಕುಳ ನೀಡಲು ಆರಂಭಿಸಿದ್ದರು, ಅವರು ನಮ್ಮ ಮನವಿಗೆ ಗಮನ ಕೊಡಲಿಲ್ಲ. ಮಧ್ಯರಾತ್ರಿ 1.30ರ ಸುಮಾರಿಗೆ ಆರೋಪಿಗಳು ಹೊರಗೆ ಬಂದು ನನ್ನ ಗಂಡನ ಮೇಲೆ ಹಲ್ಲೆ ನಡೆಸಿದ್ದಾರೆ. ನಾನು ತಕ್ಷಣ ಪೊಲೀಸರಿಗೆ ಕರೆ ಮಾಡಿದೆ. ನನ್ನ ಪತಿ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಂಜುನಾಥ್ ಪತ್ನಿ ದೀಪಾ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ  ತಿಳಿಸಿದ್ದಾರೆ.

ಆರೋಪಿಗಳು ಕಲಬುರಗಿ ಮೂಲದವರು. ಅವರಲ್ಲಿ ಒಬ್ಬರು ಸಾಫ್ಟ್‌ವೇರ್ ಇಂಜಿನಿಯರ್. ಕೆಲ ತಿಂಗಳ ಹಿಂದೆ ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದ. ಗಂಭೀರ ಗಾಯಗಳಿಗೆ ಕಾರಣರಾದ  ಹಿನ್ನೆಲೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com