Shirur landslide: ಗಂಗಾವಳಿ ನದಿಯಲ್ಲಿ ಟ್ರಕ್ ಇರುವ ಸ್ಥಳ ಪತ್ತೆ, ರಕ್ಷಣಾ ಕಾರ್ಯಾಚರಣೆ ತೀವ್ರ

ಶಿರೂರಿನಲ್ಲಿ ಕಳೆದ ವಾರ ಸಂಭವಿಸಿದ್ದ ಭೂಕುಸಿತದಲ್ಲಿ ನಾಪತ್ತೆಯಾಗಿರುವ ಕೇರಳ ಮೂಲದ ಅರ್ಜುನ್‌ಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿರುವಂತೆಯೇ ಪಕ್ಕದ ಗಂಗಾವಳಿ ನದಿಯಲ್ಲಿ ಟ್ರಕ್ ಪತ್ತೆಯಾಗಿದೆ ಎಂದು ಕರ್ನಾಟಕ ಸರ್ಕಾರ ಬುಧವಾರ ಖಚಿತಪಡಿಸಿದೆ.
Karnataka govt confirms location of truck in Gangavali River
ಗಂಗಾವಳಿ ನದಿಯಲ್ಲಿ ಟ್ರಕ್ ಇರುವ ಸ್ಥಳ ಪತ್ತೆ
Updated on

ಶಿರೂರು: ಶಿರೂರಿನಲ್ಲಿ ಕಳೆದ ವಾರ ಸಂಭವಿಸಿದ್ದ ಭೂಕುಸಿತದಲ್ಲಿ ನಾಪತ್ತೆಯಾಗಿರುವ ಕೇರಳ ಮೂಲದ ಅರ್ಜುನ್‌ಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿರುವಂತೆಯೇ ಪಕ್ಕದ ಗಂಗಾವಳಿ ನದಿಯಲ್ಲಿ ಟ್ರಕ್ ಪತ್ತೆಯಾಗಿದೆ ಎಂದು ಕರ್ನಾಟಕ ಸರ್ಕಾರ ಬುಧವಾರ ಖಚಿತಪಡಿಸಿದೆ.

ಹೌದು.. ಶಿರೂರಿನಲ್ಲಿ ನಡೆಸುತ್ತಿರುವ ರಕ್ಷಣಾ ಕಾರ್ಯಾಚರಣೆ ನಿರ್ಣಾಯಕ ಹಂತ ತಲುಪಿದ್ದು, ನೀರಿನಲ್ಲಿ ಮುಳುಗಿರುವ ಟ್ರಕ್ ಅನ್ನು ಈಗ ಗುರುತಿಸಲಾಗಿದೆ ಮತ್ತು ಅದನ್ನು ಮೇಲಕ್ಕೆ ಎತ್ತಲು ಕಾರ್ಯಾಚರಣೆ ರೂಪಿಸಲಾಗುತ್ತಿದೆ ಎನ್ನಲಾಗಿದೆ.

Karnataka govt confirms location of truck in Gangavali River
Shirur landslide: ಭರದಿಂದ ಸಾಗಿದ ರಕ್ಷಣಾ ಕಾರ್ಯಾಚರಣೆ, ಸೇನೆಯಿಂದ ಭೂಗರ್ಭ ರಾಡಾರ್ ಬಳಕೆ

ಈ ಬಗ್ಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಎಕ್ಸ್ (ಟ್ವಿಟರ್) ನಲ್ಲಿ ಮಾಹಿತಿ ನೀಡಿದ್ದು, 'ಒಂದು ಟ್ರಕ್ ನೀರಿನಲ್ಲಿರುವುದು ಪತ್ತೆಯಾಗಿದೆ. ನೌಕಾಪಡೆಯ ಡೀಪ್ ಡೈವರ್‌ಗಳು ಶೀಘ್ರದಲ್ಲೇ ಸ್ಥಳದಲ್ಲಿ ಕಾರ್ಯಾಚರಣೆ ನಡೆಸಿ ನದಿಯಿಂದ ಮೇಲೆತ್ತಲಿದ್ದಾರೆ. ಅಂತೆಯೇ ನದಿಯಲ್ಲಿನ ಹೂಳೆತ್ತಲು ಲಾಂಗ್ ಆರ್ಮ್ ಬೂಮರ್ ಅಗೆಯುವ ಯಂತ್ರವನ್ನು ಬಳಸಲಾಗುವುದು.

ಸುಧಾರಿತ ಡ್ರೋನ್ ಆಧಾರಿತ ಇಂಟೆಲಿಜೆಂಟ್ ಅಂಡರ್‌ಗ್ರೌಂಡ್ ಬರಿಡ್ ಆಬ್ಜೆಕ್ಟ್ ಡಿಟೆಕ್ಷನ್ (Intelligent Underground Buried Object Detection system) ಸಿಸ್ಟಮ್ ಅನ್ನು ಸಹ ಹುಡುಕಾಟಕ್ಕಾಗಿ ನಿಯೋಜಿಸಲಾಗಿದೆ. ಕೋಸ್ಟ್ ಗಾರ್ಡ್ ನೀರಿನಲ್ಲಿ ನಾಪತ್ತೆಯಾದ ದೇಹಗಳಿಗಾಗಿ ಹೆಲಿಕಾಪ್ಟರ್ ಹುಡುಕಾಟ ನಡೆಸುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ನಾಸಾ-ಇಸ್ರೋ ನೆರವು

ಇನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋಯಿಂದ ಕಾರ್ಯಾಚರಣೆ ನಡೆಸುತ್ತಿರುವ ಭಾರತೀಯ ನೌಕಾಪಡೆ ಮತ್ತು ರಾಷ್ಟ್ರೀಯ ವಿಪತ್ತು ದಳ (NDRF) ಮಹತ್ವದ ನೆರವು ಸಿಕ್ಕಿದೆ. ಜಿಲ್ಲಾ ಪೊಲೀಸ್ ಮುಖ್ಯಸ್ಥ ನಾರಾಯಣ್ ಮತ್ತು ಅವರ ತಂಡದ ಸಂಘಟಿತ ಪ್ರಯತ್ನದಿಂದಾಗಿ ಟ್ರಕ್ ಇರುವ ಸ್ಥಳವನ್ನುಗುರುತಿಸಲು ಸಾಧ್ಯವಾಯಿತು.

ಈ ಬಗ್ಗೆ ಮಾತನಾಡಿರುವ ಉತ್ತರ ಕನ್ನಡದ ಎಸ್ಪಿ ನಾರಾಯಣ್ ಅವರು, "ನಾಸಾದ ಸ್ನೇಹಿತರಿಗೆ ನಾನು ವಿವರಗಳನ್ನು ಕಳುಹಿಸಿದೆ, ಅವರು ಈ ಪ್ರದೇಶದ ಚಾರ್ಟ್ ಅನ್ನು ಒದಗಿಸಿದ್ದಾರೆ. ನಾವು ಇದನ್ನು ISRO ನೊಂದಿಗೆ ಹಂಚಿಕೊಂಡಿದ್ದೇವೆ, ಈ ಚಿತ್ರಗಳನ್ನು ವಿಶ್ಲೇಷಿಸಿ ಟ್ರಕ್ ಇರುವ ಸ್ಥಳವನ್ನು ಇಸ್ರೋ ದೃಢಪಡಿಸಿತು. ನಾವು ಹೊರತೆಗೆಯಲು ಯಂತ್ರೋಪಕರಣಗಳನ್ನು ಮನವಿ ಮಾಡಲಾಗಿದೆ. ಇಲ್ಲಿ ಕೊಂಕಣ ರೈಲ್ವೆ ಸೇತುವೆ ಮತ್ತು ಗಂಗವಳ್ಳಿ ಸೇರಿ ಎರಡು ಸೇತುವೆಗಳಿದ್ದು, ಇಲ್ಲಿಗೆ ಯಂತ್ರೋಪಕರಣಗಳನ್ನು ತರಲು ಸಾಧ್ಯವಾಗುತ್ತಿಲ್ಲ. ಬೂಮ್ ಬ್ಯಾರಿಯರ್ ಮತ್ತು ಕ್ರೇನ್ ಮೂಲಕ ಅವಶೇಷಗಳನ್ನು ತೆಗೆದುಹಾಕುವ ಕಾರ್ಯಾಚರಣೆ ನಡೆಸಲಾಗುತ್ತಿದೆ" ಎಂದು ಹೇಳಿದರು.

Karnataka govt confirms location of truck in Gangavali River
Karnataka landslide: ಮತ್ತೆ ಭೂಕುಸಿತ ಭೀತಿ; ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲು ಉಳ್ಳುವರೆ ಗ್ರಾಮಸ್ಥರ ಒತ್ತಾಯ

ಅಂತೆಯೇ ನಾಸಾ, ಇಸ್ರೋ ನಿರ್ದೇಶನಗಳ ಆಧಾರದ ಮೇಲೆ, ನದಿಯಲ್ಲಿನ ಸ್ಥಳವನ್ನು ಗುರುತಿಸಲು ನಾವು ಭಾರತೀಯ ನೌಕಾಪಡೆಯಿಂದ ಹೆಲಿಕಾಪ್ಟರ್ ಗಳನ್ನು ನೀಡುವಂತೆ ವಿನಂತಿಸಿದ್ದೇವೆ. ಕಾಪ್ಟರ್ ನೆರವಿನಿಂದ ಕಾರ್ಯಾಚರಣೆ ನಡೆಸುತ್ತಿರುವ ಪ್ರದೇಶವನ್ನು ಗುರುತಿಸಲಾಗುತ್ತದೆ. ನಾವು ನಿಖರವಾದ ಸ್ಥಳದ ಕುರಿತು ಮಾಹಿತಿ ಪಡೆದ ನಂತರ, ನಾವು ಯಾವುದೇ ಮೃತದೇಹಗಳನ್ನು ಹುಡುಕುವುದನ್ನು ಮುಂದುವರಿಸುತ್ತೇವೆ ಎಂದು ಎಸ್ಪಿ ನಾರಾಯಣ್ ಹೇಳಿದ್ದಾರೆ.

ಉತ್ತರಕನ್ನಡ ಉಪ ಆಯುಕ್ತೆ ಲಕ್ಷ್ಮೀ ಪ್ರಿಯಾ ಮಾತನಾಡಿ, 'ಟ್ರಕ್ ಪತ್ತೆಯಾಗಿದೆ ಎಂದು ಖಚಿತಪಡಿಸಿದರು. ದಿನದ ಅಂತ್ಯದ ವೇಳೆಗೆ ಕಾರ್ಯಾಚರಣೆ ಬಹುತೇಕ ಪೂರ್ಣಗೊಳ್ಳುವ ಭರವಸೆ ಇದೆ. ಜಿಲ್ಲಾಡಳಿತವು ನೋಯ್ಡಾದಿಂದ ಭೂಗರ್ಭ ರಾಡಾರ್ ಯಂತ್ರವನ್ನು ವಿನಂತಿಸಲಾಗಿದೆ. ಇದೀಗ DGCA ಅನುಮತಿ ದೊರೆತ ಹಿನ್ನಲೆಯಲ್ಲಿ ರೈಲಿನ ಮೂಲಕ ತರಿಸಲಾಗುತ್ತಿದೆ. ಟ್ರಕ್‌ನ ನಿಖರವಾದ ಸ್ಥಳವನ್ನು ಖಚಿತಪಡಿಸಲು ಈ ರಾಡಾರ್ ಸಹಾಯ ಮಾಡುತ್ತದೆ. ಏಕೆಂದರೆ ಅದು ನದಿಯಲ್ಲಿ ಸುಮಾರು 40 ಅಡಿ ಆಳದಲ್ಲಿ ಹೂತುಹೋಗಿದೆ. ಪಾಲಕ್ಕಾಡ್‌ನಿಂದ ಬರುವ ರಾಡಾರ್ ತಜ್ಞರು ರಕ್ಷಣಾ ತಂಡಕ್ಕೆ ನೆರವು ನೀಡಲಿದ್ದಾರೆ ಎಂದರು.

ಇನ್ನು ಕಾರವಾರ ಶಾಸಕ ಸತೀಶ್ ಸೈಲ್ ಮತ್ತು ಮಂಜೇಶ್ವರ ಶಾಸಕ ಅಶ್ರಫ್ ಅವರು ಕಾರ್ಯಾಚರಣೆಯ ಮೇಲ್ವಿಚಾರಣೆಗೆ ಭೂಕುಸಿತ ಸ್ಥಳದಲ್ಲಿಯೇ ಇದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com