ಬೆಂಗಳೂರು ಉಪನಗರ ರೈಲು ಯೋಜನೆ: 5.5 ಕಿಮೀ ವಿಸ್ತರಣೆ!

ಸಾರ್ವಜನಿಕರ ಬೇಡಿಕೆಗೆ ಮಣಿದು 148.17 ಕಿ.ಮೀ ಉದ್ದದ ಬೆಂಗಳೂರು ಉಪನಗರ ರೈಲು ಯೋಜನೆ ಯನ್ನು ಸರಿಸುಮಾರು 5.5 ಕಿಮೀ ವಿಸ್ತರಿಸಲು ನಿರ್ಧರಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸಾರ್ವಜನಿಕರ ಬೇಡಿಕೆಗೆ ಮಣಿದು 148.17 ಕಿ.ಮೀ ಉದ್ದದ ಬೆಂಗಳೂರು ಉಪನಗರ ರೈಲು ಯೋಜನೆ ಯನ್ನು ಸರಿಸುಮಾರು 5.5 ಕಿಮೀ ವಿಸ್ತರಿಸಲು ನಿರ್ಧರಿಸಲಾಗಿದೆ. ರಾಜಾನುಕುಂಟೆ- ಹೀಳಲಿಗೆ (ಕಾರಿಡಾರ್ 4) ವೈಟ್ ಫೀಲ್ಡ್-ಕೆಂಗೇರಿ (2) ಮಾರ್ಗದಲ್ಲಿ ವಿಸ್ತರಣೆಗೆ ರಾಜ್ಯ ಸರ್ಕಾರ ಈಗಾಗಲೇ ಒಪ್ಪಿಗೆ ನೀಡಿದ್ದು, ಇದೀಗ ಕೇಂದ್ರ ಸರ್ಕಾರದ ಅನುಮೋದನೆಯನ್ನು ಕೇಳಲಾಗಿದೆ ಎಂದು ಮೂಲಗಳು ತಿಳಿಸಿವೆ. 

ರಾಜ್ಯ ಸರ್ಕಾರದ ನಗರ ಭೂ ಸಾರಿಗೆ ನಿರ್ದೇಶನಾಲಯ (DULT) ಈ ಪ್ರಸ್ತಾವನೆಯನ್ನು ಯೋಜನೆ ಅನುಷ್ಠಾನಗೊಳಿಸುತ್ತಿರುವ ಕರ್ನಾಟಕ ರೈಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಎಂಟರ್‌ಪ್ರೈಸಸ್ (K-RIDE) ಅಂಗೀಕರಿಸಿದೆ. ಈಗ ಅದನ್ನು ನೈಋತ್ಯ ರೈಲ್ವೆ ಮೂಲಕ ರೈಲ್ವೆ ಮಂಡಳಿಯ ಒಪ್ಪಿಗೆಗಾಗಿ ಕಳುಹಿಸಲಾಗುತ್ತಿದೆ. 

ಹೀಳಲಿಗೆ (ಕನಕ ಮಾರ್ಗ) ಕಾರಿಡಾರ್ ನ್ನು ಚಂದಾಪುರವರೆಗೆ ಸುಮಾರು ಒಂದು ಕಿಮೀ ವಿಸ್ತರಿಸಲು DULT ಪ್ರಸ್ತಾಪಿಸಿದೆ. ಕೆಂಗೇರಿ ಮಾರ್ಗವನ್ನು (ಪಾರಿಜಾತ ಮಾರ್ಗ)  ಚಲ್ಲಘಟ್ಟ ಕಡೆಗೆ ವಿಸ್ತರಿಸಲಾಗುವುದು ಎಂದು ಕೆ-ರೈಡ್ ಮೂಲಗಳು ತಿಳಿಸಿವೆ. ಕಾರ್ಯಸಾಧ್ಯತೆಯ ಅಧ್ಯಯನದ ನಂತರವೇ ನಿಖರವಾದ ದೂರ ತಿಳಿಯಲಿದೆ. ಸದ್ಯಕ್ಕೆ ಸರಿಸುಮಾರು 4.5 ಕಿ.ಮೀ.ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು DULT ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರೈಲ್ವೆ ಹೋರಾಟಗಾರ ಪೃಥ್ವಿನ್ ರೆಡ್ಡಿ ಮಾತನಾಡಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ನಾರಾಯಣಸ್ವಾಮಿ ಅವರು ಇತ್ತೀಚಿಗೆ ಆನೇಕಲ್, ಹೀಳಲಿಗೆ ಮತ್ತು ಹುಸ್ಕೂರು ರೈಲು ನಿಲ್ದಾಣಗಳಿಗೆ ಭೇಟಿ ನೀಡಿದಾಗ ಉಪನಗರ ಮಾರ್ಗವನ್ನು ವಿಸ್ತರಿಸುವಂತೆ ಸ್ಥಳೀಯರು ಒತ್ತಾಯಿಸಿರುವುದಾಗಿ  ತಿಳಿಸಿದರು. 46.88-ಕಿಮೀ ಉದ್ದದ ಕನಕ ಮಾರ್ಗದ ಗುತ್ತಿಗೆಯನ್ನು ಇತ್ತೀಚೆಗೆ ಲಾರ್ಸನ್ ಮತ್ತು ಟೂರ್ಬೋ ಪ್ರೈವೇಟ್ ಲಿಮಿಟೆಡ್‌ಗೆ ನೀಡಲಾಯಿತು.

“ಈ ಪ್ರಸ್ತಾವಿತ ವಿಸ್ತರಣೆಗಳು 452-ಕಿಮೀ ಉದ್ದದ 2ನೇ ಹಂತದ ಯೋಜನೆಯಲ್ಲಿ ಕಾಣಿಸಿಕೊಂಡಿವೆ. ನಾವು ಕೈಗೊಳ್ಳಲು ಬಯಸಿದ ಪೂರ್ವ-ಕಾರ್ಯಸಾಧ್ಯತೆಯ ಅಧ್ಯಯನವನ್ನು ನವೆಂಬರ್ 2023 ರಲ್ಲಿ ನೈರುತ್ಯ ರೈಲ್ವೆ ತಿರಸ್ಕರಿಸಿದೆ. ಇದೇ ಪ್ರಸ್ತಾವನೆಯನ್ನು ಡಿಸೆಂಬರ್ 28, 2023 ರಂದು ನೈರುತ್ಯ ರೈಲ್ವೆಗೆ ಸಲ್ಲಿಸಿದ್ದು, ಮನವಿ ಮರುಪರಿಶೀಲಿಸುವಂತೆ ಕೋರಿರುವುದಾಗಿ ಕೆ- ರೈಡ್ ಹಿರಿಯ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.

ನೈರುತ್ಯ ರೈಲ್ವೆ (SWR) ಮತ್ತೊಮ್ಮೆ ಪ್ರಸ್ತಾವನೆಯನ್ನು ತಿರಸ್ಕರಿಸಿದರೆ, ಅವರ ರೈಲ್ವೆ ಮಂಡಳಿಗೆ ಹೊಸ ಪ್ರಸ್ತಾವನೆಯನ್ನು ಸಲ್ಲಿಸುತ್ತೇವೆ. ಈ ಹೆಚ್ಚುವರಿ 4.5 ಕಿ.ಮೀ. ವಿಸ್ತರಣೆಗೆ ರಾಜ್ಯದಿಂದ ಒಪ್ಪಿಗೆ ಸಿಕ್ಕಿದ್ದು, ಕೇಂದ್ರದಿಂದ ಅನುಮೋದನೆ ಸಿಗಬೇಕಾಗಿದೆ ಎಂದು ಅವರು ಮಾಹಿತಿ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com