
ಬೆಂಗಳೂರು: ಮೈಕ್ರೋಸಾಫ್ಟ್ ನ ತಾಂತ್ರಿಕ ಸಮಸ್ಯೆಯ ಪರಿಣಾಮ ಬೆಂಗಳೂರಿನಲ್ಲಿ 26 ವಿಮಾನಗಳನ್ನು ರದ್ದುಗೊಳಿಸಲಾಗಿದೆ.
ಜಾಗತಿಕ ಮಟ್ಟದಲ್ಲಿ ಮೈಕ್ರೋಸಾಫ್ಟ್ ನ ತಾಂತ್ರಿಕ ಸಮಸ್ಯೆ ವಿಮಾನ ನಿಲ್ದಾಣಗಳು, ಬ್ಯಾಂಕಿಂಗ್ ಸೇರಿದಂತೆ ಹಲವು ಕ್ಷೇತ್ರಗಳ ಮೇಲೆ ಪರಿಣಾಮ ಉಂಟುಮಾಡಿತ್ತು.
ಮಾನವ ಚಾಲಿತ ಚೆಕ್-ಇನ್‌ಗಳು ಮತ್ತು ಬೋರ್ಡಿಂಗ್ ಪಾಸ್‌ಗಳ ವಿತರಣೆ ಹಿನ್ನೆಲೆಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1 ಹಾಗೂ 2 ರಲ್ಲಿ ಸರತಿ ಸಾಲು ನಿಧಾನಗತಿಯಲ್ಲಿತ್ತು.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಮೂಲ TNIE ಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಇಂದು ರದ್ದಾದ ಎಲ್ಲಾ ವಿಮಾನಗಳು ಇಂಡಿಗೋ ಸಂಸ್ಥೆಗೆ ಸೇರಿದೆ. ದೆಹಲಿ, ಜೈಪುರ, ಅಹಮದಾಬಾದ್, ಮುಂಬೈ, ಮಂಗಳೂರು, ಹೈದರಾಬಾದ್, ಕೋಲ್ಕತ್ತಾ ಮತ್ತು ನಾಗ್ಪುರಕ್ಕೆ ವಿಮಾನಗಳು ರದ್ದಾದವುಗಳ ಪಟ್ಟಿಯಲ್ಲಿ ಸೇರಿವೆ. ಯಾವುದೇ ಅಂತರರಾಷ್ಟ್ರೀಯ ಅಥವಾ ಸರಕು ವಿಮಾನವನ್ನು ರದ್ದುಗೊಳಿಸಲಾಗಿಲ್ಲ" ಎಂದು ತಿಳಿಸಿದೆ.
ಇಲ್ಲಿ ವಿಮಾನಗಳನ್ನು ನಿರ್ವಹಿಸುವ ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್‌ನ ವಕ್ತಾರರು ಅಧಿಕೃತ ಹೇಳಿಕೆ ನೀಡಿದ್ದು, “ನೇವಿಟೈರ್ ಡಿಪಾರ್ಚರ್ ಕಂಟ್ರೋಲ್ ಸಿಸ್ಟಮ್ (ಡಿಸಿಎಸ್) ನೊಂದಿಗೆ ಜಾಗತಿಕ ಸ್ಥಗಿತವು ಬೆಳಿಗ್ಗೆ 10:40 ರಿಂದ ಬಿಎಲ್‌ಆರ್ ಏರ್‌ಪೋರ್ಟ್ ಸೇರಿದಂತೆ ನೆಟ್‌ವರ್ಕ್‌ನಾದ್ಯಂತ ಕೆಲವು ವಿಮಾನಯಾನ ಸಂಸ್ಥೆಗಳ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರುತ್ತಿದೆ. ಜುಲೈ 19 ರಂದು. ಇಂಡಿಗೋ, ಅಕಾಸಾ, ಮತ್ತು T1 ನಲ್ಲಿನ ಸ್ಪೈಸ್‌ಜೆಟ್ ಮತ್ತು T2 ನಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ಗಳು ಪರಿಣಾಮ ಎದುರಿಸಿರುವ ವಿಮಾನಯಾನ ಸಂಸ್ಥೆಗಳಲ್ಲಿ ಸೇರಿವೆ ಎಂದು ತಿಳಿಸಿದೆ.
ಪ್ರಯಾಣಕ್ಕಾಗಿ ಟಿಕೆಟ್ ಕಾಯ್ದಿರಿಸಲು ಪದೇ ಪದೇ ಪ್ರಯತ್ನಿಸಿದವರೂ ಹಣ ತೆಗೆದುಕೊಂಡರೂ ಬುಕಿಂಗ್ ಮಾಡಲಾಗದೆ ತೊಂದರೆ ಅನುಭವಿಸಿದರು.
Advertisement