Shirur landslide: ಭರದಿಂದ ಸಾಗಿದ ರಕ್ಷಣಾ ಕಾರ್ಯಾಚರಣೆ, ಸೇನೆಯಿಂದ ಭೂಗರ್ಭ ರಾಡಾರ್ ಬಳಕೆ

ಫೆರೆಕ್ಸ್ ಲೊಕೇಟರ್ 150 ಎಂಬ ಭೂಗರ್ಭ ರಾಡಾರ್ ಯಂತ್ರವನ್ನು ಬಳಕೆ ಮಾಡುತ್ತಿದೆ. ಈ ರಾಡಾರ್ ಯಂತ್ರವು ನೆಲದೊಳಗೆ ನುಗ್ಗುವ ಸಾಮರ್ಥ್ಯವನ್ನು ಹೊಂದಿದ್ದು, ಇದರಿಂದ ಅವಲಶೇಷಗಳಡಿ ಸಿಲುಕಿರುವವರ ಕುರಿತು ಮಾಹಿತಿ ದೊರೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
Karnataka Landslides
ಶಿರೂರು ಭೂಕುಸಿತ ಪ್ರಕರಣ
Updated on

ಉತ್ತರ ಕನ್ನಡ: ಕಳೆದ ವಾರ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಭೂಕುಸಿತ ಪ್ರಕರಣದ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಕಾರ್ಯಾಚರಣೆ ನಡೆಸುತ್ತಿರುವ ಭಾರತೀಯ ಸೇನೆ ಕಾರ್ಯಾಚರಣೆಗೆ ಭೂಗರ್ಭ ರಾಡಾರ್ ಬಳಕೆ ಮಾಡುತ್ತಿದೆ.

ಈ ದುರ್ಘಟನೆಯಲ್ಲಿ ಈ ವರೆಗೂ ಮಹಿಳೆ ಸೇರಿದಂತೆ 8 ಮಂದಿಯ ಮೃತದೇಹಗಳು ಪತ್ತೆಯಾಗಿದ್ದು, ಇನ್ನೂ ಇಬ್ಬರು ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ.

ಹೀಗಾಗಿ ಸೇನೆ ಅತ್ಯಾಧುನಿಕ ಪರಿಕರಗಳ ಮೂಲಕ ಕಾರ್ಯಾಚರಣೆ ನಡೆಸುತ್ತಿದ್ದು, ಈ ಪೈಕಿ ಫೆರೆಕ್ಸ್ ಲೊಕೇಟರ್ 150 ಎಂಬ ಭೂಗರ್ಭ ರಾಡಾರ್ ಯಂತ್ರವನ್ನು ಬಳಕೆ ಮಾಡುತ್ತಿದೆ. ಈ ರಾಡಾರ್ ಯಂತ್ರವು ನೆಲದೊಳಗೆ ನುಗ್ಗುವ ಸಾಮರ್ಥ್ಯವನ್ನು ಹೊಂದಿದ್ದು, ಇದರಿಂದ ಅವಲಶೇಷಗಳಡಿ ಸಿಲುಕಿರುವವರ ಕುರಿತು ಮಾಹಿತಿ ದೊರೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

Karnataka Landslides
ಶಿರೂರು ಗುಡ್ಡಕುಸಿತ: ಮಣ್ಣು ತೆರವು ಕಾರ್ಯ ಬಹುತೇಕ ಪೂರ್ಣ, ಪತ್ತೆಯಾಗದ ಟ್ರಕ್; ಅಪರೇಷನ್‌ ಗಂಗಾವಳಿ ಶುರು

ಕಾರ್ಯಾಚರಣೆಗೆ ಮಳೆ ಅಡ್ಡಿ

ಇನ್ನು ಈ ಭಾಗದಲ್ಲಿ ಸುರಿಯುತ್ತಿರುವ ನಿರಂತರ ಮಳೆ ಸೈನಿಕರ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದ್ದು, ಸ್ಥಳೀಯ ಪೊಲೀಸರು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಸಿಬ್ಬಂದಿ, ಅಗ್ನಿಶಾಮಕದಳ ಮತ್ತು ಇತರ ಏಜೆನ್ಸಿಗಳು ಸಹ ಹರಸಾಹಸ ಪಟ್ಟು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ.

ಪ್ರಮುಖವಾಗಿ ಭಾರತೀಯ ಸೇನೆಯು ಮರಾಠ ಲೈಟ್ ಇನ್‌ಫಾಂಟ್ರಿ ರೆಜಿಮೆಂಟಲ್ ಸೆಂಟರ್ (MLIRC) ಯಿಂದ ಎರಡು ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ (HADR) ತಂಡಗಳು ಕಾರ್ಯಾಚರಣೆ ಆರಂಭಿಸಿದ್ದು, ಈ ತಂಡಗಳು ಒಬ್ಬ ಅಧಿಕಾರಿ, ಇಬ್ಬರು ಜೂನಿಯರ್ ಕಮಿಷನ್ಡ್ ಅಧಿಕಾರಿಗಳು (JCO ಗಳು), ಮತ್ತು 55 ಇತರ ಶ್ರೇಣಿಗಳನ್ನು (OR) ಒಳಗೊಂಡಿದೆ.

ರಕ್ಷಣಾ ಕಾರ್ಯಗಳನ್ನು ಮತ್ತಷ್ಟು ಬಲಪಡಿಸಲು, ಮಿಲಿಟರಿ ಇಂಜಿನಿಯರಿಂಗ್ ಕಾಲೇಜಿನ (CME) ಹೆಚ್ಚುವರಿ ತಂಡವನ್ನು ನಿನ್ನೆ ನಿಯೋಜಿಸಲಾಗಿದೆ. ಒಂದು JCO ಮತ್ತು ಎರಡು OR ಗಳನ್ನು ಒಳಗೊಂಡಿರುವ ಈ ತಂಡವು ಫೆರೆಕ್ಸ್ ಲೊಕೇಟರ್ 150 ಅನ್ನು ಹೊಂದಿದೆ, ಇದು ಶಿಲಾಖಂಡರಾಶಿಗಳ ಅಡಿಯಲ್ಲಿ ಸಿಕ್ಕಿಬಿದ್ದಿರುವ ವ್ಯಕ್ತಿಗಳನ್ನು ಪತ್ತೆಹಚ್ಚಲು ನಿರ್ಣಾಯಕ ಪಾತ್ರ ನಿರ್ವಹಿಸುತ್ತವೆ ಎನ್ನಲಾಗಿದೆ.

Karnataka Landslides
ಶಿರೂರು ಗುಡ್ಡ ಕುಸಿತ ದುರಂತ: 8 ದಿನಗಳ ಬಳಿಕ ಮಹಿಳೆ ಶವ ಪತ್ತೆ; ಮೃತರ ಸಂಖ್ಯೆ 8ಕ್ಕೆ ಏರಿಕೆ

ಭೂಕುಸಿತ ಘಟನೆಯ ದಿನದ ಇಸ್ರೋದ ಉಪಗ್ರಹ ಚಿತ್ರಗಳ ಪ್ರಕಾರ, ಗುಡ್ಡದ ಮಣ್ಣು ಅಲ್ಲಿ ನಿಂತಿದ್ದ ಟ್ರಕ್ ಗಳನ್ನು ನೀರಿಗೆ ತಳ್ಳಿರುವ ಸಾಧ್ಯತೆಯಿದೆ. ಸೇನಾ ತಂಡವು ಫೆರೆಕ್ಸ್ ಲೊಕೇಟರ್ - ಜಿಪಿಆರ್ (ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್) ವಿಶೇಷ ಸಾಧನದೊಂದಿಗೆ ಕಾರ್ಯಾಚರಣೆ ನಡೆಸುತ್ತಿದೆ. ಅಲ್ಲದೆ ತಜ್ಞರು ಗಂಗಾವಳಿ ನದಿಯೊಳಗೆ ಲೋಹದ ಕುರುಹುಗಳನ್ನು ಪತ್ತೆಹಚ್ಚಿದ್ದು ಇದು ಟ್ರಕ್ ಗಳದ್ದಾಗಿರಬಹುದು ಎಂದು ಶಂಕಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com