ಅಪ್ಪ ನೀವೇ ನನ್ನ ಹೀರೋ: 'ಫಾದರ್ಸ್ ಡೇ' ಹಿನ್ನೆಲೆ ದರ್ಶನ್​ ನೆನೆದು ಮಗ ವಿನೀಶ್​ ಭಾವುಕ ಪೋಸ್ಟ್​!

ಇಂದು ವಿಶ್ವ ಅಪ್ಪಂದಿರ ದಿನ. ಈ ಹಿನ್ನೆಲೆಯಲ್ಲಿ ಪೊಲೀಸ್ ಕಸ್ಟಡಿಯಲ್ಲಿರುವ ತಮ್ಮ ತಂದೆ ದರ್ಶನ್ ನನ್ನು ನೆನೆದಿರುವ ಪುತ್ರ ವಿನೀಶ್ ಭಾವುಕ ಪೋಸ್ಟ್ ಮಾಡಿದ್ದಾರೆ.
ವಿನೀಶ್ ದರ್ಶನ್
ವಿನೀಶ್ ದರ್ಶನ್
Updated on

ಬೆಂಗಳೂರು: ಇಂದು ವಿಶ್ವ ಅಪ್ಪಂದಿರ ದಿನ. ಈ ಹಿನ್ನೆಲೆಯಲ್ಲಿ ಪೊಲೀಸ್ ಕಸ್ಟಡಿಯಲ್ಲಿರುವ ತಮ್ಮ ತಂದೆ ದರ್ಶನ್ ನನ್ನು ನೆನೆದಿರುವ ಪುತ್ರ ವಿನೀಶ್ ಭಾವುಕ ಪೋಸ್ಟ್ ಮಾಡಿದ್ದಾರೆ.

ಇನ್​​ಸ್ಟಾಗ್ರಾಂನಲ್ಲಿ ದರ್ಶನ್​ ಮತ್ತು ತಾಯಿ ವಿಜಯಲಕ್ಷ್ಮೀ ಜೊತೆಗಿನ ಫೋಟೋವನ್ನು ವಿನೀಶ್ ಹಂಚಿಕೊಂಡು, ಶುಭಾಶಯ ಕೋರಿದ್ದಾರೆ.

ವಿನೀಶ್ ದರ್ಶನ್
ರೇಣುಕಾಸ್ವಾಮಿ ಕೊಲೆ ಪ್ರಕರಣ; ದರ್ಶನ್ ಮತ್ತು ಗ್ಯಾಂಗ್ ಮತ್ತೆ ಐದು ದಿನ ಪೊಲೀಸ್ ವಶಕ್ಕೆ

ನಿಮ್ಮನ್ನ ನಾನು ಮಿಸ್ ಮಾಡಿಕೊಳುತ್ತಿದ್ದೇನೆ. ನಿಮ್ಮನ್ನ ನಾನು ಅಪಾರವಾಗಿ ಪ್ರೀತಿಸುತ್ತಿದ್ದೇನೆ. ಯಾವತ್ತಿಗೂ ನೀವೇ ನನ್ನ ಹೀರೋ ಅಪ್ಪ’ ಎಂದು ವಿನೀಶ್ ಬರೆದಿದ್ದಾರೆ.

ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಆ್ಯಂಡ್​ ಗ್ಯಾಂಗ್​ ಅರೆಸ್ಟ್​ ಆಗಿದೆ. ನಿನ್ನೆ ಕೋರ್ಟ್​ಗೆ ದರ್ಶನ್​ ಅವರನ್ನು ಹಾಜರುಪಡಿಸಲಾಗಿತ್ತು. ಆದರೆ ಕೋರ್ಟ್​ ಮತ್ತೆ 5 ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ನೀಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com