
ಬೆಂಗಳೂರು: ರಾಜಧಾನಿ ಬೆಂಗಳೂರು ನಗರದ ಪ್ರಪ್ರಥಮ ಡಬಲ್ ಡೆಕ್ಕರ್ ಫ್ಲೈ ಓವರ್ (Double Decker Flyover) ಪ್ರಾಯೋಗಿಕ ಚಾಲನೆ ಇಂದು ಬುಧವಾರ ಅಪರಾಹ್ನ ನಡೆಯಲಿದೆ.
ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆಗೆ ಡಬಲ್ ಡೆಕ್ಕರ್ ಅಸ್ತ್ರ ಬಳಸಿದ್ದು ದಕ್ಷಿಣ ಭಾರತದ ಮೊದಲ ಡಬಲ್ ಡೆಕ್ಕರ್ ಫ್ಲೈ ಓವರ್ ಪ್ರಾಯೋಗಿಕ ಸಂಚಾರಕ್ಕೆ ಇಂದು ಡಿಸಿಎಂ ಡಿ ಕೆ ಶಿವಕುಮಾರ್ ಹಸಿರು ನಿಶಾನೆ ತೋರಿಸಲಿದ್ದಾರೆ.
ಈ ಹಿಂದೆ ದೇಶದಲ್ಲಿ ಮುಂಬೈ ಜೈಪುರದಲ್ಲಿ ಮಾತ್ರ ಡಬಲ್ ಡೆಕ್ಕರ್ ವ್ಯವಸ್ಥೆ ಇತ್ತು. ಬೆಂಗಳೂರಿನ ಬಹು ನಿರೀಕ್ಷಿತ ಡಬಲ್ ಡೆಕ್ಕರ್ ಫ್ಲೈ ಓವರ್ 3.36 ಕಿಲೋ ಮೀಟರ್ ಉದ್ದವಿದೆ. ಇದು ರಾಗಿಗುಡ್ಡ- ಸಿಲ್ಕ್ ಬೋರ್ಡ್ ಜಂಕ್ಷನ್ ವರೆಗೆ ನಿರ್ಮಾಣವಾಗಿದೆ. 449 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಿರುವ ಡಬಲ್ ಡೆಕ್ಕರ್ ಫ್ಲೈ ಓವರ್, ರಾಗಿಗುಡ್ಡ -ಸಿಲ್ಕ್ ಬೋರ್ಡ್ ಜಂಕ್ಷನ್ ಸಂಚಾರ ದಟ್ಟಣೆಯನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ. ಸಿಗ್ನಲ್-ಮುಕ್ತ ಕಾರಿಡಾರ್ ಆಗಿ ಪರಿವರ್ತಿಸುವಲ್ಲಿ ಇದು ಮಹತ್ವದ ಪಾತ್ರವಹಿಸಲಿದೆ. ರಾಗಿಗುಡ್ಡದಿಂದ ಇನ್ಮುಂದೆ ಸಿಗ್ನಲ್ ಇಲ್ಲದೆ ಸಿಲ್ಕ್ ಬೋರ್ಡ್ ಜಂಕ್ಷನ್ಗೆ ಪ್ರಯಾಣಿಸಲು ಅವಕಾಶ ಸಿಗಲಿದೆ.
ಈ ಡಬಲ್ ಡೆಕ್ಕರ್ ಫ್ಲೈಒವರ್ನಲ್ಲಿ ಮೆಟ್ರೋ ರೈಲು ಹಾಗೂ ವಾಹನ ಸಂಚರಿಸುತ್ತದೆ. ಕೆಳರಸ್ತೆಯಿಂದ ಡಬ್ಬಲ್ ಡೆಕ್ಕರ್‌ನ ಮೊದಲ ಫ್ಲೈಓವರ್ 8 ಮೀ. ಎತ್ತರದಲ್ಲಿದ್ದರೆ, ಮೆಟ್ರೋ ವಯಡಕ್ಟ್ 16 ಮೀ. ಎತ್ತರದಲ್ಲಿದೆ. ಇದೇ ಮೊದಲ ಬಾರಿಗೆ ನಗರದ ಫ್ಲೈಓವರ್ ಮೇಲೆ ಮೆಟ್ರೋ ಲೇನ್ ಹಾದು ಹೋಗಿದೆ. ಎಚ್‌ಎಸ್‌ಆರ್ ಲೇಔಟ್ ಹಾಗೂ ಹೊಸೂರ್ ಲೇಔಟನ್ನು ಇದರಿಂದ ಅಡ್ಡಿಯಿಲ್ಲದೆ ತಲುಬಹುದು.
ಡಬಲ್ ಡೆಕ್ಕರ್ ಫ್ಲೈ ಓವರ್ ಸಂಪರ್ಕಿಸುವ ರಸ್ತೆಗಳು: ಈ ವ್ಯವಸ್ಥೆಯಲ್ಲಿ ಇಳಿಜಾರುಗಳ ನಿರ್ಮಾಣವನ್ನು M/s ಅಫ್ಕಾನ್ಸ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್‌ನಿಂದ ಕಾರ್ಯಗತಗೊಳಿಸಲಾಗಿದೆ. ರಾಗಿಗುಡ್ಡದಿಂದ ಡಬ್ಬಲ್ ಡೆಕ್ಕರ್ ಮೇಲ್ಸೇತುವೆ ಮೂಲಕ ಬರುವ ವಾಹನ ಬಳಕೆದಾರರು ರ್‍ಯಾಂಪ್ ಎ ಮೂಲಕ ಹೊಸೂರು ರಸ್ತೆ ಮತ್ತು ಸಿ ರ್‍ಯಾಂಪ್ ಮೂಲಕ ಎಚ್ ಎಸ್ ಆರ್ ಲೇಔಟ್ ತಲುಪುತ್ತಾರೆ.
ಇದಲ್ಲದೆ, ನೆಲಮಟ್ಟದಲ್ಲಿರುವ ರ್‍ಯಾಂಪ್ ಬಿ, ಬಿಟಿಎಂ ಬದಿಯಿಂದ ಹೊರವರ್ತುಲ ರಸ್ತೆ ಮತ್ತು ಹೊಸೂರು ರಸ್ತೆಯನ್ನು ಪ್ರವೇಶಿಸಲು ರ್‍ಯಾಂಪ್ ಎ ಯನ್ನು ಸಂಪರ್ಕಿಸುತ್ತದೆ. ಹೆಚ್ ಎಸ್‌ಆರ್ ಲೇಔಟ್‌ನಿಂದ ಬರುವವರು ರ್‍ಯಾಂಪ್ ಎ ಮತ್ತು ಹಳದಿ ಮೆಟ್ರೊ ರೈಲಿನ ಮೇಲೆ ಹಾದು ಹೋಗುವ ರ್‍ಯಾಂಪ್ ಡಿ ಮೂಲಕ ರಾಗಿಗುಡ್ಡ ಕಡೆಗೆ ತಲುಪಲು ಸಾಧ್ಯವಾಗುತ್ತದೆ ಮತ್ತು ಬಿಟಿಎಂ ಲೇಔಟ್‌ಗೆ ಪ್ರವೇಶಿಸಲು ಕೆಳಗಿನ ರ್‍ಯಾಂಪ್ ಇಯೊಂದಿಗೆ ಮುಂದುವರಿಯುತ್ತದೆ.
ರ್‍ಯಾಂಪ್ ಎ ಮತ್ತು ರ್‍ಯಾಂಪ್ ಬಿ ಎರಡೂ ವಿಲೀನಗೊಳ್ಳುತ್ತಿವೆ. ಈಗಿರುವ ಮಡಿವಾಳ ಮೇಲ್ಸೇತುವೆಯ ಮೇಲೆ ಅತ್ಯಂತ ಜನನಿಬಿಡ ರಾಷ್ಟ್ರೀಯ ಹೆದ್ದಾರಿ (NH-44) ನಲ್ಲಿ ನಿರಂತರವಾಗಿ ಚಲಿಸುತ್ತಿವೆ, ಪ್ರತಿಯೊಂದೂ 31 ಮೀ ವ್ಯಾಪಿಸಿದೆ, 15.1 ಮೀ ಅಗಲವನ್ನು ಹೊಂದಿದೆ
ರಾಗಿಗುಡ್ಡದಿಂದ ಸಿಎಸ್‌ಬಿ ಜಂಕ್ಷನ್‌ವರೆಗೆ ಹಳದಿ ಮಾರ್ಗಕ್ಕಾಗಿ ರಸ್ತೆ ಮೇಲ್ಸೇತುವೆಯ ಮೊದಲ ಹಂತವನ್ನು ಈಗಾಗಲೇ ನಿರ್ಮಿಸಲಾಗಿದೆ. BMRCL ಪ್ರಕಾರ, ಎ, ಬಿ ಮತ್ತು ಸಿ ರ್‍ಯಾಂಪ್ ಗಳ ಕಾರ್ಯಾರಂಭವು ಮೇ ತಿಂಗಳೊಳಗೆ ಪೂರ್ಣಗೊಳ್ಳಬೇಕಿತ್ತು. ಡಿ ಮತ್ತು ಇ ರ್‍ಯಾಂಪ್ ಗಳು ಡಿಸೆಂಬರ್ ಒಳಗೆ ಕಾರ್ಯಾರಂಭ ಮಾಡಲಿವೆ.
Advertisement