
ಬೆಂಗಳೂರು: ಹತ್ತು ಕೋಟಿ ರೂಪಾಯಿ ಮೌಲ್ಯದ ಮಾದಕ ದ್ರವ್ಯ ಸೇವಿಸಿದ್ದ ನೈಜೀರಿಯಾದ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ ಎಂದು ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಜುಲೈ 26 ರಂದು ದುಬೈನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮಹಿಳೆಯ ಬಗ್ಗೆ ಡಿಆರ್‌ಐ ಸಿಬ್ಬಂದಿಗೆ ನಿರ್ದಿಷ್ಟ ಮಾಹಿತಿ ಇತ್ತು, ಆಕೆಯ ಬಳಿ ಡ್ರಗ್ಸ್ ಇರುವುದಾಗಿ ಗುಪ್ತಚರ ಮಾಹಿತಿ ಇತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಕೆಯನ್ನು ತಡೆದು ನಿರಂತರ ವಿಚಾರಣೆಗೊಳಪಡಿಸಿದಾಗ ಕ್ಯಾಪ್ಸುಲ್‌ಗಳ ರೂಪದಲ್ಲಿ ನಿಷಿದ್ಧ ಪದಾರ್ಥವನ್ನು ಸೇವಿಸಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ಡಿಆರ್‌ಐ ಮೂಲಗಳು ತಿಳಿಸಿವೆ.
ವೈದ್ಯಕೀಯ ಪರೀಕ್ಷೆ ನಡೆಸಲು ಮತ್ತು ಆಕೆಯ ಹೊಟ್ಟೆಯಿಂದ ಕ್ಯಾಪ್ಸುಲ್‌ಗಳನ್ನು ಹೊರತೆಗೆಯಲು ಅನುಮತಿಗಾಗಿ ಆಕೆಯನ್ನು ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟಾನ್ಸಸ್ (ಎನ್‌ಡಿಪಿಎಸ್) ಪ್ರಕರಣಗಳ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ಆಕೆಯ ದೇಹದಿಂದ ಮಾದಕ ದ್ರವ್ಯಗಳನ್ನು ಒಳಗೊಂಡ ಒಟ್ಟು 57 ಕ್ಯಾಪ್ಸುಲ್‌ಗಳನ್ನು ತೆಗೆಯಲಾಗಿದೆ.
ಕ್ಯಾಪ್ಸುಲ್‌ಗಳ ಪರೀಕ್ಷೆ ಮಾಡಿದಾಗ ಅದಲ್ಲಿ ಕೊಕೇನ್ ಪಾಸಿಟಿವ್ ಬಂದಿರವುದು ದೃಢಪಟ್ಟಿದೆ. 10 ಕೋಟಿ ಮೌಲ್ಯದ ಅಂದಾಜು ಒಂದು ಕೆಜಿಯ 57 ಕ್ಯಾಪ್ಸೂಲ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು. ಆಕೆಯನ್ನು ಬಂಧಿಸಲಾಗಿದೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಅಧಿಕಾರಿಯೊಬ್ಬರ ತಿಳಿಸಿದ್ದಾರೆ.
ಜುಲೈ 18 ರಂದು 3.6 ಕೋಟಿ ಮೌಲ್ಯದ 3.6 ಕೆಜಿ ತೂಕದ ಹೈಡ್ರೋಪೋನಿಕ್ ವೀಡ್ (ಗಾಂಜಾ) ನೊಂದಿಗೆ KIA ನಲ್ಲಿ ಭಾರತೀಯ ಪ್ರಯಾಣಿಕರನ್ನು NDPS ಕಾಯ್ದೆಯಡಿ DRI ಅಧಿಕಾರಿಗಳು ಜುಲೈ 18 ರಂದು ಬಂಧಿಸಿದ್ದರು.
Advertisement