ಬಳ್ಳಾರಿ: Muharram ಆಚರಣೆ ವೇಳೆ ದುರಂತ; ಶೆಡ್ ರೂಫ್ ಕುಸಿದು ಹಲವರಿಗೆ ಗಾಯ, Video viral

ಮೊಹರಂ ಆಚರಣೆ ವೀಕ್ಷಿಸಲು ಅಂಗಡಿಗೆ ಹಾಕಿದ್ದ ತಗಡಿನ ಶೆಡ್ ಮೇಲೆ ಹತ್ತಾರು ಮಂದಿ ನಿಂತು ವೀಕ್ಷಿಸುತ್ತಿದ್ದರು. ಈ ವೇಳೆ ಜನ ಹೆಚ್ಚಾದಂತೆ ತಗಡಿನ ಶೆಡ್ ಭಾರ ತಡೆಯಲಾರದೇ ನೋಡನೋಡುತ್ತಲೇ ಕುಸಿದಿದೆ.
Huge Mishap during Muharram celebration in Bellary
Muharram ಆಚರಣೆ ವೇಳೆ ದುರಂತ
Updated on

ಬಳ್ಳಾರಿ: ಮುಸ್ಲಿಮರ (Muslims) ಪವಿತ್ರ ಆಚರಣೆ ಮೊಹರಂ ಹಬ್ಬ (Muharram Festival)ದ ವೇಳೆ ದುರಂತವೊಂದು ಸಂಭವಿಸಿದ್ದು, ಆಚರಣೆ ವೀಕ್ಷಿಸುತ್ತಿದ್ದ ಹಲವು ಮಂದಿ ಶೆಡ್ ರೂಫ್ ಕುಸಿದು ಗಾಯಗೊಂಡಿದ್ದಾರೆ.

ಬಳ್ಳಾರಿ ಹೊರವಲಯದ ಹಳೇ ಬೈಪಾಸ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಮೊಹರಂ ಆಚರಣೆ ವೀಕ್ಷಿಸಲು ಅಂಗಡಿಗೆ ಹಾಕಿದ್ದ ತಗಡಿನ ಶೆಡ್ ಮೇಲೆ ಹತ್ತಾರು ಮಂದಿ ನಿಂತು ವೀಕ್ಷಿಸುತ್ತಿದ್ದರು.

ಈ ವೇಳೆ ಜನ ಹೆಚ್ಚಾದಂತೆ ತಗಡಿನ ಶೆಡ್ ಭಾರ ತಡೆಯಲಾರದೇ ನೋಡನೋಡುತ್ತಲೇ ಕುಸಿದಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

Huge Mishap during Muharram celebration in Bellary
ಜಮ್ಮು-ಕಾಶ್ಮೀರ: 35 ವರ್ಷಗಳಲ್ಲಿ ಇದೇ ಮೊದಲು, ಮೊಹರಂ ಮೆರವಣಿಗೆಯಲ್ಲಿ ಲೆಫ್ಟಿನೆಂಟ್ ಗವರ್ನರ್ ಭಾಗಿ

ಆಚರಣೆ ವೀಕ್ಷಿಸಲು ಶೆಡ್‌ ಮೇಲೆ ಜನರೆಲ್ಲ ಹತ್ತಿಕೊಂಡಿದ್ದು, ಅವರ ಭಾರಕ್ಕೆ ಶೆಡ್ ಏಕಾಏಕಿ ಕುಸಿದಿದೆ. ಅಷ್ಟೇ ಅಲ್ಲದೇ, ಕುಸಿದು ಕೆಳಕ್ಕೆ ಬೀಳೋ ವೇಳೆ ಜನರ ಮೇಲೆ ಬಿದ್ದಿದೆ. ಈ ವೇಳೆ ನೂರಾರು ಮಂದಿ ಒಬ್ಬರ ಮೇಲೊಬ್ಬರು ಬಿದ್ದಿದ್ದಾರೆ. ಮೇಲಿನಿಂದ ಹತ್ತಾರು ಮಂದಿ ಒಬ್ಬರ ಮೇಲೆ ಒಬ್ಬರು ಬಿದ್ದಿದ್ದು, ರೂಫ್ ಕೆಳಗಡೆಯೂ ಜನದಟ್ಟಣೆ ಇತ್ತು. ಅವರ ಮೇಲೆ ಶೆಡ್‌ ಸಮೇತ ಜನ ಬಿದ್ದಿದ್ದಾರೆ. ಘಟನೆಯಲ್ಲಿ ಹಲವರಿಗೆ ಗಾಯಗಳಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com