
ಬೆಳಗಾವಿ: ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕೆ ಕೇಂದ್ರದ ಅನುಮೋದನೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾಡಿದ ಮನವಿ ಬಿಜೆಪಿ ಆಡಳಿತವಿರುವ ಗೋವಾದ ವಿರೋಧ ಪಕ್ಷಗಳು ಮತ್ತು ಪರಿಸರವಾದಿಗಳನ್ನು ಕೆರಳಿಸಿದೆ.
ಈ ಯೋಜನೆಯು ವನ್ಯಜೀವಿ ಮತ್ತು ಪರಿಸರಕ್ಕೆ ಅಪಾಯವನ್ನುಂಟುಮಾಡುತ್ತದೆ ಎಂದು ಪ್ರತಿಪಾದಿಸುತ್ತಿರುವ ಗೋವಾದ ವಿರೋಧ ಪಕ್ಷಗಳು, ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ಇತ್ಯರ್ಥವಾಗುವವರೆಗೆ ಕರ್ನಾಟಕವು ಯೋಜನೆಯನ್ನು ಮುಂದುವರಿಸಲು ಬಿಡದಂತೆ ಪ್ರಧಾನಿ ಮೇಲೆ ಒತ್ತಡ ಹೇರುವಂತೆ ತಮ್ಮ ಸರ್ಕಾರಕ್ಕೆ ಮನವಿ ಮಾಡಿವೆ.
ಪ್ರಧಾನಿ ಭೇಟಿ ನಂತರ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಳಸಾ- ಬಂಡೂರಿ ಯೋಜನೆ ಅನುಷ್ಠಾನಕ್ಕಾಗಿ ರಾಜ್ಯಕ್ಕೆ ಅಗತ್ಯವಿರುವ ಅನುಮತಿ ನೀಡಲು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ನಿರ್ದೇಶನ ನೀಡಬೇಕು ಎಂದು ಪ್ರಧಾನಿಯನ್ನು ಒತ್ತಾಯಿಸಿದ್ದರು. ಈ ಯೋಜನೆ ಕಿತ್ತೂರು-ಕರ್ನಾಟಕ ಪ್ರದೇಶದ ಜನರ ಕನಸಾಗಿದ್ದು, ಈ ಪ್ರದೇಶದ ನೀರಿನ ಬಿಕ್ಕಟ್ಟನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದರು.
ಗೋವಾ ಜನರ ಜೀವನಾಡಿಯಾಗಿರುವ ಮಹದಾಯಿ ರಕ್ಷಣೆಗೆ ಪಣ ತೊಟ್ಟಿರುವ ಬಿಜೆಪಿ ಮತ್ತು ಗೋವಾ ಸರ್ಕಾರ ಕರ್ನಾಟಕ ಯೋಜನೆಗೆ ಮುಂದಾಗದಂತೆ ಕೇಂದ್ರದ ಮೇಲೆ ಒತ್ತಡ ಹೇರುವ ಮೂಲಕ ಈ ಪ್ರದೇಶಕ್ಕೆ ತಮ್ಮ ಬದ್ಧತೆಯನ್ನು ಪ್ರದರ್ಶಿಸಬೇಕು ಎಂದು ಗೋವಾದ ವಿರೋಧ ಪಕ್ಷಗಳು ಒತ್ತಾಯಿಸಿವೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ವಿಪಕ್ಷ ನಾಯಕ ಯೂರಿ ಅಲೆಮಾವೋ, ಗೋವಾ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಕಾಂಗ್ರೆಸ್ ಸರ್ಕಾರ ಕಳಸಾ-ಬಂಡೂರಿ ಯೋಜನೆಗೆ ಅನುಮತಿ ನೀಡುವಂತೆ ಒತ್ತಾಯಿಸಿ ಮೋದಿಯನ್ನು ಭೇಟಿ ಮಾಡುತ್ತದೆ. ಕಳಸಾ-ಬಂಡೂರಿ ಯೋಜನೆಗೆ ಡಿಪಿಆರ್‌ನ ಅನುಮೋದನೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ ಪ್ರಧಾನಿ ಭೇಟಿಗೆ ಸರ್ವಪಕ್ಷಗಳ ನಿಯೋಗ ಕೊಂಡೊಯ್ಯಲು ಗೋವಾ ಸಿಎಂ ಪ್ರಮೋದ್ ಸಾವಂತ್‌ಗೆ ಅಪಾಯಿಂಟ್‌ಮೆಂಟ್ ಸಿಗುತ್ತಿಲ್ಲ ಎಂಬುದು ಅಚ್ಚರಿಯ ಸಂಗತಿ. ಗೋವಾ ಸರ್ಕಾರ ಜನರ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ಶೋಚನೀಯವಾಗಿ ವಿಫಲವಾಗಿದೆ ಎಂದು ಅವರು ಹೇಳಿದ್ದಾರೆ.
ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ಇತ್ಯರ್ಥವಾಗುವ ಮುನ್ನವೇ ಯೋಜನೆಗೆ ಅನುಮೋದನೆ ಕೋರಿ ಸಿದ್ದರಾಮಯ್ಯ ಮಾಡಿರುವ ಮನವಿಯನ್ನು ‘ಮಹದಾಯಿ ಉಳಿಸಿ ಗೋವಾ ಉಳಿಸಿ’ ವೇದಿಕೆಯ ಪರಿಸರವಾದಿಗಳು ಖಂಡಿಸಿದ್ದಾರೆ. ಮಹದಾಯಿ ನದಿಯನ್ನು ರಕ್ಷಿಸಲು ಗೋವಾ ಸರ್ಕಾರಕ್ಕೆ ಇದು ಸಕಾಲ. ಈ ಯೋಜನೆಗೆ ಒಪ್ಪಿಗೆ ನೀಡದಂತೆ ಗೋವಾ ಸಿಎಂ ಕೂಡಲೇ ಪ್ರಧಾನಿಯನ್ನು ಭೇಟಿ ಮಾಡುವಂತೆ ಮನವಿ ಮಾಡಿದ್ದಾರೆ.
ಆಮ್ ಆದ್ಮಿ ಪಕ್ಷದ ಗೋವಾ ಘಟಕ ಗೋವಾ ಸರ್ಕಾರ ಗೋವಾದವರ ಹಿತಾಸಕ್ತಿ ಕಾಪಾಡುವಲ್ಲಿ ವಿಫಲವಾಗಿದೆ ಎಂದು ಎಎಪಿ ಘಟಕ ಆರೋಪಿಸಿದೆ. ನ್ಯಾಯಾಲಯದಲ್ಲಿ ಮಹದಾಯಿ ಉಳಿಸಲು ಸರ್ಕಾರ ಕಾನೂನು ಹೋರಾಟವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಹೇಳಿದೆ.
ಆಗಸ್ಟ್ 14, 2018 ರಂದು ಮಹದಾಯಿ ಜಲ ವಿವಾದ ನ್ಯಾಯಮಂಡಳಿ (MWDT) ತನ್ನ ಅಂತಿಮ ತೀರ್ಪಿನಲ್ಲಿ ಮಹದಾಯಿ ಯೋಜನೆಯಡಿ ಕರ್ನಾಟಕಕ್ಕೆ 13.42 tmc ಅಡಿ ನೀರನ್ನು ನೀಡಿತ್ತು. ಮಹಾದಾಯಿ ನದಿಯಿಂದ ಕುಡಿಯುವ ಉದ್ದೇಶಕ್ಕಾಗಿ 5.5 ಟಿಎಂಸಿ ಅಡಿ ನೀರು ಮತ್ತು ಜಲವಿದ್ಯುತ್ ಉತ್ಪಾದನೆಗೆ ಶೇ 8.02 ರಷ್ಟು ನೀರನ್ನು ಹಂಚಿಕೊಳ್ಳಲು ನ್ಯಾಯಮಂಡಳಿ ಕರ್ನಾಟಕಕ್ಕೆ ಅನುಮತಿ ನೀಡಿದೆ. ಆದಾಗ್ಯೂ, ಕುಡಿಯುವ ನೀರಿನ ಉದ್ದೇಶಗಳಿಗಾಗಿ 7.56 ಟಿಎಂಸಿ ಅಡಿ ಸೇರಿದಂತೆ ಮಹದಾಯಿ ಯೋಜನೆಯಡಿ 36.55 ಟಿಎಂಸಿ ಅಡಿ ನೀರು ಹಂಚಿಕೆಗಾಗಿ ಕರ್ನಾಟಕವು ನೆರೆಯ ಗೋವಾದೊಂದಿಗೆ ಸುದೀರ್ಘ ಹೋರಾಟದಲ್ಲಿ ತೊಡಗಿಸಿಕೊಂಡಿದೆ.
ಮೂಲಗಳ ಪ್ರಕಾರ ಕರ್ನಾಟಕಕ್ಕೆ ಕುಡಿಯಲು 5.5 ಟಿಎಂಸಿ ಅಡಿ ನೀರು ಹಂಚಿಕೆ ಮಾಡಲಾಗಿದ್ದು, 3.80 ಟಿಎಂಸಿ ಅಡಿ ನೀರನ್ನು ಕಳಸಾ ನಾಲಾ (1.18 ಟಿಎಂಸಿ ಅಡಿ) ಮತ್ತು ಬಂಡೂರಿ ನಾಲಾ (2.72 ಟಿಎಂಸಿ) ಮೂಲಕ ಮಲಪ್ರಭಾ ಜಲಾನಯನ ಪ್ರದೇಶಕ್ಕೆ ತಿರುಗಿಸಲಾಗುವುದು ಮತ್ತು 1.50 ಟಿಎಂಸಿ ಅಡಿ ನೀರನ್ನು ಖಾನಾಪುರ ಪ್ರದೇಶದಲ್ಲಿ ಬಳಕೆಗೆ ನಿಗದಿಪಡಿಸಲಾಗಿದೆ.
Advertisement