ಲೋಕ ಅದಾಲತ್‌: ಸಂಧಾನ ಮೂಲಕ 40 ಲಕ್ಷ ಪ್ರಕರಣಗಳು ಇತ್ಯರ್ಥ, 2,640 ಕೋಟಿ ರೂ ಪರಿಹಾರ ಪಾವತಿ

ಕೆಎಸ್‌ಎಲ್‌ಎಸ್‌ಎ ಕೋರಿಕೆಯ ಮೇರೆಗೆ ರಾಜ್ಯ ಸರ್ಕಾರವು ಆಸ್ತಿ ತೆರಿಗೆ ಪಾವತಿಗೆ ವಿನಾಯಿತಿ ನೀಡಿ ಕಾಲಾವಧಿ ವಿಸ್ತರಣೆ ಮಾಡಿದ್ದರಿಂದ 9,00,935 ಪ್ರಕರಣಗಳು ಇತ್ಯರ್ಥವಾಗಿದ್ದು, ಸರ್ಕಾರದ ಬೊಕ್ಕಸಕ್ಕೆ 694 ಕೋಟಿ ಹರಿದು ಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಪ್ರಸಕ್ತ ಸಾಲಿನ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ರಾಜ್ಯದಲ್ಲಿ 40,03,411 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ಒಟ್ಟಾರೆ 2,640 ಕೋಟಿ ಮೊತ್ತವನ್ನು ಪರಿಹಾರದ ರೂಪದಲ್ಲಿ ಕೊಡಿಸುವ ಮೂಲಕ ಹೊಸ ದಾಖಲೆ ಸೃಷ್ಟಿಯಾಗಿದೆ.

ಈ ಕುರಿತಂತೆ ಹೈಕೋರ್ಟ್​ನ ಕಾನೂನು ಸೇವಾ ಪ್ರಾಧಿಕಾರದ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾಗಿರುವ ನ್ಯಾಯಮೂರ್ತಿ ವಿ.ಕಾಮೇಶ್ವರ್​ ರಾವ್ ​ಅವರು, ಹೈಕೋರ್ಟ್‌ ಮತ್ತು ವಿಚಾರಣಾಧೀನ ನ್ಯಾಯಾಲಯದಲ್ಲಿನ ಬಾಕಿ ಇರುವ 2,64,675 ಪ್ರಕರಣ ಮತ್ತು ವಿಚಾರಣಾಧೀನ ನ್ಯಾಯಾಲಯಗಳಲ್ಲಿನ 37,38,766 ವ್ಯಾಜ್ಯಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಹೈಕೋರ್ಟ್‌ನ ಬೆಂಗಳೂರು, ಧಾರವಾಡ ಮತ್ತು ಕಲಬುರ್ಗಿ ಪೀಠಗಳಲ್ಲಿ ಕ್ರಮವಾಗಿ ಬಾಕಿ ಇದ್ದ 701, 434 ಮತ್ತು 520 ಪ್ರಕರಣಗಳು ಸೇರಿ 1,655 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

1,033 ಪೀಠಗಳ ರಚನೆ: ಹೈಕೋರ್ಟ್‌ನ ಬೆಂಗಳೂರು, ಧಾರವಾಡ ಮತ್ತು ಕಲಬುರ್ಗಿ ಪೀಠಗಳಲ್ಲಿ ಕ್ರಮವಾಗಿ 9, 5 ಮತ್ತು 3 ಪೀಠಗಳನ್ನು ಒಳಗೊಂಡು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ 1,016 ಪೀಠ ಸೇರಿ ಒಟ್ಟಾರೆ 1,033 ಪೀಠಗಳನ್ನು ರಚಿಸಲಾಗಿತ್ತು.

ಆಸ್ತಿ ತೆರಿಗೆ 694 ಕೋಟಿ ಸಂಗ್ರಹ

ಕೆಎಸ್‌ಎಲ್‌ಎಸ್‌ಎ ಕೋರಿಕೆಯ ಮೇರೆಗೆ ರಾಜ್ಯ ಸರ್ಕಾರವು ಆಸ್ತಿ ತೆರಿಗೆ ಪಾವತಿಗೆ ವಿನಾಯಿತಿ ನೀಡಿ ಕಾಲಾವಧಿ ವಿಸ್ತರಣೆ ಮಾಡಿದ್ದರಿಂದ 9,00,935 ಪ್ರಕರಣಗಳು ಇತ್ಯರ್ಥವಾಗಿದ್ದು, ಸರ್ಕಾರದ ಬೊಕ್ಕಸಕ್ಕೆ 694 ಕೋಟಿ ಹರಿದು ಬಂದಿದೆ.

ಅದಾಲತ್​ನ ಇತರೆ ಪ್ರಮುಖ ಅಂಶಗಳು...

  • ಪ್ರಸಕ್ತ ಲೋಕ ಅದಾಲತ್‌ನಲ್ಲಿ 1,550 ವೈವಾಹಿಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ಸುಮಾರು 259 ದಂಪತಿ ಮತ್ತೆ ಒಂದಾಗುವ ಮೂಲಕ ವ್ಯಾಜ್ಯಕ್ಕೆ ತೆರೆ ಎಳೆದಿದ್ದಾರೆ.

  • 3,356 ಆಸ್ತಿ ವಿಭಾಗ ದಾವೆಗಳು; 5,220 ಮೋಟಾರು ವಾಹನ ಅಪರಾಧ ಪರಿಹಾರ ಪ್ರಕರಣ ಬಗೆಹರಿಸಲಾಗಿದ್ದು, 260 ಕೋಟಿ ಪರಿಹಾರ ಕೊಡಿಸಲಾಗಿದೆ. ಇನ್ನು 11,155 ಚೆಕ್‌ ಬೌನ್ಸ್‌ ಪ್ರಕರಣಗಳಿಗೆ ಪರಿಹಾರ ಸೂಚಿಸಲಾಗಿದೆ.

  • 261 ಭೂಸ್ವಾಧೀನ ಆದೇಶಗಳ ಜಾರಿ ಪ್ರಕರಣಗಳಲ್ಲಿ 101 ಕೋಟಿ ಪರಿಹಾರ ಕೊಡಿಸುವುದರೊಂದಿಗೆ ಸುಖಾಂತ್ಯ ಕಂಡಿವೆ. 61 ಕೋಟಿ ಪರಿಹಾರ ಪಾವತಿ ಮಾಡುವಂತೆ ಮಾಡುವುದರೊಂದಿಗೆ 897 ಮೋಟಾರು ವಾಹನಗಳಿಗೆ ಸಂಬಂಧಿಸಿದ ಪರಿಹಾರ ಆದೇಶ ಜಾರಿ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಇತರೆ 3,769 ಆದೇಶ ಜಾರಿ ಪ್ರಕರಣಗಳು ಇತ್ಯರ್ಥಗೊಂಡಿದ್ದು, 118 ಕೋಟಿ ಪರಿಹಾರ ಕೊಡಿಸಲಾಗಿದೆ.

  • ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರದಲ್ಲಿನ 15 ಪ್ರಕರಣಗಳು ಇತ್ಯರ್ಥಪಡಿಸಲಾಗಿದ್ದು, 1.22 ಕೋಟಿಯನ್ನು ಇತ್ಯರ್ಥದ ಭಾಗವಾಗಿ ಕೊಡಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com