Flyers queue up outside Indigo counter in T1 to claim refunds.
ಹಣ ಮರುಪಾವತಿಗಾಗಿ ಕೌಂಟರ್ ಬಳಿ ಕಾಯುತ್ತಿರುವ ಪ್ರಯಾಣಿಕರುonline desk

Microsoft outage: ಬೆಂಗಳೂರು ವಿಮಾನ ನಿಲ್ದಾಣದಲ್ಲಿ 55 ವಿಮಾನಗಳ ರದ್ದು!

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಆಗಮಿಸುವ 25 ಹಾಗೂ ನಿರ್ಗಮಿಸುವ 28 ವಿಮಾನಗಳು ಸೇರಿದಂತೆ ಒಟ್ಟು 55 ವಿಮಾನಗಳು ರದ್ದುಗೊಂಡಿತ್ತು.
Published on

ಬೆಂಗಳೂರು: ಮೈಕ್ರೋಸಾಫ್ಟ್ ತಾಂತ್ರಿಕ ಸಮಸ್ಯೆಯಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜು.19 ರಂದು ಪ್ರಯಾಣಿಕರು ಪರದಾಡುವಂತಾಗಿತ್ತು.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಆಗಮಿಸುವ 25 ಹಾಗೂ ನಿರ್ಗಮಿಸುವ 28 ವಿಮಾನಗಳು ಸೇರಿದಂತೆ ಒಟ್ಟು 55 ವಿಮಾನಗಳು ರದ್ದುಗೊಂಡಿತ್ತು.

ಕನಿಷ್ಟ 77 ವಿಮಾನಗಳು ವಿಳಂಬಗೊಂಡಿದ್ದು, ರದ್ದುಗೊಂಡ ವಿಮಾನಗಳ ಪೈಕಿ ಬಹುತೇಕ ವಿಮಾನಗಳು ಇಂಡಿಗೋ ಸಂಸ್ಥೆಯದ್ದಾಗಿವೆ.

ರದ್ದತಿಯ ಬಗ್ಗೆ ವಿಮಾನಯಾನ ಸಂಸ್ಥೆಗಳು ವಿಮಾನಯಾನ ಮಾಡುವವರಿಗೆ ಮಾಹಿತಿ ನೀಡಲು ವಿಫಲವಾದಾಗ, ನೂರಾರು ಜನರು ಮನೆಗೆ ಮರಳಬೇಕಾಯಿತು.

ಮೈಕ್ರೋಸಾಫ್ಟ್ ವ್ಯವಸ್ಥೆ ಅಸ್ತವ್ಯಸ್ತಗೊಂಡ ಪರಿಣಾಮ ವಿಮಾನಯಾನಕ್ಕೆ ಸಿದ್ಧಗೊಂಡಿದ್ದವರ ಚೆಕ್-ಇನ್ ನ್ನು ಮಾನವಚಾಲಿತವಾಗಿ ನಿರ್ವಹಿಸಲಾಯಿತು ಮತ್ತು ಟರ್ಮಿನಲ್‌ನ ಒಳಗೆ ಕಾಗದದ ಬೋರ್ಡಿಂಗ್ ಪಾಸ್ ನೀಡುವುದರೊಂದಿಗೆ, ವಿಮಾನ ನಿಲ್ದಾಣದ ಟರ್ಮಿನಲ್ 1 ಮತ್ತು 2 ಎರಡರಲ್ಲೂ ಸರತಿ ಸಾಲುಗಳು ಬಹಳ ನಿಧಾನವಾಗಿ ಚಲಿಸಿದವು. "ತಪಾಸಣೆಗಾಗಿ ಸರತಿ ಸಾಲಿನಲ್ಲಿ ನಿಂತಿದ್ದ ಪ್ರಯಾಣಿಕರ ದಟ್ಟಣೆಯಿಂದಾಗಿ ವಿಮಾನಗಳನ್ನು ರದ್ದುಗೊಳಿಸಬೇಕಾಯಿತು" ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ. ಒಳಬರುವ ಮತ್ತು ಹೊರಹೋಗುವ ಎರಡೂ ವಿಮಾನಗಳಲ್ಲಿ ಸರಾಸರಿ 45-50 ನಿಮಿಷಗಳ ಕಾಲ ವಿಳಂಬ ಉಂಟಾಯಿತು.

Flyers queue up outside Indigo counter in T1 to claim refunds.
ಏರ್ ಲೈನ್ಸ್, ಬ್ಯಾಂಕಿಂಗ್ ಗೂ ತಟ್ಟಿದ ಮೈಕ್ರೋಸಾಫ್ಟ್ ತಾಂತ್ರಿಕ ಸಮಸ್ಯೆ!

ವಿಮಾನ ರದ್ದುಗೊಂಡ ಪರಿಣಾಮ ಹಲವು ಪ್ರಯಾಣಿಕರು ತಮ್ಮ ಹಣವನ್ನು ಮರಳಿ ಪಡೆಯುವುದಕ್ಕೆ ಕೌಂಟರ್ ಗಳ ಬಳಿ ಕಾಯುತ್ತಿದ್ದರು. ಸಿಸ್ಟಮ್ ಗಳ ಅಸಮರ್ಪಕ ಕಾರ್ಯನಿರ್ವಹಣೆಯಿಂದಾಗಿ ತಕ್ಷಣವೇ ಹಣವನ್ನು ಮರಳಿ ನೀಡಲಾಗುವುದಿಲ್ಲ ಎಂದು ಇಂಡಿಗೊ ಸಂಸ್ಥೆ ಹೇಳಿತ್ತು. ಮರುದಿನದ ವಿಮಾನಗಳ ಹಾರಾಟದ ಸ್ಥಿತಿ ತಿಳಿಯದ ಕಾರಣ ಪ್ರಯಾಣಿಕರು ತಮ್ಮ ಪ್ರಯಾಣವನ್ನು ಮರುದಿನಕ್ಕೆ ಮರುಹೊಂದಿಸಲು ಸಾಧ್ಯವಾಗಲಿಲ್ಲ ಎಂದು ಪ್ರಯಾಣಿಕರೊಬ್ಬರು ತಮ್ಮ ಸಮಸ್ಯೆಯನ್ನು ಹಂಚಿಕೊಂಡರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com