
ಬೆಂಗಳೂರು: ನಗರದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿದ್ದು, ಸಾರ್ವಜನಿಕರು, ಶುದ್ಧ ನೀರು ಇರುವುದನ್ನು ಖಾತ್ರಿಪಡಿಸಿಕೊಳ್ಳಲು ತಮ್ಮ ಬಳಿ ಇರುವ ಆರ್ ಒ (reverse osmosis) ಘಟಕಗಳ ಸರ್ವೀಸ್ ಮಾಡಿಸುತ್ತಿದ್ದಾರೆ. ಈಗ ಸೈಬರ್ ವಂಚಕರು ಇದನ್ನೆ ಬಂಡವಾಳವನ್ನಾಗಿ ಮಾಡಿಕೊಂಡು ಜನತೆಗೆ ವಂಚನೆ ಮಾಡಲು ಮುಂದಾಗುತ್ತಿದ್ದಾರೆ.
ಆರ್ ಒ ಸರ್ವೀಸ್ ಒದಗಿಸುವ ಸೋಗಿನಲ್ಲಿ ವಂಚಕರು ಹಣ ಲಪಟಾಯಿಸುತ್ತಿದ್ದು, ಹಲವಾರು ದೂರುಗಳು ಬಂದ ಬಳಿಕ ಪೊಲೀಸ್ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ.
RO ಯುನಿಟ್ ಗಳ ಸರ್ವೀಸಿಂಗ್ ಹೆಸರಿನಲ್ಲಿ ನಡೆಯುತ್ತಿರುವ ವಂಚನೆಯನ್ನು ಆನ್ ಲೈನ್ ವಂಚನೆಯ ಹೊಸ ವಿಧ ಎಂದು ಹೇಳಿರುವ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರನ್ನು ಈ ಬಗ್ಗೆ ಎಚ್ಚರಿಸಿದ್ದು, ಮುಂಗಡವಾಗಿ ಯಾವುದೇ ಆನ್ ಲೈನ್ ಪಾವತಿಗಳನ್ನು ಮಾಡದಂತೆ ಸಲಹೆ ನೀಡಿದ್ದಾರೆ.
ನಗರದ ವಿವಿಧ ಭಾಗಗಳಿಂದ ಇಂತಹ ಸುಮಾರು 100 ದೂರುಗಳು ಬಂದಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು TNIE ಗೆ ತಿಳಿಸಿದ್ದಾರೆ.
ಮತ್ತೊಬ್ಬ ಹಿರಿಯ ಪೊಲೀಸ್ ಅಧಿಕಾರಿ, ಕರೆ ಮಾಡಿದವರು ಸಾಮಾನ್ಯವಾಗಿ “ನೀರು ಶುದ್ಧೀಕರಣಕ್ಕೆ ಸರ್ವಿಸಿಂಗ್ ಅಥವಾ ಭಾಗ ಬದಲಿ ಅಗತ್ಯವಿದೆ ಎಂದು ಹೇಳಿಕೊಳ್ಳುತ್ತಾರೆ, ಇದರಿಂದ ತುರ್ತಾಗಿ ಸರ್ವೀಸ್ ಮಾಡಿಸಬೇಕೆಂಬ ತಪ್ಪು ಪ್ರಜ್ಞೆ ಸೃಷ್ಟಿಯಾಗುತ್ತದೆ. ಹೆಚ್ಚಿನ ಬ್ರಾಂಡ್ ಕಂಪನಿಗಳು ಪ್ರತಿ ಆರು ತಿಂಗಳಿಗೊಮ್ಮೆ ಸರ್ವಿಸಿಂಗ್ ಬಗ್ಗೆ ನಿಯಮಿತವಾಗಿ ಕರೆ ಮಾಡುವುದರಿಂದ, ಜನರು ಸುಲಭವಾಗಿ ವಂಚನೆಗೆ ಬಲಿಯಾಗುತ್ತಿದ್ದಾರೆ, ಅವುಗಳನ್ನು ನಿಜವಾದ ಕರೆಗಳು ಎಂದು ತಪ್ಪಾಗಿ ಗ್ರಹಿಸುತ್ತಾರೆ" ಎಂದು ಹೇಳಿದ್ದಾರೆ.
ಕೆಲವು ಸಂದರ್ಭಗಳಲ್ಲಿ, ವಂಚಕರು ಈಗಾಗಲೇ ಸೇವೆಯ ಬಗ್ಗೆ ವಿಚಾರಿಸಿದ ವ್ಯಕ್ತಿಗಳ ಬಗ್ಗೆ ಮಾಹಿತಿಯನ್ನು ಹೊಂದಿರುತ್ತಾರೆ, ಅವರಿಗೆ ಮರಳಿ ಕರೆ ಮಾಡುತ್ತಾರೆ ಮತ್ತು ಹಗರಣವು ನಿಜವೆಂದು ತೋರುವಂತೆ ಮಾಡುತ್ತಾರೆ ಎಂದು ಅಧಿಕಾರಿ ಹೇಳಿದ್ದಾರೆ.
Advertisement