
ಬೆಂಗಳೂರು: ಕ್ವಾರಿಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ನೀರು ಪಾಲಾಗಿರುವ ದಾರುಣ ಘಟನೆ ಬೆಂಗಳೂರು ಉತ್ತರ ತಾಲೂಕಿನ ಬೆಟ್ಟಹಲಸೂರಿನಲ್ಲಿ ನಡೆದಿದೆ.
ಮೃತರನ್ನು ಬೆಂಗಳೂರು ಮೂಲದ ಮೊಹಮದ್(18) ಮತ್ತು ಉಹೇಸ್ ಖಾನ್(18) ಎಂದು ಗುರುತಿಸಲಾಗಿದೆ.
ಆರು ಜನ ಸ್ನೇಹಿತರು ಶುಕ್ರವಾರ ಲಾಂಗ್ ಡ್ರೈವ್ ಟ್ರಿಪ್ ಅಂತ ಬೆಟ್ಟಹಲಸೂರಿಗೆ ಹೋಗಿದ್ದರು. ಈ ವೇಳೆ ಮೂವರು ನೀರಿನಲ್ಲಿ ಈಜಲು ತೆರಳಿದ್ದರು. ಕ್ವಾರಿಯ ನೀರಿನಲ್ಲಿ ಈಜಲಾಗದೆ ಮೂವರು ಮುಳಗಲು ಆರಂಭಿಸಿದರು. ಮುಳುಗುವುದನ್ನು ಕಂಡ ಇತರೆ ಸ್ನೇಹಿತರು, ಮೂವರಲ್ಲಿ ಒರ್ವನನ್ನು ರಕ್ಷಿಸಿದ್ದಾರೆ. ಮತ್ತಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಅಗ್ನಿಶಾಮಕ ದಳದ ಸಿಬ್ಬಂದಿ ನಿನ್ನೆ ಸಂಜೆ ಒರ್ವನ ಶವ ಹೊರ ತೆಗೆದಿದ್ದಾರೆ. ಇಂದು ಮತ್ತೊಬ್ಬನ ಮೃತ ದೇಹ ಸಿಕ್ಕಿದೆ. ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Advertisement