ಕೆಐಎ ಬೆಳವಣಿಗೆ ಶೇ.23.3 ಕ್ಕೆ ಏರಿಕೆ: ಮಂಗಳೂರು, ಹುಬ್ಬಳ್ಳಿ ವಿಮಾನ ನಿಲ್ದಾಣಗಳ ಬೆಳವಣಿಗೆಯೂ ಏರುಗತಿಯಲ್ಲಿ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಈ ಆರ್ಥಿಕ ವರ್ಷದ ಮೊದಲ ಮೂರು ತ್ರೈಮಾಸಿಕಗಳಲ್ಲಿ ಶೇ.23.3 ರಷ್ಟು ಬೆಳವಣಿಗೆ ದಾಖಲಿಸಿದೆ. 
ಕೆಐಎ
ಕೆಐಎ

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಈ ಆರ್ಥಿಕ ವರ್ಷದ ಮೊದಲ ಮೂರು ತ್ರೈಮಾಸಿಕಗಳಲ್ಲಿ ಶೇ.23.3 ರಷ್ಟು ಬೆಳವಣಿಗೆ ದಾಖಲಿಸಿದೆ. 

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಬೆಳವಣಿಗೆ ಈ ವರ್ಷ ಶೇ.23.3 ರಷ್ಟು  ಏರಿಕೆಯಾಗಿದೆ ಎಂದು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ಬಿಡುಗಡೆ ಮಾಡಿರುವ ವರದಿ ಮೂಲಕ ತಿಳಿದುಬಂದಿದೆ. ಮಂಗಳೂರು ಮತ್ತು ಹುಬ್ಬಳ್ಳಿ ವಿಮಾನ ನಿಲ್ದಾಣಗಳು ಸಕಾರಾತ್ಮಕ ಬೆಳವಣಿಗೆಯನ್ನು ದಾಖಲಿಸಿದರೆ, ಕಲಬುರಗಿ ಮತ್ತು ಮೈಸೂರು ವಿಮಾನ ನಿಲ್ದಾಣಗಳು ಇದೇ ಅವಧಿಗೆ ಹೋಲಿಸಿದರೆ ಶೇಕಡಾ 31 ಕ್ಕಿಂತ ಹೆಚ್ಚಿನ ಋಣಾತ್ಮಕ ಬೆಳವಣಿಗೆಯನ್ನು ತೋರಿಸಿವೆ.

ಪ್ರಸಕ್ತ ಹಣಕಾಸು ವರ್ಷದ ಮೂರು ತ್ರೈಮಾಸಿಕಗಳಲ್ಲಿ ಬೆಂಗಳೂರು 2,80,08,253 ಪ್ರಯಾಣಿಕರನ್ನು ಹೊಂದಿದ್ದು, ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿದ್ದ ಸಂಖ್ಯೆ 2,27,17,581 ಕ್ಕೆ ಹೋಲಿಸಿದರೆ 23.3% ಬೆಳವಣಿಗೆಯನ್ನು ಹೊಂದಿದೆ. 

ಡಿಸೆಂಬರ್ 2023 ರಲ್ಲಿ 34,01,107 ಪ್ರಯಾಣಿಕರೊಂದಿಗೆ ಡಿಸೆಂಬರ್ 2022 ಕ್ಕಿಂತ 8.5% ಬೆಳವಣಿಗೆಯನ್ನು ದಾಖಲಿಸಿದೆ. ಒಟ್ಟಾರೆ ಪ್ರಯಾಣಿಕರಲ್ಲಿ, ಕಳೆದ ವರ್ಷ 9 ತಿಂಗಳಲ್ಲಿ KIA ಯಲ್ಲಿನ ಅಂತರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆ 34,66,834 ದಾಟುವ ಮೂಲಕ ಹಿಂದಿನ ಹಣಕಾಸು ವರ್ಷಕ್ಕಿಂತ 25.9% ಬೆಳವಣಿಗೆಯನ್ನು ದಾಖಲಿಸಿದೆ. KIA 2023-2024ರಲ್ಲಿ 2.45 ಕೋಟಿ ದೇಶೀಯ ಪ್ರಯಾಣಿಕರ ದಟ್ಟಣೆಯನ್ನು ಹೊಂದಿದ್ದು, 2022-2023ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ 1.99 ಕೋಟಿಗೆ ಏರಿಕೆಯಾಗಿದೆ.

ಎಲ್ಲಾ ವಿಭಾಗಗಳಲ್ಲಿ ಬೆಂಗಳೂರು ರಾಷ್ಟ್ರೀಯ ಸರಾಸರಿಯನ್ನು ಹಿಂದಿಕ್ಕಿದೆ. ಏಪ್ರಿಲ್ ನಿಂದ ಡಿಸೆಂಬರ್ 2022-2023 ಗೆ ಹೋಲಿಸಿದರೆ. ಅಂತರರಾಷ್ಟ್ರೀಯ ಪ್ರಯಾಣಿಕರು, ದೇಶೀಯ ಪ್ರಯಾಣಿಕರು ಮತ್ತು ಒಟ್ಟು ಪ್ರಯಾಣಿಕರ ದಟ್ಟಣೆಯು ಏಪ್ರಿಲ್ ನಿಂದ ಡಿಸೆಂಬರ್ 2023-2024 ರ ಅವಧಿಯಲ್ಲಿ ಕ್ರಮವಾಗಿ 24.3%, 16.6% ಮತ್ತು 18% ರಷ್ಟು ಹೆಚ್ಚಾಗಿರುವುದನ್ನು ಅಂಕಿ-ಅಂಶಗಳು ಬಹಿರಂಗಪಡಿಸಿವೆ.

ಒಂಬತ್ತು ತಿಂಗಳ ಅವಧಿಯಲ್ಲಿ 11,07,056 ಪ್ರಯಾಣಿಕರನ್ನು ಹೊಂದಿರುವ ದೇಶೀಯ ಪ್ರಯಾಣಿಕರಲ್ಲಿ 15.2% ನಷ್ಟು ಆರೋಗ್ಯಕರ ಏರಿಕೆಯನ್ನು ಕಂಡಿರುವ ರಾಜ್ಯದ ಏಕೈಕ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಂಗಳೂರು ವಿಮಾನ ನಿಲ್ದಾಣವಾಗಿದೆ. ಆದರೆ ಅದರ ಅಂತರರಾಷ್ಟ್ರೀಯ ಪ್ರಯಾಣಿಕರ ಪ್ರಮಾಣ 3,92,778 ಪ್ರಯಾಣಿಕರೊಂದಿಗೆ .5% ರಷ್ಟು ಕಡಿಮೆಯಾಗಿದೆ.  ಈ ಹಣಕಾಸು ವರ್ಷದಲ್ಲಿ 2,76,646 ಪ್ರಯಾಣಿಕರೊಂದಿಗೆ 21% ಹೆಚ್ಚಳವನ್ನು ಹೊಂದಿರುವ ಹುಬ್ಬಳ್ಳಿ ವಿಮಾನ ನಿಲ್ದಾಣ ಹಿಂದಿನ ವರ್ಷ ಇದೇ ಅವಧಿಯಲ್ಲಿ 2,28,624  ಪ್ರಯಾಣಿಕರನ್ನು ಹೊಂದಿತ್ತು.

ಪ್ರಸಕ್ತ ವರ್ಷ ಕರ್ನಾಟಕ ಚುನಾವಣೆಯ ಪ್ರಚಾರಕ್ಕಾಗಿ ಹೆಚ್ಚಿನ ವಿಐಪಿಗಳು ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣ ಬಳಸಿದ್ದರಿಂದ ಇಲ್ಲಿನ ಪ್ರಯಾಣಿಕರ ಸಂಖ್ಯೆ ಹಿಂದಿನ ಹಣಕಾಸು ವರ್ಷಕ್ಕಿಂತ (12,783) 70.9% ಹೆಚ್ಚಳವನ್ನು ಕಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com