
ಶಿರೂರು: ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ನಾಪತ್ತೆಯಾದ ಮೂವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ನದಿಯ ದಡದಲ್ಲಿ ಈಗಾಗಲೇ ಹುಡುಕಾಟ ಮುಗಿದಿದ್ದು, ಗುರುವಾರ ರಾಡಾರ್‌ಗಳನ್ನು ಬಳಸಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಅರ್ಜುನ್ ಓಡಿಸುತ್ತಿದ್ದ ಲಾರಿಯನ್ನು ಅಂತಿಮವಾಗಿ ಟ್ರ್ಯಾಕ್ ಮಾಡಲಾಗಿದೆ.
ಜಿಲ್ಲಾಡಳಿತ ಇದೀಗ ರಕ್ಷಣಾ ಕಾರ್ಯಾಚರಣೆಗೆ ಸಜ್ಜಾಗಿದ್ದು, ಟ್ರಕ್ ಅನ್ನು ನೀರಿನಿಂದ ಹೊರತೆಗೆಯಲು ಮುಂದಾಗಿದೆ. 9 ನೇ ದಿನದಿಂದ ರಕ್ಷಣಾ ಕಾರ್ಯಾಚರಣೆಗಳು ಪ್ರಾರಂಭವಾಗಿದ್ದು, ಟ್ರಕ್ ಎಲ್ಲಿದೆ ಎಂಬ ಬಗ್ಗೆಮಾಹಿತಿ ಸಿಕ್ಕಿದೆ.
ಲಾರಿಯು ಭೂಕುಸಿತವಾದ ಸ್ಥಳದಿಂದ 60 ಮೀಟರ್ ಮತ್ತು ನದಿಯ ತಳದ ಕೆಳಗೆ 5 ಮೀಟರ್ ಆಳದಲ್ಲಿ ಹೂತು ಹೋಗಿದೆ ಎಂಬ ಬಗ್ಗೆ ನಮಗೆ ಮಾಹಿತಿ ದೊರಕಿದೆ. ಈಗ ನಾವು ಟ್ರಕ್ ಮೇಲೆತ್ತುವ ಕೆಲಸ ಮಾಡುತ್ತಿದ್ದೇವೆ ಎಂದು ಉತ್ತರ ಕನ್ನಡ ಎಸ್ಪಿ ನಾರಾಯಣ್ ತಿಳಿಸಿದ್ದಾರೆ. ಮುಳುಗು ತಜ್ಞರಿಗೆ ನೆರವಾಗುವ ವೇದಿಕೆ ನಿರ್ಮಿಸಲಾಗುವುದು.
ಉತ್ತರ ಕನ್ನಡ ಡಿಸಿ ಲಕ್ಷ್ಮಿ ಪ್ರಿಯಾ ಮಾತನಾಡಿ, ಗಂಗಾವಳಿ ನದಿಯ ನೀರಿನ ರಭಸ 8 ನಾಟ್ಸ್ ಇದೆ. ಗರಿಷ್ಠ 3 ನಾಟ್ಸ್ ನೀರಿನ ವೇಗ ಇದ್ದಾಗ ಧೈರ್ಯ ಮಾಡಬಹುದು. ಈಗ ಮುಳುಗು ತಜ್ಞರನ್ನು ಕಳಿಹಿಸಿದರೂ ಅವರು ಕೂಡ ಬದಕುಳಿಯುವುದು ಕಷ್ಟ ಎಂಬುದುವುದು ತಜ್ಞರ ಮಾತಾಗಿದೆ. ನಿನ್ನೆ ರಾತ್ರಿಯಿಡಿ ಸುರಿದ ಮಳೆಯಿಂದ ಗಂಗಾವಳಿ ನದಿಯ ರಭಸ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಲೆ ಇದೆ. ಡೈವರ್ಸ್ 6 ಗಂಟೆಗಳಿಗಿಂತ ಹೆಚ್ಚು ನದಿಯ ಪ್ರವಾಹವನ್ನು ಪರಿಶೀಲಿಸಿದರು ಮತ್ತು ಡೈವಿಂಗ್ ಮಾಡಲು ಅಸುರಕ್ಷಿತವಾಗಿದೆ ಎಂದು ತಿಳಿಸಿದ್ದಾರೆ.
ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಪ್ರಾಥಮಿಕ ವರದಿಯನ್ನು ಸಲ್ಲಿಸಿದೆ. "ಹೆಚ್ಚಿನ ಹಾನಿಯನ್ನು ತಡೆಗಟ್ಟಲು ಅವರು ಅನುಷ್ಠಾನಕ್ಕೆ 3-4 ಅಂಶಗಳ ಸಲಹೆ ನೀಡಿದ್ದಾರೆ. ವರದಿ ಸಲ್ಲಿಸಲು ಎನ್‌ಎಚ್‌ಎಐ ಪ್ರಾದೇಶಿಕ ಅಧಿಕಾರಿಯನ್ನು ಕೇಳಿದ್ದೇವೆ. ಅವರು ವರದಿಯನ್ನು ಸಲ್ಲಿಸಿದ ನಂತರ, ನಾವು NH-66 ರಸ್ತೆಯಲ್ಲಿ ಸಂಚಾರಕ್ಕೆ ಅನುಮತಿಸುತ್ತೇವೆ, ”ಎಂದು ಅವರು ಹೇಳಿದರು.
ಏತನ್ಮಧ್ಯೆ, ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ತಮಿಳುನಾಡು ಮೂಲದ ಲಾರಿ ಚಾಲಕ ಶರವಣನ್ ಮೃತದೇಹ ಪತ್ತೆಯಾಗಿದ್ದು, ಡಿಎನ್ಎ ವರದಿಯಲ್ಲಿ ಶರವಣನ್ ಮೃತ ದೇಹ ಎಂದು ತಿಳಿದುಬಂದಿದೆ. ಕಾರ್ಯಾಚರಣೆ ವೇಳೆ ಕಳೆದ ನಾಲ್ಕು ದಿನಗಳ ಹಿಂದೆ ಗಂಗೆಕೊಳದಲ್ಲಿ ಹೊಟ್ಟೆಯ ಕೆಳಭಾಗದ ದೇಹ ಮಾತ್ರ ಪತ್ತೆಯಾಗಿತ್ತು. ಮೃತ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದ್ದು, 5 ಲಕ್ಷ ರು ಪರಿಹಾರ ಹಣವನ್ನು ನೀಡಲಾಗಿದೆ.
Advertisement