ರೇಣುಕಾಸ್ವಾಮಿ ನನಗೂ ಅಶ್ಲೀಲ ಮೆಸೇಜ್ ಕಳುಹಿಸಿದ್ದ, ಬ್ಲಾಕ್ ಮಾಡಿದ್ದೆ: Actress Chitral Rangaswamy

ನಟ ದರ್ಶನ್ ಅಂಡ್ ಗ್ಯಾಂಗ್ ನಿಂದ ಕೊಲೆಗೀಡಾದ ರೇಣುಕಾಸ್ವಾಮಿ ತಮಗೂ ಅಶ್ಲೀಲ ಮೆಸೇಜ್ ಕಳುಹಿಸಿದ್ದ.. ಹೀಗಾಗಿ ನಾನೂ ಕೂಡ ಆತನನ್ನು ಬ್ಲಾಕ್ ಮಾಡಿದ್ದೆ ಎಂದು ನಟಿ ಚಿತ್ರಾಲ್ ರಂಗಸ್ವಾಮಿ ಹೇಳಿದ್ದಾರೆ.
Actress Chitral Rangaswamy
ನಟಿ ಚಿತ್ರಾಲ್ ರಂಗಸ್ವಾಮಿ

ಬೆಂಗಳೂರು: ನಟ ದರ್ಶನ್ ಅಂಡ್ ಗ್ಯಾಂಗ್ ನಿಂದ ಕೊಲೆಗೀಡಾದ ರೇಣುಕಾಸ್ವಾಮಿ ತಮಗೂ ಅಶ್ಲೀಲ ಮೆಸೇಜ್ ಕಳುಹಿಸಿದ್ದ.. ಹೀಗಾಗಿ ನಾನೂ ಕೂಡ ಆತನನ್ನು ಬ್ಲಾಕ್ ಮಾಡಿದ್ದೆ ಎಂದು ನಟಿ ಚಿತ್ರಾಲ್ ರಂಗಸ್ವಾಮಿ ಹೇಳಿದ್ದಾರೆ.

ನಟಿ ಪವಿತ್ರಾಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ ಆರೋಪದ ಮೇರೆಗೆ ನಟ ದರ್ಶನ್ ಅಂಡ್ ಗ್ಯಾಂಗ್ ನಿಂದ ಕೊಲೆಗೀಡಾದ ರೇಣುಕಾಸ್ವಾಮಿ ತಮಗೂ ಅಶ್ಲೀಲ ಸಂದೇಶ ರವಾನಿಸಿದ್ದ ಎಂದು ನಟಿ ಚಿತ್ರಾಲ್ ರಂಗಸ್ವಾಮಿ ಹೇಳಿದ್ದಾರೆ.

ಈ ಕುರಿತು ಲೈವ್ ವಿಡಿಯೋ ಮಾಡಿರುವ ನಟಿ ಚಿತ್ರಾಲ್ ರಂಗಸ್ವಾಮಿ, ರೇಣುಕಾಸ್ವಾಮಿ ಫೇಕ್ ಅಕೌಂಟ್‌ಗಳ ಮೂಲಕ ಸಾಕಷ್ಟು ಜನರಿಗೆ ಇದೇ ರೀತಿ ಕೆಟ್ಟ ಮೆಸೇಜ್ ಕಳುಹಿಸುತ್ತಿದ್ದ. ತಮಗೂ ಈ ಅಕೌಂಟ್‌ನಿಂದ ಕೆಟ್ಟ ಮೆಸೇಜ್ ಬಂದಿತ್ತು. ಹೀಗಾಗಿ ನಾನು ಆ ಖಾತೆಗಳನ್ನು ಬ್ಲಾಕ್ ಮಾಡಿದ್ದೆ ಎಂದು ಹೇಳಿದ್ದಾರೆ.

Actress Chitral Rangaswamy
ಜೈಲು ಪಾಲಾದ “ದಾಸ”: ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಕೈದಿ ನಂಬರ್ 6109, ವಿಶೇಷ ಬ್ಯಾರಕ್ ವ್ಯವಸ್ಥೆ!

ʻʻಎಲ್ಲರಿಗೂ ನಮಸ್ಕಾರ, ಪಸ್ತುತ ಏನು ನಡೆಯುತ್ತಿದೆ ಎಂದು ಎಲ್ಲರಿಗೂ ಗೊತ್ತಿದೆ. ಈ ಕೊಲೆ ವಿಚಾರವಾಗಿ ಎಲ್ಲರಿಗೂ ಡಿಸ್ಟರ್ಬ್‌ ಕೂಡ ಆಗಿದೆ. ಇಲ್ಲಿ ಯಾರಿಗೂ ನಾನು ಸಪೋರ್ಟ್‌ ಮಾಡಲು ಬಂದಿಲ್ಲ. ದೇವರು ರೇಣುಕಾ ಸ್ವಾಮಿ ಕುಟುಂಬಕ್ಕೆ ಶಕ್ತಿ ಕೊಡಲಿ. ಆದರೆ ರೇಣುಕಾ ಸ್ವಾಮಿ ಅವರು ಈ ತರ ಹಲವರಿಗೆ ಮೆಸೆಜ್ ಕಳುಹಿಸಿದ್ದರು. ಈ ಬಗ್ಗೆ ಮಾರ್ಚ್‌ನಲ್ಲಿ ಪೊಲೀಸ್‌ ಸ್ಟೇಷನ್‌ನಲ್ಲಿ ಕಂಪ್ಲೇಟ್‌ ಕೂಡ ಆಗಿದೆ.

ಅವರ ಅಕೌಂಟ್‌ ಈ ರೀತಿ ಗೌತಮ್‌ ಅನ್ನುವ ಹೆಸರಲ್ಲಿ ಇತ್ತು. ಈ ಅಕೌಂಟ್ ಇಂದ ಅದೇ ರೀತಿಯ ಕೆಟ್ಟ ಮೆಸೇಜ್‌ಗಳನ್ನು ಇನ್ನು ಸಾಕಷ್ಟು ಜನರಿಗೆ ಕಳುಹಿಸಿದ್ದರಂತೆ. ನನಗೆ ಅಚ್ಚರಿ ಆಯಿತು. ನಾನು ಅದರ ಸ್ಕ್ರೀನ್‌ ಶಾಟ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡರೆ ತಪ್ಪಾಗುತ್ತದೆ. ಹಾಗಾಗಿ ಹಾಕಲಿಲ್ಲ ಎಂದು ಹೇಳಿದ್ದಾರೆ.

ಅಂತೆಯೇ ನನಗೆ ಆ ರೀತಿ ಮರ್ಮಾಂಗದ ಚಿತ್ರ ಆಗಲಿ, ಬೆತ್ತಲೆ ಫೋಟೊ ಆಗಲಿ ಅಥವಾ ಹಸ್ತ ಮೈಥುನ ವೀಡಿಯೋ ಆಗಲಿ ಬಂದರೆ ನಾನು ಕೂಡಲೇ ಆ ಅಕೌಂಟ್ ಬ್ಲಾಕ್ ಮಾಡ್ತೀನಿ. ನನ್ನ ಇನ್‌ಸ್ಟಾಗ್ರಾಮ್ ಬ್ಲಾಕ್ ಲಿಸ್ಟ್ ಅಲ್ಲಿ ನೋಡಿದಾಗ ಈ ಅಕೌಂಟ್ ಇದೆ. ಇಷ್ಟು ದಿನ ನಾನು ಸುಮ್ಮನಿದ್ದೆ.

ಆದರೆ ಇದನ್ನು ನೋಡಿದ ಮೇಲೆ ಹೇಳಬೇಕು ಎಂದು ಮುಂದೆ ಬಂದೆ. ಭಯ ಅನ್ನಿಸಿತು. ಬೇಸರ ಆಗುತ್ತದೆ. ಅಂತಹ ಸುಂದರ ಹೆಂಡತಿ ಇರುವಾಗ ಈ ರೀತಿ ಸರೀನಾ? ಛೀ ಎನಿಸುತ್ತದೆ. ನನಗೆ ಪ್ರತಿದಿನ ಇಂತಹ ಸಾಕಷ್ಟು ಕೆಟ್ಟ ಮೆಸೇಜ್, ಟ್ರೋಲ್ ಎದುರಾಗುತ್ತಿರುತ್ತದೆ” ಎಂದು ಚಿತ್ರಾಲ್ ವಿವರಿಸಿದ್ದಾರೆ.

ಚಿತ್ರಲ್‌ ರಂಗಸ್ವಾಮಿ ಕಿರುತೆರೆ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಸಿನಿಮಾಗಳಲ್ಲೂ ನಟಿಸಿದ್ದಾರೆ. ಜೊತೆಗೆ ಬಾಡಿ ಬಿಲ್ಡರ್‌ ಆಗಿಯೂ ಗುರುತಿಸಿಕೊಂಡಿದ್ದಾರೆ. 2017ರಿಂದ ಬಾಡಿ ಬಿಲ್ಡಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com