
ಹುಬ್ಬಳ್ಳಿ: ಕಾಲೇಜು ಆವರಣದಲ್ಲಿ ಸ್ನೇಹಿತನಿಂದಲೇ ಬರ್ಬರವಾಗಿ ಹತ್ಯೆಗೀಡಾದ ನೇಹಾ ಹಿರೇಮಠ ಅವರ ತಂದೆ ನಿರಂಜನ ಹಿರೇಮಠ ಅವರು ಹುಬ್ಬಳ್ಳಿ 1ನೇ ಹೆಚ್ಚುವರಿ ಮತ್ತು III ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸಿಐಡಿ ಸಲ್ಲಿಸಿರುವ ದೋಷಾರೋಪ ಪಟ್ಟಿಯ ಪ್ರತಿ ನೀಡುವಂತೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಹತ್ಯೆಯಾದ ತಿಂಗಳ ನಂತರ ರಾಜ್ಯ ಸರ್ಕಾರ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ಸಿಐಡಿ ತನಿಖೆ ಪೂರ್ಣಗೊಳಿಸಿದ್ದು, ನ್ಯಾಯಾಲಯಕ್ಕೆ ಮಂಗಳವಾರ ದೋಷಾರೋಪ ಪಟ್ಟಿ ಸಲ್ಲಿಸಿದೆ.
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ನೇಹಾ ಹಿರೇಮಠ್ ಅವರ ತಂದೆ ನಿರಂಜನ್ ಹಿರೇಮಠ್ ಅವರು, ಆರೋಪ ಪಟ್ಟಿಯಲ್ಲಿ ಏನು ಇದೇ ಎಂದು ಮೊದಲು ತಿಳಿಯಬೇಕು. ಇದೊಂದು ಮಾದರಿ ಪ್ರಕರಣ ಆಗಬೇಕು. ಸಿಐಡಿ ಅಧಿಕಾರಿಗಳಿಂದ ಇಂದು ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಕೆ ಆಗಿದೆ ಎಂಬ ಮಾಹಿತಿ ಸಿಕ್ಕಿದೆ. 483 ಪುಟಗಳ ಚಾರ್ಜ್ ಶೀಟ್ ನೀಡಿದ ಸಿಐಡಿ ಅಧಿಕಾರಿಗಳು ಸಲ್ಲಿಕೆ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಗಂಭೀರವಾಗಿ ತನಿಖೆ ಆಗಿದ್ದು, ಕೊಲೆಯಾದ ಬಳಿಕ ಸಿಎಂ, ಡಿಸಿ, ಗೃಹ ಸಚಿವರು ಸೇರಿ ಎಲ್ಲರೂ ಸಾಂತ್ವನ ಹೇಳಿದರು ಎಂದು ಹೇಳಿದರು.
ಕೊಲೆಯಾಗಿ 5 ದಿನಕ್ಕೆ ಸಿಐಡಿಗೆ ಕೇಸ್ ನೀಡಿದರು. 90 ದಿನಗಳಲ್ಲಿ ಚಾರ್ಜ್ ಶಿಟ್ ಸಲ್ಲಿಸುವ ನಿಯಮ ಇದೆ. ಅದೇ ರೀತಿ ಸಿಐಡಿ ಅಧಿಕಾರಿಗಳು ಅಂತಿಮ ವರದಿ ನೀಡಿದ್ದಾರೆ. ನ್ಯಾಯಾಲಯಕ್ಕೆ 483 ಪುಟಗಳ ಚಾರ್ಜ್ ಶೀಟ್ ನೀಡಿದ್ದಾರೆ. ನಾನು ಹೇಳಿದ ಮಾಹಿತಿ, ನಾನು ಇಟ್ಟ ಬೇಡಿಕೆ ವರದಿ ಬಂದ ನಂತರ ತಿಳಿಸುತ್ತೇನೆಯ ಮುಖ್ಯಮಂತ್ರಿಗಳು ನುಡಿದಂತೆ ನ್ಯಾಯ ಕೊಡಿಸುವ ಭರವಸೆ ನಮಗೆ ಕೊಂಚ ಬಂದಿದೆ ಎಂದು ತಿಳಿಸಿದರು.
ಫಾಸ್ಟ್ರ್ಯಾಕ್ ಕೋರ್ಟ್ ಅನೌನ್ಸ್ ಆಗಿದೆ. ಎಲ್ಲಿ ಕೊಡುತ್ತಾರೋ ನೋಡ್ಬೇಕು. ಈ ಪ್ರಕರಣದಲ್ಲಿ ಬಹಳಷ್ಟು ಜನರ ಕೈವಾಡ ಇದೆ ಎಂದು ನಾನು ಹೇಳಿದ್ದೆ. ಈ ಬಗ್ಗೆ ಸಿಐಡಿ ಅಧಿಕಾರಿಗಳು ಏನು ಮಾಡಿದ್ದಾರೋ ಗೊತ್ತಿಲ್ಲ. ಆದರೆ, ಈ ಕಾರ್ಯಕ್ಕೆ ಸಿಐಡಿ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿ ನನ್ನ ಬೆನ್ನಿಗೆ ನಿಂತ ಪ್ರತಿಯೊಬ್ಬರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು
Advertisement