
ಬೆಂಗಳೂರು: ಬೆಂಗಳೂರಿನ ಹೆಬ್ಬಾಳ-ಗೊರಗುಂಟೆಪಾಳ್ಯ ಹೊರವರ್ತುಲ ರಸ್ತೆಯ ಕುವೆಂಪು ವೃತ್ತದ ಕೆಳಸೇತುವೆಯಲ್ಲಿ ಸುಮಾರು 500 ಗ್ರಾಂ ಮೊಳೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಹಿನ್ನೆಲೆಯಲ್ಲಿ ಜಾಲಹಳ್ಳಿ ಸಂಚಾರ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಹೊಸದಾಗಿ ಕಾಣುವ ಮೊಳೆಗಳನ್ನು ಉದ್ದೇಶಪೂರ್ವಕವಾಗಿ ಎಸೆದಿರುವ ಬಗ್ಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.
ಮಹಿಳಾ ಪೊಲೀಸ್ ಪೇದೆ ಸೇರಿದಂತೆ ಇಬ್ಬರು ಸಿಬ್ಬಂದಿ ಮೊಳೆ ತೆಗೆಯುತ್ತಿರುವ ವಿಡಿಯೋ ಮತ್ತು ಫೋಟೋಗಳನ್ನು ಜಾಲಹಳ್ಳಿ ಸಂಚಾರಿ ಪೊಲೀಸರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ವಿಡಿಯೋವನ್ನು 47,600 ಜನರು ವೀಕ್ಷಿಸಿದ್ದಾರೆ.
ಹೆಚ್ಚಿನ ಬಳಕೆದಾರರು ಇದನ್ನು ಕೆಲವು ಹತ್ತಿರದ ಪಂಕ್ಚರ್ ಅಂಗಡಿಗಳಿಂದ ಉದ್ದೇಶಪೂರ್ವಕವಾಗಿ ಮಾಡಿರಬಹುದೆಂದು ಹೇಳಿದ್ದಾರೆ. ಇನ್ನು ಕೆಲವರು ಸರ್ಜಾಪುರ-ಮಾರತಹಳ್ಳಿ ರಸ್ತೆಯಲ್ಲಿ ಇದು ಸರ್ವೇಸಾಮಾನ್ಯ ಎಂದು ಆರೋಪಿಸಿದ್ದಾರೆ.
“ಶನಿವಾರ ಮಧ್ಯಾಹ್ನ, ಕೆಲವು ದಾರಿಹೋಕರು ರಸ್ತೆಯಲ್ಲಿನ ಮೊಳೆಗಳ ಬಗ್ಗೆ ಜಂಕ್ಷನ್ ಅನ್ನು ನಿರ್ವಹಿಸುವ ನಮ್ಮ ಟ್ರಾಫಿಕ್ ಸಿಬ್ಬಂದಿಗೆ ಮಾಹಿತಿ ನೀಡಿದರು. ರಸ್ತೆಯ ಮೂಲೆಯಲ್ಲಿ ಮೊಳೆಗಳು ಪತ್ತೆಯಾಗಿವೆ. ಸದ್ಯಕ್ಕೆ ಇದು ಉದ್ದೇಶಪೂರ್ವಕ ಕೃತ್ಯದಂತೆ ಕಾಣುತ್ತಿಲ್ಲ. ಸುತ್ತಮುತ್ತ ಯಾವುದೇ ಪಂಕ್ಚರ್ ಅಂಗಡಿಗಳಿಲ್ಲ. ಇಷ್ಟು ದೊಡ್ಡ ಪ್ರಮಾಣದ ಮೊಳೆಗಳು ಪತ್ತೆಯಾಗಿರುವುದು ಇದೇ ಮೊದಲು. ನಮ್ಮ ಸಿಬ್ಬಂದಿ ಎಲ್ಲಾ ಮೊಳೆಗಳನ್ನು ಎತ್ತಿಕೊಂಡಿದ್ದರಿಂದ ಯಾವುದೇ ವಾಹನಗಳು ಪಂಕ್ಚರ್ ಆಗಿಲ್ಲ ಮತ್ತು ಟ್ರಾಫಿಕ್ ಜಾಮ್ ಉಂಟಾಗಿದೆ ಎಂದು ಜಾಲಹಳ್ಳಿ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸರು ಈ ಘಟನೆಯ ಹಿಂದೆ ಯಾರಾದರೂ ಕಂಡುಬಂದರೆ, ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
Advertisement